ಕುಂದಾಪುರ: ರಂಗೇರುತ್ತಿದೆ ಪುರಸಭೆ ಚುನಾವಣಾ ಕಣ

Team Udayavani, Aug 20, 2018, 6:00 AM IST

kundapur-town-municipal-council-8585.jpg

ಕುಂದಾಪುರ: ಪುರಸಭೆ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ಉಮೇದುವಾರಿಕೆ ಸಲ್ಲಿಕೆ ಶನಿವಾರಕ್ಕೆ ಅಂತ್ಯವಾಗಿದೆ. ಕುಂದಾಪುರ ಪುರಸಭೆಯ 23 ವಾರ್ಡ್‌ಗಳಿಗೆ ಒಟ್ಟು 81 ಅಭ್ಯರ್ಥಿಗಳು 113 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. 

ಕುಂದಾಪುರ ಪುರಸಭೆಯ 23 ವಾರ್ಡುಗಳಿಗೆ ಕಾಂಗ್ರೆಸ್‌ 30, ಬಿಜೆಪಿ 51, ಜೆಡಿಎಸ್‌ 5, ಸಿಪಿಐಎಂ 7, ಬಿಎಸ್‌ಪಿ 4, ಪಕ್ಷೇತರರಿಂದ 16 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎಲ್ಲ 23 ವಾರ್ಡ್‌ಗಳಲ್ಲಿ ಅಧಿಕೃತ ಅಭ್ಯರ್ಥಿಗಳಲ್ಲದೆ ಡಮ್ಮಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಅವರು ನಾಮಪತ್ರ ಹಿಂತೆಗೆಯುವ ಸಾಧ್ಯತೆಯಿದೆ. ಉಳಿದಂತೆ ಬಿಎಸ್‌ಪಿಯ ಇಬ್ಬರು ಅಭ್ಯರ್ಥಿಗಳು ತಲಾ ಎರಡರಂತೆ 4 ನಾಮಪತ್ರ ಸಲ್ಲಿಸಿದ್ದಾರೆ. 

“ಸೆಂಟ್ರಲ್‌’ನಲ್ಲಿ ಬಂಡಾಯ?
ಸೆಂಟ್ರಲ್‌ ವಾರ್ಡ್‌ ಕುತೂಹಲದ ಕಣವಾಗಿದ್ದು, ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಪುರಸಭಾಧ್ಯಕ್ಷ ಮೋಹನ್‌ದಾಸ್‌ ಶೆಣೈ, ಹಾಲಿ ಉಪಾಧ್ಯಕ್ಷ ರಾಜೇಶ್‌ ಕಾವೇರಿ ಇಬ್ಬರೂ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಮೋಹನ್‌ದಾಸ್‌ ಶೆಣೈ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದು, ರಾಜೇಶ್‌ ಕಾವೇರಿ ಯವರು ಕೂಡ ಬಿಜೆಪಿ ಪರ ಹಾಗೂ ಮತ್ತೂಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. 

ಆ.20ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಆ.23 ಕೊನೆ ದಿನ, ಆ. 31ರಂದು ಮತದಾನ, ಸೆ. 3ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಕಣದಲ್ಲಿ  ಘಟಾನುಘಟಿಗಳು
ಹಾಲಿ ಅಧ್ಯಕ್ಷ – ಉಪಾಧ್ಯಕ್ಷ ಸಹಿತ ಮಾಜಿ ಅಧ್ಯಕ್ಷರ ಸಹಿತ ಘಟಾನುಘಟಿಗಳು ಚುನಾವಣಾ ಕಣದಲ್ಲಿದ್ದಾರೆ. ಹಾಲಿ ಅಧ್ಯಕ್ಷೆ ವಸಂತಿ ಮೋಹನ ಸಾರಂಗ ಅವರು ಬಿಜೆಪಿ ಅಭ್ಯರ್ಥಿಯಾಗಿ ಖಾರ್ವಿಕೇರಿ ವಾರ್ಡ್‌ನಿಂದ, ಉಪಾಧ್ಯಕ್ಷ ರಾಜೇಶ್‌ ಕಾವೇರಿ ಸೆಂಟ್ರಲ್‌ ವಾರ್ಡ್‌ನಿಂದ ಬಿಜೆಪಿ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಸೆಂಟ್ರಲ್‌ ವಾರ್ಡ್‌ನಿಂದ ಮಾಜಿ ಅಧ್ಯಕ್ಷ ಮೋಹನ್‌ದಾಸ್‌ ಶೆಣೈ ಬಿಜೆಪಿಯಿಂದ, ಇತ್ತೀಚೆಗಷ್ಟೇ ಕಮ್ಯೂನಿಸ್ಟ್‌ ತೊರೆದು ಬಿಜೆಪಿ ಸೇರಿದ ನಿಕಟಪೂರ್ವಾಧ್ಯಕ್ಷೆ ಗುಣರತ್ನಾ ಕೋಡಿ ಉತ್ತರ ವಾರ್ಡ್‌, ಮಾಜಿ ಉಪಾಧ್ಯಕ್ಷ ನಾಗರಾಜ್‌ ಕಾಮಧೇನು ಮೀನು ಮಾರ್ಕೆಟ್‌ ವಾರ್ಡ್‌ನಿಂದ ಸ್ಪರ್ಧಿಗಿಳಿದಿದ್ದಾರೆ. 

ಕಾಂಗ್ರೆಸ್‌ನಿಂದ ನಿಕಟ ಪೂರ್ವಾಧ್ಯಕ್ಷೆ ದೇವಕಿ ಸಣ್ಣಯ್ಯ ಸರಕಾರಿ ಆಸ್ಪತ್ರೆ ವಾರ್ಡ್‌ನಿಂದ, ಮಾಜಿ ಉಪಾಧ್ಯಕ್ಷ ಜಾಕೂಬ್‌ಡಿಸೋಜಾ ಚಿಕ್ಕನ್‌ಸಾಲು ಎಡಬದಿ ವಾರ್ಡ್‌ ಸ್ಪರ್ಧಿಗಿಳಿದಿದ್ದಾರೆ. ನಿಕಟಪೂರ್ವ ಸದಸ್ಯರು ಕಣದಲ್ಲಿದ್ದು, ಕಾಂಗ್ರೆಸ್‌ನಿಂದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್‌, ರವಿಕಲಾ ಗಣೇಶ್‌ ಶೇರೆಗಾರ್‌, ಕೆ.ಜಿ.ನಿತ್ಯಾನಂದ, ಬಿಜೆಪಿಯಿಂದ ಪುಷ್ಪಾ ಶೇಟ್‌, ಜ್ಯೋತಿ ಗಣೇಶ್‌ ಮೊಗವೀರ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 

ಟಾಪ್ ನ್ಯೂಸ್

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

1-gg

CM ವಿರುದ್ಧ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಟೀಕೆ: ಕಾಂಗ್ರೆಸ್‌ ಬಣಗಳ ಪ್ರತಿಭಟನೆ

1

Renuka Swamy Case: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

1-vj

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

1-v-dsadsa-d

Hooch tragedy ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿ: ಅಣ್ಣಾಮಲೈ

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

Tamil-nadu-Kallakuruchi

TamilNadu: ಅಕ್ರಮ ಮದ್ಯ ಸೇವನೆ, ಮೃತರ ಸಂಖ್ಯೆ 34ಕ್ಕೆ ಏರಿಕೆ-ಸಿಐಡಿ ತನಿಖೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani Campaign: ಬಸ್‌ ಇಲ್ಲದೆ ಸರಕಾರಿ ಶಾಲೆಗಳಿಗೂ ಕಂಟಕ

Udayavani Campaign: ಬಸ್‌ ಇಲ್ಲದೆ ಸರಕಾರಿ ಶಾಲೆಗಳಿಗೂ ಕಂಟಕ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

Kundapura ಬೀಜಾಡಿ: ಕಡಲಿಗಿಳಿದ ಯುವಕ ಸಮುದ್ರ ಪಾಲು

Kundapura ಬೀಜಾಡಿ: ಕಡಲಿಗಿಳಿದ ಯುವಕ ಸಮುದ್ರ ಪಾಲು

Padubidri: ತಂಡದಿಂದ ಹಲ್ಲೆ… ದೂರು-ಪ್ರತಿದೂರು

Padubidri: ತಂಡದಿಂದ ಹಲ್ಲೆ… ದೂರು-ಪ್ರತಿದೂರು

Gangolli: ಹಾಲು ಕುಡಿದು ಮಲಗಿದ್ದ ಹಸುಳೆ ಮೃತ್ಯು… ದೂರು ದಾಖಲು

Gangolli: ಹಾಲು ಕುಡಿದು ಮಲಗಿದ್ದ ಹಸುಳೆ ಮೃತ್ಯು… ದೂರು ದಾಖಲು

MUST WATCH

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

udayavani youtube

ರಿವರ್ಸ್‌ ಅವಾಂತರ-ಗೆಳೆಯನ ಕಣ್ಣೆದುರೇ ಕಾರು ಕಂದಕಕ್ಕೆ ಬಿದ್ದು ಗೆಳತಿ ಸಾವು

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

ಹೊಸ ಸೇರ್ಪಡೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

1-gg

CM ವಿರುದ್ಧ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಟೀಕೆ: ಕಾಂಗ್ರೆಸ್‌ ಬಣಗಳ ಪ್ರತಿಭಟನೆ

1-ml

Ullal; ಯುವಮೋರ್ಚ ಮಂಡಲ ಅಧ್ಯಕ್ಷನ ಎಳೆದಾಡಿದ ಠಾಣಾಧಿಕಾರಿ: ಕಾರ್ಯಕರ್ತರ ಆಕ್ರೋಶ

1

Renuka Swamy Case: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

1-vj

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.