ಮಳೆಗಾಳಿಗೆ ಅಬ್ಬರಿಸುತ್ತಿರುವ ಕಡಲು: ಲಕ್ಷಾಂತರ ರೂ. ಹಾನಿ

Team Udayavani, Aug 17, 2018, 6:00 AM IST

1408mle2.jpg

ವಿಶೇಷ ವರದಿ – ಮಲ್ಪೆ: ಪ್ರಾಕೃತಿಕ ವೈಪರೀತ್ಯದಿಂದಾಗಿ ಕರಾವಳಿಯ ಜೀವನಾಡಿ ಯಾದ ಮೀನುಗಾರಿಕೆ  ಈ ಬಾರಿ ಋತುವಿನ ಆರಂಭದಲ್ಲಿ  ಕೈ ಕೊಟ್ಟಿದೆ. ಉತ್ತಮ ಆದಾಯಗಳಿಸುವ ಕನಸಿಗೆ  ಹವಾಮಾನ ತಣ್ಣೀರೆರಚಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಪಶ್ವಿ‌ಮ ಕರಾವಳಿಯಲ್ಲಿ  ರಭಸವಾದ ಗಾಳಿ ಮಳೆಯಾಗುತ್ತಿದ್ದು, ಪರಿಣಾಮ ಕರಾವಳಿಯಾದ್ಯಂತ ಮೀನುಗಾರಿಕೆ ಸ್ಥಗಿತಗೊಂಡಿದೆ. ಮಂಗಳೂರು, ಮಲ್ಪೆ, ಹೊನ್ನಾವರ, ಕಾರವಾರ ಮೊದಲಾದಡೆ ಮೀನುಗಾರಿಕೆ ನಡೆಸಲಾಗದೆ ದೋಣಿಗಳು ಲಂಗರು ಹಾಕಿವೆ.

ಮಳೆ ಮತ್ತು ಗಾಳಿಯಿಂದ ಸಮುದ್ರ ಉಗ್ರಸ್ವರೂಪ ತಾಳಿದ್ದು ದೋಣಿಗಳಿಗೆ ಕಡಲಿಗಿಳಿಯಲು ಸಾಧ್ಯವಾಗುತ್ತಿಲ್ಲ. ಸದಾ ಮೀನುಗಾರಿಕೆ ಚಟುವಟಿಕೆ ಇಲ್ಲದೆ ಕರಾವಳಿಯ ಬಂದರುಗಳು ಬಿಕೋ ಎನ್ನುತ್ತಿದೆ. ಮೀನುಗಾರ ಕಾರ್ಮಿಕ ಮಹಿಳೆಯರು ಸೇರಿದಂತೆ ಎಲ್ಲರಿಗೂ ಬಂದರಿನಲ್ಲಿ ಕೆಲಸ ಇಲ್ಲದಂತಾಗಿದೆ.

ಅರ್ಥಿಕ ಹೊಡೆತ
ಉತ್ತಮ ಮೀನುಗಳು ದೊರೆತು ಒಂದಷ್ಟು ಲಾಭತರುವ ಈ ಸಮಯದಲ್ಲಿ ಹವಾಮಾನ ಕೈಕೊಟ್ಟಿರುವುದು ಮೀನುಗಾರ ರಲ್ಲಿ ನಿರಾಶೆ ತಂದಿದೆ. ಕರಾವಳಿಯ ಮೀನುಗಾರಿಕೆಯ ಉದ್ಯಮದ ಕೋಟ್ಯಂತರ ರೂ.ಸಂಪಾದನೆಗೆ ಆರಂಭದಲ್ಲೇ ಕುತ್ತು  ಉಂಟಾಗಿದೆ. ಸಾಲ ಮಾಡಿ ಬೋಟ್‌ನ್ನು ಸಿದ್ದಗೊಳಿಸಿ, ಡೀಸೆಲ್‌, ಮಂಜುಗಡ್ಡೆ ತುಂಬಿಸಿ ಕಡಲಿಗಿಳಿದ ಮೀನುಗಾರರು ಮರಳಿ ಬಂದಿದ್ದು ಇವರಿಗೆ ಭಾರೀ ನಷ್ಟ ಉಂಟಾಗಿದೆ. ಕರಾವಳಿಯಾದ್ಯಂತ ಸಹಸ್ರಾರು ಮೀನುಗಾರಿಕೆ ಕುಟುಂಬಗಳು ಆರ್ಥಿಕ ಹೊಡೆತ ಎದುರಿಸುತ್ತಿವೆ.

ಅಪಾರ ನಷ್ಟ
ಕಳೆದ  ಮೂರ್‍ನಾಲ್ಕು ದಿನಗಳಿಂದ ಸಮುದ್ರದ ಅಲೆಯ ಹೊಡೆತಕ್ಕೆ ನಾಲ್ಕು ಮೀನುಗಾರಿಕೆ ಬೋಟ್‌ಗಳು ಈಗಾಗಲೇ ಮುಳುಗಡೆಗೊಂಡು ಕೋಟ್ಯಾಂತರ ನಷ್ಟ ಸಂಭವಿಸಿದೆ.  ಬಹುತೇಕ ಬೋಟ್‌ಗಳ ಎಂಜಿನ್‌, ವಯರ್‌, ಬಲೆ ಇನ್ನಿತರ ಉಪಕರಣಗಳು ಹಾನಿಗೀಡಾಗಿವೆ ಸೋಮವಾರ ಸಮುದ್ರದ ಮಧ್ಯೆ ಎಂಜಿನ್‌ ಕೆಟ್ಟು ಎರಡು ಆಳಸಮುದ್ರ ದೋಣಿಗಳು ಅಪಾಯಕ್ಕೆಸಿಲುಕಿತ್ತು.  ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ಬುಧವಾರ ಮುಂಜಾನೆ ಮಲ್ಪೆ ಬಂದರಿನ ಬೆಸಿನ್‌ನ ಹೊರಭಾಗದಲ್ಲಿ ನಿಲ್ಲಿಸಲಾಗಿದ್ದ ಬೋಟ್‌ಗಳ ಹಗ್ಗ ತುಂಡಾಗಿ ನೀರಿನ ಹರಿವಿಗೆ  ಚಲಿಸಲಾರಂಭಿಸಿತ್ತು. ಈ ಸಂದರ್ಭ ಒಂದಕ್ಕೊಂದು ಬೋಟ್‌ ಢಿಕ್ಕಿ ಹೊಡೆದು ಹಾನಿಗೊಂಡಿವೆ.

 ಕಡಲಿಗಿಳಿಯದಂತೆ ಸೂಚನೆ 
ಗಾಳಿ ಮತ್ತು ಸಮುದ್ರ ಸಹಜ ಸ್ಥಿತಿಗೆ ಬರುವವರೆಗೆ ಮೀನುಗಾರರು ಕಡಲಿಗೆ ಇಳಿಯದಂತೆ  ಮೀನುಗಾರರಿಗೆ ಸೂಚನೆ  ನೀಡಲಾಗಿದೆ. ಈ ಬಗ್ಗೆ ಮಲ್ಪೆ ಮೀನುಗಾರ ಸಂಘದಲ್ಲಿಯೂ ಕೂಡ ಮೈಕ್‌ ಮೂಲಕ ಘೋಷಣೆಯನ್ನು ಮಾಡುವಂತೆ ತಿಳಿಸಲಾಗಿದೆ.
–  ಪಾರ್ಶ್ವನಾಥ್‌
ಮೀನುಗಾರಿಕೆ ಉಪ ನಿರ್ದೇಶಕರು, ಉಡುಪಿ

 ಬೋಟ್‌ ಸಂಚಾರ ಅಸಾಧ್ಯ
ಬಿರುಸುಗೊಂಡಿದ್ದ ಸಮುದ್ರ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ.ತೀರ ಪ್ರದೇಶದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಬಂದರಿನ 
ಅಳಿವೆ ಬಾಗಿಲಿನಲ್ಲಿ ಬೋಟ್‌ ಸಂಚಾರ ಅಸಾಧ್ಯವಾಗಿದೆ. ಜಿಲ್ಲಾಧಿಕಾರಿಗಳು ಆ.18ರವರೆಗೆ ಯಾವುದೇ ಬೋಟ್‌ಗಳು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದ್ದಾರೆ.
– ಸತೀಶ್‌ ಕುಂದರ್‌, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

ನಾಲ್ಕು ದಿನಗಳಿಂದ ಮೀನುಗಾರಿಕೆ  ಸ್ಥಗಿತ 
ಕರಾವಳಿಯಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಲಾಂಬರ್‌ (ದೊಡ್ಡ ಅಲೆಗಳ ಅಪ್ಪಳಿಸುವಿಕೆ) ಬರುವುದರಿಂದ  ದೋಣಿಯನ್ನು ನಿಯಂತ್ರಣಕ್ಕೆ  ತರಲಾಗುವುದಿಲ್ಲ ಮತ್ತು ಬಲೆಯನ್ನು ನೀರಿಗಿಳಿಸಲು ಸಾಧ್ಯವಾಗುತ್ತಿಲ್ಲವಾದುದರಿಂದ ದಡ ಸೇರಿದ್ದೇವೆ.  4 ದಿನಗಳಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ.
– ಪಾಂಡುರಂಗ ಭಟ್ಕಳ , ಬೋಟಿನ ತಂಡೇಲ

ಟಾಪ್ ನ್ಯೂಸ್

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Udupi ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Udupi ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.