ಚರಂಡಿ ವ್ಯವಸ್ಥೆ ಸರಿಪಡಿಸುವ ಬೇಡಿಕೆ 


Team Udayavani, Aug 23, 2018, 6:10 AM IST

220818astro13.jpg

ಉಡುಪಿ ನಗರಸಭೆಯ ಬನ್ನಂಜೆ ವಾರ್ಡ್‌ ಮೂಲಸೌಕರ್ಯ ಅಭಿವೃದ್ಧಿಯ ಹೆಚ್ಚಿನ ಅಗತ್ಯವನ್ನು ಹೊಂದಿದೆ. ಪ್ರಮುಖವಾಗಿ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕೆನ್ನುವ ಬೇಡಿಕೆ ಇದೆ. ಮಳೆಗಾಲದಲ್ಲಿ ಚರಂಡಿ ಸರಿ ಇಲ್ಲದೇ ಸಮಸ್ಯೆಯಾಗುತ್ತಿದೆ.

ಉಡುಪಿ: ಬನ್ನಂಜೆ ವಾರ್ಡ್‌ನ ಉತ್ತರದಲ್ಲಿ ಪುತ್ತೂರು ಗ್ರಾಮ ಗಡಿ ಭಾಗವಾಗಿದ್ದು, ದಕ್ಷಿಣದಲ್ಲಿ ಬನ್ನಂಜೆ ಕಲ್ಸಂಕ ರಸ್ತೆ, ಹಳೆ ಜಿಲ್ಲಾಧಿಕಾರಿ ಕಚೇರಿಯಿಂದ ಹೈವೆಗೆ ತೆರಳಿ ರೈಸ್‌ ಮಿಲ್‌ಗೆ ಹೋಗುವ ರಸ್ತೆ, ಅಂಬಲಪಾಡಿ ಗ್ರಾ.ಪಂ. ಕ್ಷೇತ್ರ, ಪೂರ್ವದಲ್ಲಿ ಪುತ್ತೂರು ಗ್ರಾಮ ಮತ್ತು ಶಿವಳ್ಳಿ ಗ್ರಾಮ ಗಡಿ, ಹಳೆ ಜಿಲ್ಲಾಧಿಕಾರಿ ಕಚೇರಿ ಬನ್ನಂಜೆ ಸರ್ಕಲ್‌ನಿಂದ ಹೋಗುವ ರಸ್ತೆ, ಪಶ್ಚಿಮದಲ್ಲಿ ಅಂಬಲಪಾಡಿ ಗ್ರಾ.ಪಂ. ಕ್ಷೇತ್ರ ಮತ್ತು ಕೊಡವೂರು ಗ್ರಾಮ ಗಡಿ ಭಾಗವನ್ನು ಒಳಗೊಂಡಿದೆ. ಕೆಲವೊಂದು ಮೂಲ ಸೌಕರ್ಯಗಳನ್ನು ಒದಗಿಸಿದ್ದರೂ, ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ.

ನೇರ ಹಣಾಹಣಿಗೆ ವೇದಿಕೆ ಸಜ್ಜು
ಪ್ರಸ್ತುತ ಬನ್ನಂಜೆ ವಾರ್ಡ್‌ನ ಸದಸ್ಯರಾಗಿರುವ ಹರೀಶ ರಾಮ್‌ ಬನ್ನಂಜೆ 2013ರಲ್ಲಿ ಮೊದಲ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 1995ರಲ್ಲಿ ಕಾಂಗ್ರೆಸ್‌ನಿಂದ ಸೋಮಯ್ಯ ಬನ್ನಂಜೆ, 2002ರಲ್ಲಿ ಬಿಜೆಪಿಯಿಂದ ಜಾನಕಿ ಪಾಂಡು ಪೂಜಾರಿ, 2007ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ. ರವಿ ಅಮೀನ್‌ ಗೆಲುವು ಸಾಧಿಸಿ ನಗರಸಭೆ ಸದಸ್ಯರಾಗಿದ್ದರು. ಕಳೆದ ಬಾರಿ ಕಾಂಗ್ರೆಸ್‌ನಿಂದ ಪ್ರವೀಣ್‌ ಶೆಟ್ಟಿ, ಬಿಜೆಪಿಯಿಂದ ಬಿ. ರವಿ ಅಮೀನ್‌ ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿ ಹರೀಶ್‌ ರಾಮ್‌ 68 ಮತಗಳ ಅಂತರದಿಂದ ಗೆದ್ದಿದ್ದರು. ಬನ್ನಂಜೆ ವಾರ್ಡ್‌ ನಲ್ಲಿ ಈ ಬಾರಿ “ಮಹಿಳಾ ಮೀಸಲಾತಿ’ ಬಂದಿರುವ ನೆಲೆಯಲ್ಲಿ ಹರೀಶ್‌ ರಾಮ್‌ ಬನ್ನಂಜೆ ಅವರ ಪತ್ನಿ ಸವಿತಾ ಹರೀಶ್‌ರಾಮ್‌ ಇದೀಗ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ನಿಂದ ರೇಖಾ ಬಿ. ಪೂಜಾರಿ ಸ್ಪರ್ಧಿಸಲಿದ್ದರೆ. ಇಲ್ಲಿ ಒಳಚರಂಡಿ, ಮಳೆನೀರು ಚರಂಡಿ ಇಲ್ಲದೇ ಇರುವುದು ಪ್ರಮುಖ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವ ಸವಾಲು ಮುಂದಿನ ಸದಸ್ಯರಿಗೆ ಪ್ರಮುಖವಾಗಿ ಇದೆ. 

ಆದ ಕೆಲಸ
ರಸ್ತೆ 

ಬಿ.ಜೆ. ಕಂಪೌಂಡ್‌ ರಸ್ತೆ, ಗರಡಿ ರಸ್ತೆಯ ಎಡಕ್ಕೆ ಶನೀಶ್ವರ ದೇಗುಲಕ್ಕೆ ಹೋಗುವ ರಸ್ತೆ, ಕಲ್ಕುಡ ದೈವಸ್ಥಾನಕ್ಕೆ ಹೋಗುವ ರಸ್ತೆ, ಕಡ್ಲೆ ಓಣಿಯ ಮುಂದುವರಿದ ಹಾಗೂ ಎಡಭಾಗದ ರಸ್ತೆ, ರಾಜ್ಯ ಹೆದ್ದಾರಿಯಿಂದ ಗರಡಿ ತನಕ ರಸ್ತೆ, ಎಸ್‌ಪಿ ಆಫೀಸ್‌ ಹಿಂಬದಿ ಎಸ್‌ಸಿ ಕಾಲನಿ ರಸ್ತೆ ಕಾಮಗಾರಿ ಆಗಿದೆ.

ಕಾಂಕ್ರೀಟ್‌
ಮೂಡುಬೆಟ್ಟುವಿನಿಂದ ಮೂಡನಿಡಂಬೂರು ಗರಡಿವರೆಗೆ ತೋಡಿನ ಹೂಳೆತ್ತುವುದು, ತೋಡಿನ ಅಂಚಿನಲ್ಲಿರುವ ಮನೆಗಳ ಕಾಂಕ್ರೀಟ್‌ ಶಾಶ್ವತ ತಡೆಗೋಡೆ ನಿರ್ಮಾಣ, ಆದಿಉಡುಪಿ ಮೀನು ಮಾರುಕಟ್ಟೆ ಹಿಂಬದಿ ಆವರಣ ಗೋಡೆ, ಒಳಚರಂಡಿ ನಿರ್ಮಾಣ, ಜಿಲ್ಲಾ ಅಂಬೇಡ್ಕರ್‌ ಭವನ ಅಭಿವೃದ್ಧಿ, ಇತ್ಯಾದಿ ಕೆಲಸ ಆಗಿವೆ.

ಇಂಟರ್‌ಲಾಕ್‌
ಬನ್ನಂಜೆ ಮೆಟ್ರಿಕ್‌ ಪೂರ್ವ ವಸತಿ ನಿಲಯದ ಆವರಣಕ್ಕೆ ಇಂಟರ್‌ಲಾಕ್‌ ಅಳವಡಿಕೆ, ಆವರಣ ಗೋಡೆ ಎತ್ತರಿಸುವುದು, ಆದಿಉಡುಪಿ ಮೀನು ಮಾರುಕಟ್ಟೆಯ ಎದುರು ಇಂಟರ್‌ಲಾಕ್‌ ಅಳವಡಿಕೆ, ಆವರಣ ಗೋಡೆ ದುರಸ್ತಿಗೊಳಿಸಲಾಗಿದೆ.

ರಸ್ತೆ ಅಭಿವೃದ್ಧಿ
ಆದಿಉಡುಪಿ ಮೀನು ಮಾರುಕಟ್ಟೆಯ ಹಿಂಬದಿ ರಸ್ತೆ, ಅಂಬೇಡ್ಕರ್‌ ಭವನದ ಪಕ್ಕದ ರಸ್ತೆ, ಮಠದಬೆಟ್ಟುವಿನ ಸುರೇಶ್‌ ಅವರ ಮನೆಯ ಪಕ್ಕದ ಹೊಸದಾದ ರಸ್ತೆಗೆ ಜಲ್ಲಿ ಹಾಕಿ ಅಭಿವೃದ್ಧಿ, ಆದಿ ಡುಪಿ-ಕೊಡವೂರು-ಮೂಡುಬೆಟ್ಟು ರಸ್ತೆ ಅಗಲೀಕರಣ ಆಯ್ದ ಭಾಗ ಕಾಂಕ್ರೀಟ್‌ ಮಾಡಲಾಗಿದೆ.

ಆಗದ ಕೆಲಸ
ಒಳಚರಂಡಿ

ರಾ.ಹೆ. ಕಾರ್ತಿಕ್‌ ಸೆಂಟರ್‌ನಿಂದ ಹಳೆಯ ಯಮಹಾ ಶೋರೂಂ ಪಕ್ಕದ ರಸ್ತೆಯ ಒಳಚರಂಡಿ ಜಾಲ ಪುನರುಜ್ಜೀವನ.  ಮಠದಬೆಟ್ಟು, ಮೂಡನಿಡಂಬೂರು ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ನಿರ್ವಹಣೆ ಸಮರ್ಪಕವಾಗಿಲ್ಲ. ಇದರಿಂದ ಸಮಸ್ಯೆಯಾಗಿದೆ. 

ಕಾಮಗಾರಿ
ಆದಿಉಡುಪಿ ಶಾಲೆಯ ಹಿಂದಿನ ಜೈಜವಾನ್‌ ಮಾರ್ಗದ ರಸ್ತೆ ಫೇವರ್‌ ಫಿನಿಶ್‌ ಡಾಮರೀಕರಣ ಅರ್ಧ ಕೆಲಸ ಮುಗಿದಿದ್ದು, ಉಳಿದ ಅರ್ಧ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಸ್ವಚ್ಛತೆ
ಆದಿಉಡುಪಿ ಮೀನು ಮಾರುಕಟ್ಟೆಯಲ್ಲಿ ಮಟನ್‌ ವ್ಯಾಪಾರಸ್ಥರಿಗೆ ನಗರಸಭೆಯಿಂದ ಮಾಂಸ ಮಾರಾಟಕ್ಕೆ ಮಾತ್ರ  ಅನುಮತಿ ನೀಡಲಾಗಿದ್ದರೂ, ಅಲ್ಲಿಯೇ ಪ್ರಾಣಿಗಳ ವಧೆ ನಡೆಯುತ್ತಿರುವುದರಿಂದ ಸ್ವತ್ಛತೆಗೆ ತೊಡಕಾಗಿದೆ. ಒಳಚರಂಡಿಯ ಸರಾಗ ಹರಿವಿಗೆ ಅಡ್ಡಿಯಾಗಿದೆ. 

ತಡೆಗೋಡೆ
ಮಠದಬೆಟ್ಟುವಿನಿಂದ ಮುಂದುವರಿದ ಭಾಗದ ರಸ್ತೆಗಳು, ಮೂಡನಿಡಂಬೂರು ಗರಡಿ ಪಕ್ಕದ ಕಲ್ಸಂಕದ ಮುಖ್ಯ ಚರಂಡಿಗೆ ತಡೆಗೋಡೆ ರಚನೆಯಾಗಬೇಕಿದೆ. ಚರಂಡಿಗೆ ತಡೆಗೋಡೆ ಇಲ್ಲದಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಪುರುಷರು: 1142
ಮಹಿಳೆಯರು: 1185
ಒಟ್ಟು  ಮತದಾರರು:2327

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.