ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಚಿಂತನೆ ಅಗತ್ಯ’

Team Udayavani, Oct 12, 2020, 12:10 PM IST

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಚಿಂತನೆ ಅಗತ್ಯ’

ಉಡುಪಿ, ಅ. 11:  ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ನೂರಾರು ಕಾನೂನುಗಳು ಜಾರಿಗೆ ಬಂದಿವೆ. ಆದರೆ  ಮೊನ್ನೆಯ ಹತ್ರಾಸ್‌ನ ಘಟನೆ ನಡೆಯುವ ವರೆಗೂ ಈ ಕಾನೂನಿಗೆ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಸಾಧ್ಯ ವಾಗಿಲ್ಲ ಎಂದು  ಸಂಸದೆ ಶೋಭಾ ಕರಂದ್ಲಾಜೆ ಖೇದ ವ್ಯಕ್ತಪಡಿಸಿದರು.

ಮಕ್ಕಳ ಸಹಾಯವಾಣಿ 1098, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಉಡುಪಿ ಇವುಗಳ  ಸಂಯುಕ್ತ ಆಶ್ರಯದಲ್ಲಿ ಕುಕ್ಕಿಕಟ್ಟೆ ಸುಬ್ರಹ್ಮಣ್ಯ ಸಭಾಭವನದಲ್ಲಿ ರವಿವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಗು ಹುಟ್ಟಿದ ತತ್‌ಕ್ಷಣ ಕಸದ ತೊಟ್ಟಿಗೆ ಎಸೆಯುವುದು, ಗಂಡು ಹುಟ್ಟಿದರೆ ಮಾತ್ರ ವಂಶ ಬೆಳೆಯುತ್ತದೆ ಎನ್ನುವ ಯೋಚನೆಗಳಿಂದ ಹೊರ ಬಂದರೆ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣ ಕಡಿಮೆಯಾಗುತ್ತದೆ. ಜತೆಗೆ ಗಂಡು ಮಕ್ಕಳಲ್ಲಿ ಮಹಿಳೆಯರ ಬಗ್ಗೆ ಗೌರವ‌ ಮೂಡಿಸುವ ಕೆಲಸ ಮಾಡಬೇಕು ಎಂದರು.

ದಿಲ್ಲಿ  ಅತ್ಯಾಚಾರ ಪ್ರಕರಣದ ಬಳಿಕ, ಕಾನೂನು ಕಠಿನಗೊಳಿಸಿ ಕ್ರಿಮಿನಲ್‌ ಕಾಯ್ದೆ – 2013 ತಿದ್ದುಪಡಿ ಆಯಿತು. ಆದರ ಅನಂತರವೂ ಈ ಪ್ರಕರಣ ಹೆಚ್ಚಾಯಿತು. ಇದರಿಂದ ಅತ್ಯಾಚಾರ ನಡೆದರೆ ಮರಣ ದಂಡನೆ ವಿಧಿಸುವ ಕುರಿತು ಮೋದಿಯವರ  ಸರಕಾರ ಸಂಸತ್ತಿನಲ್ಲಿ ತಿದ್ದುಪಡಿ ತಂದು ಜಾರಿಗೊಳಿಸಿದ್ದಾರೆ  ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಕಾವೇರಿ, ಉಡುಪಿ ರೋಟರಿ ಅಧ್ಯಕ್ಷ ರಾಧಿಕಾ ಲಕ್ಷ್ಮೀನಾರಾಯಣ, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ. ನಾರಾಯಣ ಉಪಸ್ಥಿತರಿದ್ದರು. ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು, ರೋಟರಿ ಕ್ಲಬ್‌ನ ದೀಪಾ ಭಂಡಾರಿ ವಂದಿಸಿದರು. ಸಹಾಯವಾಣಿ ಆಪ್ತ ಸಮಾಲೋಚಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು.

ಅತ್ಯಾಚಾರ ತಡೆಯುವ ರೀತಿಯನ್ನು ಚಿಂತಿಸಿ :  ಹೆಣ್ಣುಮಕ್ಕಳ ದಿನಾಚರಣೆ ಆಚರಿಸುವ ಈ ಸಂದರ್ಭ ಮಹಿಳೆಯರ ಮೇಲಿನ ಅತ್ಯಾಚಾರ ಹೇಗೆ ತಡೆಯಬಹುದು ಎನ್ನುವ ಕುರಿತು ಚಿಂತಿಸಬೇಕಾಗಿದೆ. ಇದು ಕೇವಲ ಕಾನೂನಿನ ಕೈಯಿಂದ ಮಾತ್ರ ಸಾಧ್ಯವಿಲ್ಲ. ಹೆಣ್ಣು ಯಾಕೆ ಸರಕಾರದ ರಕ್ಷಣ ಕೇಂದ್ರಕ್ಕೆ ಬರುತ್ತಾರೆ ಎನ್ನುವ ಮೂಲ ಕಾರಣ ಸರಕಾರ ಹಾಗೂ ಸಾರ್ವಜನಿಕ ರಿಂದ ಶೋಧವಾಗಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಟಾಪ್ ನ್ಯೂಸ್

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

4

ಜಡ್ಜ್ ನಾಗಪ್ರಸನ್ನರಿಂದ ಒಂದೇ ದಿನ 600 ಅರ್ಜಿಗಳ ವಿಚಾರಣೆ!

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

7-sagara

Sagara: ಸಿಗಂದೂರು ಲಾಂಚ್; ವಾಹನಗಳ ಸಾಗಾಣಿಕೆ ಸ್ಥಗಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Udupi ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Udupi ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.