ಸೌಹಾರ್ದದಿಂದ ಮಂದಿರ ಬಿಟ್ಟುಕೊಡಲಿ : ಪೇಜಾವರ ಶ್ರೀ
Team Udayavani, May 16, 2022, 11:46 PM IST
ಉಡುಪಿ : ವಿವಾದಿತ ಸ್ಥಳಗಳು, ಹಿಂದೂ ಪೂಜಾ ಮಂದಿರಗಳನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು. ಮುಸ್ಲಿಮರ ದರ್ಗಾ ಆಗಿದ್ದರೆ ಮುಸಲ್ಮಾನರಿಗೆ ಬಿಟ್ಟು ಕೊಡಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘರ್ಷಕ್ಕೆ ಇಳಿಯದೆ ಸೌಹಾರ್ದದಿಂದ ಮಂದಿರ ಬಿಟ್ಟು ಕೊಡಬೇಕು. ಯಾವುದೋ ಕಾಲಘಟ್ಟದಲ್ಲಿ ನಮ್ಮ ಧರ್ಮ ಕೇಂದ್ರಗಳು ಮಸೀದಿಗಳಾಗಿ ಪರಿವರ್ತಿತವಾಗಿವೆ. ಖರೀದಿ ಮಾಡಿ ಮಸೀದಿಯಾಗಿ ಪರಿವರ್ತಿಸಿದ್ದರೆ ಆಕ್ಷೇಪವಿರಲಿಲ್ಲ. ಆದರೆ ಆಕ್ರಮಿಸಿಕೊಂಡು ಪರಿವರ್ತನೆ ಮಾಡಿದ್ದರೆ ಮರು ಪರಿವರ್ತನೆ ಆಗಬೇಕಾಗಿರುವುದು ಅನಿವಾರ್ಯ ಎಂದರು.
ಸುಪ್ರೀಂ ಕೋರ್ಟ್ ಧಾರ್ಮಿಕ ಮಂದಿರಗಳಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಮಾರ್ಗದರ್ಶನ ಮಾಡಿದೆ. ನಿಯಮ ಪಾಲಿಸಲು ಹಿಂದೂ ಸಮಾಜಕ್ಕೆ ಕರೆ ಕೊಡುತ್ತೇನೆ. ವಿಶೇಷ ಆಚರಣೆ ಸಂದರ್ಭ ಸಂಬಂಧ ಪಟ್ಟ ಇಲಾಖೆ ಮೂಲಕ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡೋಣ. ನ್ಯಾಯಾಲಯದ ತೀರ್ಪು ಎಲ್ಲರೂ ಪಾಲಿಸಬೇಕಿದ್ದು, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ನಡೆಯುವುದು ಸೂಕ್ತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆನೆ ದಂತ ಮಾರಾಟಕ್ಕೆ ಯತ್ನ; ನಾಲ್ವರ ಬಂಧನ, ಪ್ರಮುಖ ಆರೋಪಿ ಎಸ್ಕೇಪ್
ಅಭಿವೃದ್ಧಿಗಾಗಿ ರಾಜ್ಯ ಇಬ್ಬಾಗವಾಗಲಿ; ಮತ್ತೆ ಪ್ರತ್ಯೇಕ ರಾಜ್ಯದ ಪರ ಕತ್ತಿ ಬ್ಯಾಟಿಂಗ್
ಸರ್ಕಾರ ರಚನೆಗೆ ಸಿದ್ಧತೆ: ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ, ಶಿಂಧೆ ಉಪಮುಖ್ಯಮಂತ್ರಿ?
ಹುಣಸೂರು: ಮಹಿಳಾ ಕಾಲೇಜಿಗೆ ತುಳಸಿ ಜ್ಯುವೆಲ್ಲರ್ಸ್ನಿಂದ ಶುದ್ದ ಕುಡಿಯುವ ನೀರಿನ ಘಟಕ ಕೊಡುಗೆ
ಕೋಡಶಿಂಗೆಯಲ್ಲಿ ಸೋಲಾರ್ ಗಾಣ, ಗಿರಣಿ; ಎರಡು ತಿಂಗಳಿಂದ ಪ್ರಾಯೋಗಿಕ ಆರಂಭ