ರಾಗಿ ಬೆಳೆಗೆ ಸಮಗ್ರ ಪೋಷಕಾಂಶ ಬಳಸಿ

Team Udayavani, Sep 13, 2020, 4:49 PM IST

ರಾಗಿ ಬೆಳೆಗೆ ಸಮಗ್ರ ಪೋಷಕಾಂಶ ಬಳಸಿ

ತಿಪಟೂರು: ತಾಲೂಕಿನ ಪ್ರಮುಖ ಆಹಾರ ಬೆಳೆ ರಾಗಿಯನ್ನು ಪ್ರಸ್ತುತ 17,990 ಹೆಕ್ಟೆರ್‌ನಲ್ಲಿ ಬಿತ್ತಲಾಗಿದ್ದು, ರಸಗೊಬ್ಬರವನ್ನು ಕಡಿಮೆ ಮಾಡಿ ಸಾವಯವ ಗೊಬ್ಬರವನ್ನು ಬಳಸುವುದರಿಂದ ಅತಿಹೆಚ್ಚು ಇಳುವರಿಯನ್ನು ಪಡೆಯಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ಎನ್‌.ಕೆಂಗೇಗೌಡ ತಿಳಿಸಿದರು.

ತಾಲೂಕಿನ ಅರಳಗುಪ್ಪೆ ಗ್ರಾಮದ ರಾಗಿ ನಾಟಿ ತಾಕಿಗೆ ಭೇಟಿ ನೀಡಿ ರೈತರೊಂದಿಗೆ ತಾಂತ್ರಿಕಮಾಹಿತಿ ನೀಡಿದ ಅವರು, ಸಾರಜನಕ, ರಂಜಕ, ಪೊಟ್ಯಾಶ್‌ಗಳಲ್ಲಿ ಪೋಷಕಾಂಶಗಳಿದ್ದು, ಡಿಎಪಿ ಅಥವಾ ಎಂಒಪಿಯನ್ನು ಬಿತ್ತನೆ ಸಂದರ್ಭದಲ್ಲಿ ಬಳಸಿ ಉಳಿಕೆ ಅರ್ಧ ಭಾಗದ ಸಾರಜನಕವನ್ನು30-35 ದಿನಗಳ ನಂತರ 20 ಕೆ.ಜಿ ಯೂರಿಯಾ ರಸಗೊಬ್ಬರದ ಮೂಲಕ ಮೇಲು ಗೊಬ್ಬರವಾಗಿ ಕೊಡಬೇಕು. ಹೆಚ್ಚು ಯೂರಿಯಾ ರಸಗೊಬ್ಬರ ಬಳಕೆಯಿಂದ ಹುಲುಸಾಗಿ ಬೆಳೆದರೂ ರೋಗ ಕೀಟಗಳಿಗೆ ತುತ್ತಾಗುವ ಹಾಗೂ ಗಾಳಿಗೆ ಮಲಗಿ ಕಟಾವು ಕಷ್ಟಕರವಾಗಿ ಇಳುವರಿ ಕುಸಿಯುತ್ತದೆ. ಪ್ರತಿ ಎಕರೆಗೆ 5 ಕೆ.ಜಿ ಸತುವಿನ ಸಲ್ಪೇಟ್‌, 4 ಕೆ.ಜಿ ಬೋರಾನ್‌ ಲಘು ಪೋಷಕಾಂಶಗಳನ್ನು ಇಲಾಖೆಯಲ್ಲಿ ಸಹಾಯಧನದಡಿ ನೀಡಲಾಗುತ್ತಿದೆ. ಬಿತ್ತನೆಯಾದ 20ದಿನಗಳ ನಂತರ ಪ್ರತಿ 10 ದಿನಗಳಿಗೊಮ್ಮೆ ಅಂತರಬೇಸಾಯ ಕೈಗೊಳ್ಳಬೇಕು. ರಾಗಿ ಬೆಳೆಯಲ್ಲಿ ಅಕ್ಕಡಿ ಬೆಳೆಯಾಗಿ ತೊಗರಿ ಅಥವಾ ಅವರೆಬೆಳೆಗಳನ್ನು ಬೆಳೆಯುವುದರಿಂದ ರೈತರಆದಾಯ ಅಧಿಕವಾಗಲಿದೆ. ಹೆಸರು ಅಥವಾ ಅಲಸಂದೆ ಬೆಳೆದ ನಂತರ ರಾಗಿ ಬೆಳೆ ಬೆಳೆಯುವುದರಿಂದ ಮಣ್ಣಿನ ಫ‌ಲವತ್ತತೆ ಸುಧಾರಿಸಿ ಅಧಿಕ ರಾಗಿ ಇಳುವರಿ ಪಡೆಯಬಹುದು. ರಾಗಿ ಎಲೆ ಮೇಲೆ ಬೆಂಕಿರೋಗದ ಲಕ್ಷಣಗಳಾದ ಕಂದು ಬಣ್ಣದ ಕಣ್ಣಿನಾಕಾರದ ಚುಕ್ಕೆಗಳು ಹೆಚ್ಚು ಕಂಡುಬಂದಲ್ಲಿಕಾರ್ಬನ್‌ ಡೈಸಿಮ್‌ 1 ಗ್ರಾಂ ಪ್ರತಿ ಲೀಟರ್‌ ನೀರಿಗೆ ಬೆರಸಿ ಸಿಂಪಡಿಸಿ. ಬಿತ್ತನೆಯಾದ 40-45 ದಿನಗಳು ನಂತರ ಗರಿಗಳನ್ನು ಮೇಯಿಸುವುದರಿಂದ ಕವಲುಗಳು ಹೊಡೆದು ಇಳುವರಿ ಅಧಿಕವಾಗಲಿದೆ ಎಂದು ಹೇಳಿದರು.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.