ರಾಗಿ ಖರೀದಿ ಕೇಂದ್ರ ತೆರೆಯಲು ಮೀನಮೇಷ


Team Udayavani, Jan 11, 2020, 3:00 AM IST

ragi-karidi

ಹುಳಿಯಾರು: ರಾಗಿ ಬೆಳೆಗೆ ಹೆಸರಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ದಶಕಗಳ ನಂತರ ಉತ್ತಮ ಇಳುವರಿ ಬಂದಿದ್ದು, ಆದರೆ ದಿಢೀರ್‌ ಬೆಲೆ ಕುಸಿದಿರುವುದು ರೈತರನ್ನು ಕಂಗಾಲಾಗಿಸಿದ್ದು, ತಕ್ಷಣ ರಾಗಿ ಖರೀದಿ ಕೇಂದ್ರ ತೆರೆಯಬೇಕಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ 2018-19ನೇ ಸಾಲಿನಲ್ಲಿ 26,020 ಹೆಕ್ಟೇರ್‌ ರಾಗಿ ಬಿತ್ತನೆ ಗುರಿಯಲ್ಲಿ 19,700 ಹೆಕ್ಟೇರ್‌ ಪ್ರಗತಿ ಸಾಧಿಸಲಾಗಿದೆ. 1 ಹೆಕ್ಟೇರ್‌ಗೆ 20 ಕ್ವಿಂಟಲ್‌ ಇಳುವರಿ ಬಂದಿದೆಯಾದರೂ ತಾಲೂಕಿನಲ್ಲಿ 3.5 ಲಕ್ಷಕ್ಕೂ ಹೆಚ್ಚು ಕ್ವಿಂಟಲ್‌ ಇಳುವರಿ ಬಂದಿರಬಹುದೆಂದು ಅಂದಾಜಿಸಲಾಗಿದೆ.

ಸುಗ್ಗಿ ಕಾಲ ಆರಂಭಕ್ಕೂ ಮುನ್ನ ಕ್ವಿಂಟಲ್‌ ರಾಗಿಗೆ ಮೂರ್‍ನಾಲ್ಕು ಸಾವಿರ ಇದ್ದ ಬೆಲೆ ರಾಗಿ ಕೂಯ್ಲು ಆರಂಭವಾದ ತಕ್ಷಣ ದಿಢೀರ್‌ 2 ಸಾವಿರ ರೂ. ಆಸುಪಾಸಿಗೆ ಕುಸಿದಿದೆ. ಅವಕ ಹೆಚ್ಚಾಗಿರುವ ಜೊತೆಗೆ ರಾಗಿ ತೆನೆ ಮಳೆಗೆ ಸಿಲುಕಿ ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೆಂಪು ರಾಗಿ ರಫ್ತು ಆಗುತ್ತಿದ್ದ ತಮಿಳುನಾಡು, ಕೇರಳ, ಮಹರಾಷ್ಟ್ರ ರಾಜ್ಯಗಳಲ್ಲಿ ಬೇಡಿಕೆ ಕುಸಿತದಿಂದ ಬೆಲೆ ಕಡಿಮೆಯಾಗಿದೆ ಎನ್ನುತ್ತಾರೆ ಹುಳಿಯಾರಿನ ರಾಗಿ ವರ್ತಕ ಎಲ್‌.ಆರ್‌.ಬಾಲಾಜಿ.

ಕಳೆದ 7-8 ವರ್ಷಗಳಿಂದ ಬಿತ್ತಿದ್ದ ರಾಗಿ ಕೈ ಸೇರದೆ ನಷ್ಟ ಅನುಭವಿಸಿದ್ದ ರೈತರಿಗೆ ಸರ್ಕಾರ 3200 ರೂ. ಬೆಂಬಲ ಬೆಲೆ ಘೋಷಿಸಿತ್ತು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದರೂ ಇನ್ನೂ ಖರೀದಿ ಕೇಂದ್ರ ಆರಂಭಿಸದಿದ್ದರಿಂದ ಹಣದ ಅಗತ್ಯ ಇರುವ ರೈತರು ಸಿಗುವ ಬೆಲೆಗೆ ರಾಗಿ ಮಾರುತ್ತಿದ್ದಾರೆ. ಒಂದು ಕ್ವಿಂಟಲ್‌ ರಾಗಿ ಬೆಳೆಯಲು ಕನಿಷ್ಠ 2 ಸಾವಿರ ರೂ. ಖರ್ಚಾಗುತ್ತಿದ್ದು, ಅದಕ್ಕಿಂತಲೂ ಕಡಿಮೆ ಬೆಲೆ ಮಾರುಕಟ್ಟೆಯಲ್ಲಿದೆ.

ರೈತನ ಗೋಳು ಕೇಳುವವರೂ ಇಲ್ಲ. ರಾಗಿ ಕೊಯ್ಲು ಆರಂಭದ ದಿನದಲ್ಲೇ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೆ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಪಾತಾಳ ಸೇರುತ್ತಿರಲಿಲ್ಲ. ಆದರೆ ಸರ್ಕಾರದ ಈ ನಿರ್ಲಕ್ಷ್ಯದಿಂದ ವರ್ತಕರಿಗೆ ಲಾಭವಾಗುತ್ತಿದೆ. ಹಬ್ಬ, ಮದುವೆ, ವಿದ್ಯಾಭ್ಯಾಸ ಎಂದು ರೈತ ಬೆಳೆದ ರಾಗಿಯನ್ನೆಲ್ಲಾ ಮಾರುವ ಮುಂಚೆ ಖರೀದಿ ಕೇಂದ್ರ ತೆರೆಯುವ ಅಗತ್ಯವಿದೆ.

ಬೆಂಬಲ ಬೆಲೆಗಿಂತ ಮಾರುಕಟ್ಟೆ ಬೆಲೆ ಕಡಿಮೆಯಾದ ತಕ್ಷಣ ನಫೆಡ್‌ ಕೇಂದ್ರ ತೆರೆಯಬೇಕು. ಆದರೆ 2 ತಿಂಗಳಿಂದ 2 ಸಾವಿರ ಆಸುಪಾಸಿಗೆ ರಾಗಿ ಬೆಲೆ ಮಾರುಕಟ್ಟೆಯಲ್ಲಿದ್ದರೂ ಸರ್ಕಾರ ಖರೀದಿ ಕೇಂದ್ರ ತೆರೆಯುತ್ತಿಲ್ಲ. ರೈತ ತನ್ನಲ್ಲಿದ್ದ ರಾಗಿಯನ್ನೆಲ್ಲಾ ಮಾರುವ ಮುಂಚೆ ಖರೀದಿ ಕೇಂದ್ರ ತೆರೆದರೆ ರೈತನ ನೆರವಾಗುತ್ತದೆ.
-ಕೆಂಕೆರೆ ಸತೀಶ್‌, ರಾಜ್ಯ ಉಪಾಧ್ಯಕ್ಷ, ರೈತ ಸಂಘ

ಸರ್ಕಾರ ಜಿಲ್ಲಾದ್ಯಂತ ರಾಗಿ ಖರೀದಿ ಕೇಂದ್ರ ತೆರೆಯಲು ನಿರ್ಧರಿಸಿದ್ದು, ಸೋಮವಾರ ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರಿನಲ್ಲಿ ರಾಗಿ ಮಾರಾಟಗಾರರ ನೋಂದಣಿ ಆರಂಭವಾಗಲಿದ್ದು, ಎಪಿಎಂಸಿ ಆವರಣದಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಆದರೆ ಖರೀದಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಗೋದಾಮು, ಟ್ರಾನ್ಸ್‌ಪೊರ್ಟ್‌, ಹಮಾಲಿಗಳ ಟೆಂಡರ್‌ ಪ್ರಕ್ರಿಯೆ ಇನ್ನಷ್ಟೇ ನಡೆಸಬೇಕಿದೆ. ಇದು ಮುಗಿದ ನಂತರ ಖರೀದಿ ಆರಂಭಿಸಲಾಗುವುದು.
-ಲಕ್ಷ್ಮೀನರಸಿಂಹಯ್ಯ, ರಾಗಿ ಖರೀದಿ ಅಧಿಕಾರಿ, ಹುಳಿಯಾರು

ಟಾಪ್ ನ್ಯೂಸ್

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

14-uv-fusion

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ

R B Thimmapur reacts to Revanna family case

Revanna Case; ಮಾನಗೇಡಿ ಕೆಲಸ ಮಾಡಿ ಅಂತ ನಾವು ಹೇಳಿದ್ವಾ?: ಸಚಿವ ತಿಮ್ಮಾಪುರ ಪ್ರಶ್ನೆ

13-uv-fusion

Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

police

Kunigal;ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: ಏಳು ಮಂದಿ ಬಂಧನ

PDOಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಬಿ.ಸುರೇಶ್ ಆಗ್ರಹ

PDOಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಬಿ.ಸುರೇಶ್ ಆಗ್ರಹ

Kunigal ಶ್ರೀ ಕ್ಷೇತ್ರ ಎಡೆಯೂರು ದೇವಾಲಯದ ಆನೆ ಗಂಗಾ ಇನ್ನಿಲ್ಲ!

Kunigal ಶ್ರೀ ಕ್ಷೇತ್ರ ಎಡೆಯೂರು ದೇವಾಲಯದ ಆನೆ ಗಂಗಾ ಇನ್ನಿಲ್ಲ!

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

17-uv-fusion

UV Fusion: ಐ (i) ಅಂದ್ರೆ?

16-uv-fusion

Life: ಬದುಕು ಕಟ್ಟಿಕೊಳ್ಳುವುದೇ ಸಾಧನೆಯೇ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.