ನಾಯಿಗಳ ಹಾವಳಿ ತಪ್ಪಿಸಲು ಆಗ್ರಹ

Team Udayavani, May 25, 2020, 7:23 AM IST

bidi haavali

ತಿಪಟೂರು: ತಾಲೂಕಿನ ನೊಣವಿನಕೆರೆಯಲ್ಲಿ ಹುಚ್ಚು ನಾಯಿ ಮತ್ತು ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, 20-25 ಜನರಿಗೆ ಈಗಾಗಲೇ ಹುಚ್ಚುನಾಯಿ ಕಡಿ ದಿದ್ದು, ಜನರು ಓಡಾಡಲು ಭಯಬೀತರಾಗುತ್ತಿದ್ದಾರೆ. ಇದನ್ನು  ತಡೆಗಟ್ಟಬೇಕಾದ ಗ್ರಾಪಂ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೊಣವಿನಕೆರೆ ಹೋಬಳಿಯ ಯಾವ ಬಡಾವಣೆ ಗಳನ್ನು ನೋಡಿದರೂ ಬೀದಿ ನಾಯಿಗಳದ್ದೇ ಕಾರುಬಾರಾ ಗಿದ್ದು, ದೊಡ್ಡವರಿಂದ  ಮಕ್ಕಳಾದಿಯಾಗಿ ಭಯದಿಂದ ಓಡಾಡುವಂತಾಗಿದೆ. ವಾಹನಗಳಲ್ಲಿ ಹೋಗುತ್ತಿದ್ದರೂಬೀದಿನಾಯಿಗಳು ಅಟ್ಟಿಸಿಕೊಂಡು ಬರುತ್ತವೆ.  ಹಾದಿಬೀದಿಯಲ್ಲಿ ಹಾಕುವ ಕಸದ ರಾಶಿ ಹಾಗೂ ಮಾಂಸದಂಗಡಿಗಳವರು ಎಲ್ಲೆಂದರಲ್ಲಿ ಎಸೆಯುವ  ತ್ಯಾಜ್ಯವನ್ನೆ ನಾಯಿಗಳು ತಮ್ಮ ಆವಾಸ ಸ್ಥಾನವಾಗಿಸಿ ಕೊಂಡಿವೆ ಎಂದು ದೂರಿದರು.

ಮನೆಗಳಿಂದ ಹೊರ ಬರಬೇಕಾದರೆ ಬೀದಿನಾಯಿಗಳು ಎಲ್ಲಿ ಓಡಿಸಿಕೊಂಡು ಬರುತ್ತವೋ ಎಂದು ನೋಡಿ ಕೊಂಡು ಹೊರಗೆ  ಬರಬೇಕಾದ ಪರಿಸ್ಥಿತಿ ಬಂದಿದೆ. ಮಕ್ಕಳು ಮನೆಗಳಿಗೆ ತೆರಳಬೇಕಾದರೆ ಎಲ್ಲಿ ನಾಯಿ ಬಂದು ನಮ್ಮನ್ನು ಕಚ್ಚಿಬಿಡುತ್ತದೆಯೋ ಎಂಬ ಭಯ ದಿಂದ ಓಡಾಡುವಂತಾಗಿದೆ. ಪೋಷಕರಂತೂ ಮಕ್ಕಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುವಂತಾಗಿದೆ.

ಗ್ರಾಪಂ ನಿರ್ಲಕ್ಷ:  ಹುಚ್ಚುನಾಯಿ ಮತ್ತು ಬೀದಿನಾಯಿ ಗಳ ಹಾವಳಿ ವಿಪರೀತವಾಗಿದ್ದು, ಈ ಬಗ್ಗೆ ಗ್ರಾಪಂಗೆ ಹತ್ತು ಹಲವು ಬಾರಿ ಮನವಿ ಮಾಡಿದರೂ ಕ್ಯಾರೆ ಎನ್ನದೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ನಾಯಿ  ಗಳನ್ನು ಹಿಡಿಯಲು ಜಿಲ್ಲಾಧಿಕಾರಿಗಳ  ಆದೇಶಬೇಕಿದ್ದು ಆದೇಶ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎನ್ನು ತ್ತಾರೆ. ಆದರೆ ಜನರು ಪ್ರಾಣಭಯದಿಂದ ಓಡಾಡು ತ್ತಿದ್ದು ಆದೇಶ ಬರುವತ್ತಿಗೆ ಎಷ್ಟು ಜನರ ಜೀವವನ್ನು ಬಲಿ ಪಡೆದಿರುತ್ತವೆಯೋ ಗೊತ್ತಿಲ್ಲ.

ಅಧಿಕಾರಿಗಳ  ನಿರ್ಲಕ್ಷಕ್ಕೆ  ಅಮಾಯಕ ಜೀವಗಳು ಬಲಿಯಾಗಲಿದ್ದು ಇದೇ ರೀತಿ ಮುಂದುವರಿದರೆ ರೇಬಿಸ್‌ ರೋಗ  ಹರಡುವ ಸಾಧ್ಯತೆ ಹೆಚ್ಚುವ ಸಾಧ್ಯತೆ ಇದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ. ಕೂಡಲೇ ಅಧಿಕಾರಿಗಳು ನಾಯಿಗಳ ಸಮಸ್ಯೆ ಬಗೆಹರಿಸದಿದ್ದರೆ  ಗ್ರಾಪಂ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

ರಾಹುಲ್‌

NDA; ಸಣ್ಣ ಕಂಪನವೂ ಕೇಂದ್ರ ಸರ್ಕಾರವನ್ನೇ ಉರುಳಿಸಬಲ್ಲದು: ರಾಹುಲ್‌

Jaganmohan reddy

ಸದ್ದಾಂ, ಜನಾರ್ದನ ರೆಡ್ಡಿ ರೀತಿ ಜಗನ್‌ ಮನೆ ನಿರ್ಮಾ ಣ: ಟಿಡಿಪಿ

Theft Case ಬಿ.ಸಿ.ರೋಡಿನ ಕೈಕಂಬ: ಮನೆಯಿಂದ ಕಳವು

Theft Case ಬಿ.ಸಿ.ರೋಡಿನ ಕೈಕಂಬ: ಮನೆಯಿಂದ ಕಳವು

Kollur ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಇಬ್ಬರ ಬಂಧನ

Kollur ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಇಬ್ಬರ ಬಂಧನ

ರಿಯಾಯಿತಿ ಬೆಲೆಗೆ ಶೇರು ಮಾರಾಟ ಮಾಡುವುದಾಗಿ ಲಕ್ಷಾಂತರ ರೂ. ವಂಚನೆ

ರಿಯಾಯಿತಿ ಬೆಲೆಗೆ ಶೇರು ಮಾರಾಟ ಮಾಡುವುದಾಗಿ ಲಕ್ಷಾಂತರ ರೂ. ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal ಶ್ರೀ ಕ್ಷೇತ್ರ ಎಡೆಯೂರು ದೇವಾಲಯದ ಆನೆ ಗಂಗಾ ಇನ್ನಿಲ್ಲ!

Kunigal ಶ್ರೀ ಕ್ಷೇತ್ರ ಎಡೆಯೂರು ದೇವಾಲಯದ ಆನೆ ಗಂಗಾ ಇನ್ನಿಲ್ಲ!

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

1-sadasd

Tumakuru ಕ್ಷೇತ್ರ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ: ಕೇಂದ್ರ ಸಚಿವ ವಿ.ಸೋಮಣ್ಣ

5-

ಕೇಂದ್ರ ಮಂತ್ರಿಯಾಗಿ ಕ್ಷೇತ್ರಕ್ಕೆ ಬಂದ ಮೊದಲ ದಿನವೇ ಸೋಮಣ್ಣ ಡಿಸಿ, ಅಧಿಕಾರಿಗಳಿಗೆ ತರಾಟೆ

1-aaa

Kunigal; ಕಾರಿನಿಂದ ಬೈಕ್‌ಗೆ ಗುದ್ದಿ ಯುವಕನ ಕೊಲೆ: ಐವರ ಬಂಧನ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

ಬೈಕಿಗೆ ಹಿಂದಿನಿಂದ ಕಾರು ಢಿಕ್ಕಿ: ಸಹಸವಾರ ಗಾಯ

ಬೈಕಿಗೆ ಹಿಂದಿನಿಂದ ಕಾರು ಢಿಕ್ಕಿ: ಸಹಸವಾರ ಗಾಯ

ರಾಹುಲ್‌

NDA; ಸಣ್ಣ ಕಂಪನವೂ ಕೇಂದ್ರ ಸರ್ಕಾರವನ್ನೇ ಉರುಳಿಸಬಲ್ಲದು: ರಾಹುಲ್‌

Jaganmohan reddy

ಸದ್ದಾಂ, ಜನಾರ್ದನ ರೆಡ್ಡಿ ರೀತಿ ಜಗನ್‌ ಮನೆ ನಿರ್ಮಾ ಣ: ಟಿಡಿಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.