ಚರಂಡಿ ಸಮಸ್ಯೆ ಪರಿಹಾರಕ್ಕೆ ಆಗ್ರಹ

Team Udayavani, May 11, 2019, 12:28 PM IST

t-4

ತುಮಕೂರು: ನಗರ 35ನೇ ವಾರ್ಡ್‌ನ ಸಿದ್ದರಾಮೇಶ್ವರ ಬಡಾವಣೆಯ ಸಂಕ್ರಾತಿ ಸ್ಟೋರ್‌ ಬಳಿ ಉಂಟಾಗಿರುವ ಚರಂಡಿ ಸಮಸ್ಯೆಯನ್ನು ತುಮಕೂರು ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಸ್ಥಳೀಯ ನಾಗರಿಕ ರೊಂದಿಗೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಸ್ಥಳೀಯ ನಾಗರಿಕರು, ತುಮಕೂರು ತಾಲೂಕು ಕಸಬ ಹೋಬಳಿ ಶೆಟ್ಟಿಹಳ್ಳಿ ಗ್ರಾಮದ ಸರ್ವೆ.ನಂ. 66,69 ಹಾಗೂ 74ರಲ್ಲಿ ಕಂದಾಯ ದಾಖಲೆ ಮತ್ತು ಸರ್ವೆ ದಾಖಲೆಗಳಲ್ಲಿ ಸರ್ಕಾರಿ ಖರಾಬು ಇದೆ. ನೈಸರ್ಗಿಕ ಹಳ್ಳ ಬಹಳ ವರ್ಷ ಗಳಿಂದಲೂ ಹರಿದು ಶೆಟ್ಟಿಹಳ್ಳಿ ಕೆರೆಯನ್ನು ಸೇರುತ್ತಿತ್ತು. ತುಮಕೂರು ನಗರ ಬೆಳೆದಂತೆ ಈ ಸುತ್ತಮುತ್ತಲ್ಲಿನ ಪ್ರದೇಶ ವಸತಿ ಪ್ರದೇಶ ವಾಗಿ ಮಾರ್ಪಡಾಗಿದೆ ಎಂದು ತಿಳಿಸಿದರು.

ಹಳ್ಳ ಒತ್ತುವರಿ: ಪ್ರಸ್ತುತ ತುಮಕೂರು ನಗರದ ಬಟವಾಡಿಯ ಸೆಂಟ್ ಮೇರಿಸ್‌ ಶಾಲೆ ಪ್ರದೇಶ, ಮಹಾಲಕ್ಷ್ಮೀ ಬಡಾವಣೆ, ಸಿದ್ದರಾಮೇಶ್ವರ ಬಡಾವಣೆ, ಬಡ್ಡಿಹಳ್ಳಿ, ಮಂಜುನಾಥ ನಗರ ಪ್ರದೇಶದ ವಾಸದ ಮನೆಯ ಚರಂಡಿ ನೀರು ಹಾಗೂ ಮಳೆ ನೀರು ನೈಸರ್ಗಿಕ ಹಳ್ಳದ ಮುಖಾಂತರ ಶೆಟ್ಟಿ ಹಳ್ಳಿ ಕೆರೆಯನ್ನು ಸೇರುತ್ತಿತ್ತು. ಆದರೆ, ಸರ್ವೆ ನಂಬರ್‌ 66,69, 74 ಮತ್ತು ಇದ್ದ ಹಳ್ಳವನ್ನು ಒತ್ತುವರಿ ಮಾಡಿ ಮುಚ್ಚಿ ಒಂದೂವರೆ ಮೀಟರ್‌ ಆಗಲದ ಮಳೆ ನೀರಿನ ಚರಂಡಿ ನೀರನ್ನು ಪೈಪ್‌ ಕಲ್ವರ್ಟ್‌ ಮುಖಾಂತರ ನೀರಿನ ಹರಿವನ್ನು ತಿರುಗಿಸಿ, ಕೇವಲ ಒಂದೂವರೆ ಆಡಿ ಚರಂಡಿಯಲ್ಲಿ ಹರಿಯು ವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೊಳಚೆ ನೀರಿನಿಂದ ತೊಂದರೆ: ಇದ್ದರಿಂದಾಗಿ ತ್ಯಾಜ್ಯ ವಸ್ತುಗಳಿಂದ ಚರಂಡಿ ಕಟ್ಟಿಕೊಂಡು ಚರಂಡಿ ನೀರು ರಸ್ತೆಯ ಮೇಲೆ ಹರಿಯು ತ್ತಿದೆ. ಅಲ್ಪ ಪ್ರಮಾಣದ ಮಳೆಯಾದರೂ ಸಹ ಈ ಪ್ರದೇಶವು ಜಲವೃತ್ತವಾಗಿ ಸಾರ್ವ ಜನಿಕರಿಗೆ ಒಡಾಟಕ್ಕೆ ತೊಂದರೆಯಾಗುತ್ತಿದೆ. ಸದಾಕಾಲ ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಂಕ್ರಾಮಿಕ ಖಾಯಿಲೆಗಳಿಗೆ ಕಾರಣವಾಗಿರುತ್ತದೆ. ಈಗ ಮಳೆಗಾಲ ಪ್ರಾರಂಭವಾಗುವುದರಿಂದ ಈ ಸಮಸ್ಯೆಯು ಪುನಾರವರ್ತನೆಗೊಂಡು ಸಾರ್ವಜನಿಕರಿಗೆ ಪದೇ ಪದೆ ತೊಂದರೆ ಯಾಗುವ ಸಂಭವವಿದೆ ಎಂದು ಹೇಳಿದರು.

ಶಾಶತ್ವ ಪರಿಹಾರಕ್ಕೆ ಕ್ರಮ: ಚರಂಡಿ ಸಮಸ್ಯೆ ಯನ್ನು ಶಾಶತ್ವವಾಗಿ ಬಗೆಹರಿಸಲು ಒತ್ತುವರಿ ಯಾಗಿರುವ ಹಳ್ಳದ ಪ್ರದೇಶವನ್ನು ಭೂ ಮಾಪನ ಇಲಾಖೆಯಿಂದ ಆಳತೆ ಕಾರ್ಯ ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಿ, ಈ ಪ್ರದೇಶಗಳ ನೀರು ಸಾರಗವಾಗಿ ಹರಿ ಯುವಂತೆ ಮಾಡಲಾಗುವುದು. ಮಳೆ ನೀರಿನ ಚರಂಡಿ, ಸೆಡಿಮೆಂಟೆಷನ್‌ ಟ್ಯಾಂಕ್‌ನ್ನು ನಿರ್ಮಿಸಿ ಶುದ್ಧ ನೀರು ಶೆಟ್ಟಿಹಳ್ಳಿ ಕೆರೆಗೆ ಹರಿಯುವಂತೆ ಮಾಡಲು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್‌ ತಿಳಿಸಿದರು.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Koratagere: ಪಟ್ಟಣಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು

9-koratagere

Koratagere: ಜೂ.9 ರಂದು ಉಚಿತ ಸಾಮೂಹಿಕ ವಿವಾಹ

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.