ಇಬ್ಬರಿಗೆ 5 ವರ್ಷ ಕಠಿನ ಸಜೆ, ದಂಡ


Team Udayavani, Jul 8, 2018, 6:00 AM IST

v-30.jpg

ಕುಂದಾಪುರ: ತಗ್ಗರ್ಸೆಯ ಅರಳಿಕಟ್ಟೆಯಲ್ಲಿ 3 ವರ್ಷಗಳ ಹಿಂದೆ ಜಾಗದ ವೈಷಮ್ಯದಿಂದ ಮನೆಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಇಬ್ಬರಿಗೆ ಕುಂದಾಪುರದ ಹೆಚ್ಚು ವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.  ಇಬ್ಬರಿಗೂ 5 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ 50 ಸಾ.ರೂ. ದಂಡ ವಿಧಿಸಿ ನ್ಯಾಯಾಧೀಶ ಪ್ರಕಾಶ್‌ ಖಂಡೇರಿ ತೀರ್ಪು ನೀಡಿದ್ದಾರೆ. 

ಮದುವೆ ಸಂಭ್ರಮದಲ್ಲಿದ್ದ ತಗ್ಗರ್ಸೆ ಗ್ರಾಮದ ಅರಳಿಕಟ್ಟೆಯ ಕುಶಲ ಶೆಟ್ಟಿ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ರಾಘವೇಂದ್ರ ಶೆಟ್ಟಿ ಹಾಗೂ ರಾಜೇಂದ್ರ ಶೆಟ್ಟಿ ಶಿಕ್ಷೆಗೊಳಗಾದವರು. ಮನೆಗೆ ಬೆಂಕಿ ಹಚ್ಚಿದ್ದಕ್ಕೆ 5 ವರ್ಷ ಕಠಿನ ಸಜೆ ಹಾಗೂ 50 ಸಾ.ರೂ. ದಂಡ, ಮನೆಗೆ ಅಕ್ರಮ ಪ್ರವೇಶ ಮಾಡಿದಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾ. ರೂ. ದಂಡ, ಸೊತ್ತು ನಾಶಕ್ಕೆ 1 ವರ್ಷ ಸಜೆ ಹಾಗೂ 10 ಸಾ. ರೂ. ದಂಡ ವಿಧಿಸಲಾಗಿದೆ. 3 ಶಿಕ್ಷೆಗಳನ್ನು ಏಕಕಾಲದಲ್ಲಿ  ಅನು ಭವಿಸಬಹುದಾಗಿದ್ದು, ಒಟ್ಟು 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ದಂಡದಲ್ಲಿ 45 ಸಾ.ರೂ. ಅನ್ನು ಬೆಂಕಿ ಬಿದ್ದ ಮನೆಗೆ ಪರಿಹಾರವಾಗಿ ನೀಡಬೇಕಾಗಿದೆ ಎಂದು ತೀರ್ಪಿನಲ್ಲಿ ಪ್ರಕಟಿಸಿದೆ. 

ಪ್ರಾಸಿಕ್ಯೂಶನ್‌ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಬೈಂದೂರು ಎಸ್‌ಐ ಸಂತೋಷ್‌ ಕಾಯ್ಕಿಣಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 14 ಸಾಕ್ಷಿಗಳಿದ್ದು, 12 ಮಂದಿಯನ್ನು ವಿಚಾರಣೆ ನಡೆಸಲಾಗಿತ್ತು.  

ಪ್ರಕರಣದ ಹಿನ್ನೆಲೆ
ಕುಶಲ ಶೆಟ್ಟಿ ಮನೆಯವರಿಗೆ ಹಾಗೂ ಅಪರಾಧಿಗಳಿಗೆ ಬಹಳ ವರ್ಷಗಳಿಂದ ಜಾಗದ ತಕರಾರು ನಡೆಯುತ್ತಿತ್ತು. 2015ರ ಎ.22ರಂದು ಕುಶಲ ಶೆಟ್ಟಿ ಅವರ ಮಗನ ಮದುವೆ ಹೆಮ್ಮಾಡಿಯ ಸಭಾ ಭವನ ವೊಂದರಲ್ಲಿ ನಡೆಯುತ್ತಿತ್ತು. ಇದೇ ಸಂದರ್ಭವನ್ನು ಬಳಸಿ ಕೊಂಡ ರಾಜು ಶೆಟ್ಟಿ ಹಾಗೂ ರಾಘವೇಂದ್ರ ಶೆಟ್ಟಿ ರಾಡ್‌ನಿಂದ ಮನೆಯ ಬೀಗ ಒಡೆದು ಒಳ ನುಗ್ಗಿ, ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಟೇಬಲ್‌, ಮಂಚವನ್ನೆಲ್ಲ  ಹಾಲ್‌ಗೆ ತಂದು ರಾಶಿ ಹಾಕಿ ಅದಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಬಳಿಕ ಕಿಚ್ಚು ಇಡೀ ಮನೆಯನ್ನು ವ್ಯಾಪಿಸಿತ್ತು. 
 

ಟಾಪ್ ನ್ಯೂಸ್

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KARವಕೀಲರ ವಿರುದ್ಧವೇ ಕಾನೂನು ಕ್ರಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಸೂಚನೆವಕೀಲರ ವಿರುದ್ಧವೇ ಕಾನೂನು ಕ್ರಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಸೂಚನೆ

ವಕೀಲರ ವಿರುದ್ಧವೇ ಕಾನೂನು ಕ್ರಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಸೂಚನೆ

1-sasad

ಉದ್ಯಾವರ: ರೈಲಿನಿಂದ ಬಿದ್ದು ಅಪರಿಚಿತ ಮಹಿಳೆ ಸಾವು

ಉಡುಪಿ ನಗರದೊಳಗೂ ಬಸ್‌ ಸರ್ಕಸ್‌! ಬೆಳಗ್ಗೆ , ಸಂಜೆ ವಿದ್ಯಾರ್ಥಿಗಳ ಗೋಳಾಟ

ಉಡುಪಿ ನಗರದೊಳಗೂ ಬಸ್‌ ಸರ್ಕಸ್‌! ಬೆಳಗ್ಗೆ , ಸಂಜೆ ವಿದ್ಯಾರ್ಥಿಗಳ ಗೋಳಾಟ

Kaup: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

Kaup: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

pinarayi

ಅಗ್ನಿ ದುರಂತ; ಕುವೈಟ್‌ಗೆ ತೆರಳಲು ಸಚಿವೆಗೆ ಕೇಂದ್ರ ಅಡ್ಡಿ: ಕೇರಳ ಸಿಎಂ

1-rt

ಗಲಾಟೆ ವಿವಾದ: ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ ರವೀನಾ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.