Udupi Video Case: ಚುರುಕುಗೊಂಡ ತನಿಖೆ- FSL ವರದಿಯ ನಿರೀಕ್ಷೆ

ವೀಡಿಯೋ ಚಿತ್ರೀಕರಣ ಪ್ರಕರಣ: ತನಿಖಾಧಿಕಾರಿಯಾಗಿ ಬೆಳ್ಳಿಯಪ್ಪ

Team Udayavani, Jul 29, 2023, 11:23 PM IST

police siren

ಉಡುಪಿ: ಪ್ಯಾರ ಮೆಡಿಕಲ್‌ ಕಾಲೇಜಿನ ಶೌಚಾಲಯ ದಲ್ಲಿ ನಡೆದಿದೆ ಎನ್ನಲಾದ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದ ತನಿಖಾಧಿ ಕಾರಿಯನ್ನು ಬದಲಾಯಿಸಲಾಗಿದೆ.

ನೂತನ ತನಿಖಾಧಿಕಾರಿಯಾಗಿ ಬೆಳ್ಳಿಯಪ್ಪ ಕೆ.ಯು. ಅವರನ್ನು ನೇಮಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಆದೇಶಿಸಿದ್ದಾರೆ. ತನಿಖಾ ತಂಡದಲ್ಲಿ ಮಹಿಳಾ ಪಿಎಸ್‌ಐಗಳನ್ನು ಒಳಗೊಂಡ ಸಿಬಂದಿ ಇರಲಿದ್ದಾರೆ.

ಈ ಪ್ರಕರಣ ಮಲ್ಪೆ ಠಾಣಾ ವ್ಯಾಪ್ತಿಗೆ ಬಂದ ಕಾರಣ ಪ್ರಕರಣದ ತನಿಖಾಧಿಕಾರಿಯಾಗಿ ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ ಗೌಡ ಕಾರ್ಯನಿರ್ವಹಿಸುತ್ತಿದ್ದರು. ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಬಿಜೆಪಿ ಪ್ರತಿಭಟನೆ ನಡೆಸಿ, ತನಿಖಾಧಿಕಾರಿಯನ್ನು ಬದಲಿಸಬೇಕು ಎಂದು ಪಟ್ಟು ಹಿಡಿದಿದ್ದರು. ತೀವ್ರ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಯನ್ನು ಬದಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪರಿಶೀಲನೆ
ತನಿಖಾಧಿಕಾರಿಯಾಗಿ ನೇಮಕಗೊಂಡ ಬಳಿಕ ಬೆಳ್ಳಿಯಪ್ಪ ಅವರು ಘಟನೆ ನಡೆದ ಕಾಲೇಜಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದುಕೊಂಡರು. ಸಿಸಿಟಿವಿ ದೃಶ್ಯಾವಳಿಗಳ ಸಹಿತ ಈ ಹಿಂದಿನ ತನಿಖಾಧಿಕಾರಿ ಮೂಲಕ ವಿವರ ಪಡೆದುಕೊಂಡರು. ಈಗಾಗಲೇ ಐಜಿ ಡಾ| ಚಂದ್ರಗುಪ್ತ ಅವರು ಘಟನೆಯ ಬಗ್ಗೆ ಪೂರ್ಣ ವಿವರ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿನಿಯರ ವಿಚಾರಣೆ
ಸಂತ್ರಸ್ತ ವಿದ್ಯಾರ್ಥಿನಿಯರ ಸಹಿತ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯರನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಬಳಿಕ ಅವರ ಹೇಳಿಕೆಗಳನ್ನು ದಾಖಲಿಸಲಾಯಿತು. ಘಟನೆ ನಡೆದ ಸ್ಥಳ ಸಹಿತ ಕಾಲೇಜಿನ ಸಿಬಂದಿ ವಿಚಾರಣೆಗೊಳಪಡಿಸಲಾಯಿತು. ಈಗಾಗಲೇ ವಿದ್ಯಾರ್ಥಿನಿಯರ ಮೂರು ಐಫೋನ್‌ಗಳನ್ನು ಎಫ್ಎಸ್‌ಎಲ್‌ ವರದಿಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಇದರ ವರದಿ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎನ್ನುತ್ತವೆ ಪೊಲೀಸ್‌ ಮೂಲಗಳು.

ಅಶ್ಲೀಲ ಸಂದೇಶ: ಪ್ರಕರಣ ದಾಖಲು
ಉಡುಪಿ: ಉಡುಪಿಯ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಭಟನೆಯೊಂದರಲ್ಲಿ ಹೇಳಿಕೆ ನೀಡಿದ್ದ ಕಾಲೇಜಿನ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆನ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ಜು. 28ರಂದು ಇನ್‌ಸ್ಟಾಗ್ರಾಂ ಖಾತೆಯಿಂದ ವಿದ್ಯಾರ್ಥಿನಿಗೆ ಭಯಪಡಿಸುವ ರೀತಿಯಲ್ಲಿ ಕೆಟ್ಟ ಹಾಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಆಕೆಯ ಮಾನಸಿಕ ನೆಮ್ಮದಿಗೆ ಭಂಗ ಉಂಟು ಮಾಡಲಾಗಿದೆ ಎಂದು ನೊಂದ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.

ವೀಡಿಯೋ ರಿಟ್ರೈವ್‌ ಆಗಬಹುದೇ?
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿ ಘಟನೆಗೆ ಸಂಬಂಧಿಸಿದ ಯಾವುದೇ ವೀಡಿಯೋವಾಗಲಿ ಅಥವಾ ಫಾರ್ವರ್ಡ್‌ ಆದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ವಿವಿಧ ಸಂಘಟನೆಗಳು ಹೆಚ್ಚಿನ ತನಿಖೆಯಾಗಬೇಕೆಂಬ ನಿಟ್ಟಿನಲ್ಲಿ ಎಫ್ಎಸ್‌ಎಲ್‌ ವರದಿಗೆ ಬೆಂಗಳೂರಿಗೆ ಕಳುಹಿಸಲಾಗಿದೆ.

ಈ ಬಗ್ಗೆ ಮೊಬೈಲ್‌ ತಜ್ಞರು ಹೇಳುವ ಪ್ರಕಾರ ಇದು ಐಫೋನ್‌ ಆದ್ದರಿಂದ ವೀಡಿಯೋ ರೀಸೈಕಲ್‌ ಬಿನ್‌ ಮೂಲಕವೂ ಡಿಲೀಟ್‌ ಮಾಡಲ್ಪಟ್ಟರೆ ಐಕ್ಲೌಡ್‌ ಮೂಲಕ ವೀಡಿಯೋ ಸೇವ್‌ ಆಗಿರುತ್ತದೆ. ಒಂದು ವೇಳೆ ಅಲ್ಲಿಯೂ ಡಿಲೀಟ್‌ ಆಗಿದ್ದರೆ ಯಾವುದೇ ಕುರುಹು ದೊರಕದು. ಒಂದು ವೇಳೆ ವಿದ್ಯಾರ್ಥಿನಿಯರು ಆ ವೀಡಿಯೋವನ್ನು ಫಾರ್ವರ್ಡ್‌ ಮಾಡಿದ್ದೇ ಆದಲ್ಲಿ ಆ ಸಂದೇಶವನ್ನು ಸ್ವೀಕರಿಸಿದ ವ್ಯಕ್ತಿಯ ಮೊಬೈಲ್‌ನಲ್ಲಿದ್ದರೆ ಅದನ್ನು ಕಂಡು ಹುಡುಕಬಹುದು. ಆತ/ಆಕೆ ಅದನ್ನು ಡಿಲೀಟ್‌ ಮಾಡಿದ್ದರೆ ಕೇವಲ ಶೇರ್‌ ಆದ ಬಗ್ಗೆ ಲಿಂಕ್‌ ಸಿಗುತ್ತದೆ ವಿನಃ ಅದು ಯಾವ ವೀಡಿಯೋ ಎಂಬ ಬಗ್ಗೆ ನಿಖರವಾಗಿ ತಿಳಿದು ಬರುವುದಿಲ್ಲ. ಈ ಪ್ರಕರಣದಲ್ಲಿಯೂ ವೀಡಿಯೋ ಫಾರ್ವರ್ಡ್‌ ಆಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ, ಪೊಲೀಸರು ಹಾಗೂ ಒಂದು ವರ್ಗದ ವಿದ್ಯಾರ್ಥಿನಿಯರು ವೀಡಿಯೋ ಫಾರ್ವರ್ಡ್‌ ಆಗಿಲ್ಲ ಎನ್ನುತ್ತಿದ್ದಾರೆ. ಇದರ ಸಂಪೂರ್ಣ ವಿವರ ಎಫ್ಎಸ್‌ಎಲ್‌ ವರದಿಯಿಂದಷ್ಟೇ ತಿಳಿದುಬರಲು ಸಾಧ್ಯವಿದೆ. ವರದಿ ಬರಲು ಕನಿಷ್ಠ ಒಂದು ವಾರವಾದರೂ ಬೇಕಾಗಬಹುದು ಎನ್ನುತ್ತಾರೆ ಪೊಲೀಸರು.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

Brahmavara-ಉಡುಪಿ ಟ್ರಾಫಿಕ್‌ ಜಾಮ್‌ ಸಮಸ್ಯೆ: ಸವಾರರು ಸುಸ್ತೋ ಸುಸ್ತು

Brahmavara-ಉಡುಪಿ ಟ್ರಾಫಿಕ್‌ ಜಾಮ್‌ ಸಮಸ್ಯೆ: ಸವಾರರು ಸುಸ್ತೋ ಸುಸ್ತು

Udupi: ಪರಿಸರ ಸ್ನೇಹಿ ಸಿಎನ್‌ಜಿ ಬಸ್‌ ಸಂಚಾರ-ಸಿಎನ್‌ಜಿ ಲಭ್ಯತೆ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.