ಮಲಬಾರ್‌ ಗೋಲ್ಡ್‌ ಆಭರಣ ಹೆಮ್ಮೆ: ವಿಶ್ವಸುಂದರಿ ಮಾನುಷಿ ಚಿಲ್ಲರ್‌


Team Udayavani, Jul 8, 2018, 6:00 AM IST

v-36.jpg

ಉಡುಪಿ: ಅಪೂರ್ವ ಸಂಗ್ರಹ ಹೊಂದಿರುವ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಆಭರಣ ಗಳೆಂದರೆ ನನಗೆ ಹೆಮ್ಮೆ. 6 ತಿಂಗಳಿಂದ ಮಲಬಾರ್‌ ಗೋಲ್ಡ್‌ ರಾಯಭಾರಿ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು 2017ರ ವಿಶ್ವಸುಂದರಿ ಮಾನುಷಿ ಚಿಲ್ಲರ್‌ ಹೇಳಿದರು.

ಉಡುಪಿ ಗೀತಾಂಜಲಿ ರಸ್ತೆಯ ಗೀತಾಂಜಲಿ ಶೋಪರ್‌ ಸಿಟಿಗೆ ಸ್ಥಳಾಂತರಗೊಂಡಿರುವ “ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌’ನ ವಿಶಾಲ ಮಳಿಗೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯುತ್ಕೃಷ್ಟ ಆಭರಣ ವಿನ್ಯಾಸಗಳ ಜತೆಗೆ ತನ್ನ ಲಾಭದ ಶೇ. 5ನ್ನು ಶಿಕ್ಷಣ, ಸಮಾಜ ಸೇವೆಗೆ ಮಲಬಾರ್‌ ಗೋಲ್ಡ್‌ ವಿನಿಯೋಗಿಸುತ್ತಿದೆ ಎಂದರು.

ಮಲಬಾರ್‌ ಗ್ರೂಪ್‌ನ ಎಂಡಿ ಆಷರ್‌ ಒ. ಮಾತನಾಡಿ, ಅತ್ಯಂತ ದೊಡ್ಡ ಶೋರೂಂ ಇದು. ಗ್ರಾಹಕರ ಪ್ರೋತ್ಸಾಹದಿಂದ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆದಿದೆ. 9 ರಾಷ್ಟ್ರಗಳಲ್ಲಿ 220 ಮಳಿಗೆಗಳನ್ನು ಹೊಂದಿದೆ ಎಂದರು. ರೀಜನಲ್‌ ಹೆಡ್‌ ಇಫ‌ೂ ರೆಹಮಾನ್‌, ಉಡುಪಿ ಮಳಿಗೆಯ ಹಫೀಜಿ ರೆಹಮಾನ್‌ ಉಪಸ್ಥಿತರಿದ್ದರು. ಮೊದಲ ಗ್ರಾಹಕರಾದ ಪುರುಷೋತ್ತಮ ಶೆಟ್ಟಿ, ಸೀಮಾ ಶೆಟ್ಟಿ, ಸೀಮಾ ಪ್ರಭು ಅವರಿಗೆ ಮಾನುಷಿ ಛಿಲ್ಲರ್‌ ಚಿನ್ನಾಭರಣ ಹಸ್ತಾಂತರಿಸಿದರು.

ಸುವ್ಯವಸ್ಥಿತ, ವಿಶಾಲ ಮಳಿಗೆ 
ವಿಶಾಲ ಮಳಿಗೆಯಲ್ಲಿ ಚಿನ್ನ, ವಜ್ರ, ಪ್ಲಾಟಿನಂ, ಬೆಳ್ಳಿ ಮತ್ತು ವಧುವಿನ ಆಭರಣಗಳು, ಪಾರ್ಟಿವೇರ್‌ ಮತ್ತು ಕ್ಯಾಷುವಲ್‌ ವೇರ್‌ ವಿನ್ಯಾಸಗಳ ಜತೆಗೆ ಬ್ರ್ಯಾಂಡೆಡ್‌ ವಾಚ್‌ಗಳ ಅಪಾರ ಸಂಗ್ರಹವಿದೆ. ರಾಜ್ಯದ ಸಂಸ್ಕೃತಿ ಮತ್ತು ಆಚರಣೆಗೆ ತಕ್ಕುದಾದ ಚಿನ್ನ ಮತ್ತು ಡೈಮಂಡ್ಸ್‌ಗಳ ಪ್ರದರ್ಶನವಿದೆ. ವಿಶಾಲ ಕಾರು ಪಾರ್ಕಿಂಗ್‌ ವ್ಯವಸ್ಥೆ ಇದೆ. ಗ್ರಾಹಕರ ಅಭಿರುಚಿ ಮತ್ತು ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾದ ವಿನ್ಯಾಸವನ್ನು ರೂಪಿಸುವಲ್ಲಿ “ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌’ ಪ್ರಸಿದ್ಧವಾಗಿದೆ. ಮೈನ್‌, ಎರಾ, ಎಥಿ°ಕ್ಸ್‌, ಡಿವೈನ್‌, ಪ್ರಶಿಯ, ಸ್ಟಾರ್‌ಲೆಟ್‌ ಮೊದಲಾದ ಉಪಬ್ರ್ಯಾಂಡ್‌ಗಳ ಆಕರ್ಷಕ ಸಂಗ್ರಹವಿದೆ ಎಂದು ಉಡುಪಿ ಶೋರೂಂ ವ್ಯವಸ್ಥಾಪಕರು ತಿಳಿಸಿದರು. 

ಉತ್ತಮ ಸ್ಪಂದನೆ 
ಉದ್ಘಾಟನಾ ಕೊಡುಗೆಯಾಗಿ ಜು. 7ರಿಂದ 15ರ ವರೆಗೆ ಎಲ್ಲ ವಜ್ರಗಳ ಮೇಲೆ ಶೇ. 10 ದರಕಡಿತ ಮತ್ತು ಪ್ರತಿ ಗ್ರಾಂ ಚಿನ್ನಾಭರಣಗಳಿಗೆ 100 ರೂ. ದರ ಕಡಿತ, ಪ್ರತೀ ಖರೀದಿಗೆ ಒಂದು ಉಚಿತ ಗಿಫ್ಟ್ ಇರುತ್ತದೆ. ಮೊದಲ ದಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸ್ವಚ್ಛತೆ, ಸೇವಾ ಕಾರ್ಯಗಳಿಗೆ ಆದ್ಯತೆ
ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮಿಸ್‌ವರ್ಲ್ಡ್ ಮಾನುಷಿ ಚಿಲ್ಲರ್‌, ಇನ್ನೊಂದು ವರ್ಷ ಕಾಲ ಸಿನೆಮಾ ಬಗ್ಗೆ ಯೋಚಿಸುವುದಿಲ್ಲ. ಮಿಸ್‌ವರ್ಲ್ಡ್ ಪ್ರಾಜೆಕ್ಟ್ಗಳಲ್ಲಿ 180 ಕಾರ್ಯಕ್ರಮಗಳಿದ್ದು, ಸ್ವಚ್ಛತೆಗೆ ಒತ್ತು ನೀಡುತ್ತೇನೆ. ದ.ಆಫ್ರಿಕಾದಲ್ಲೂ ಸೇವಾ ಕಾರ್ಯ ನಡೆಸುತ್ತೇನೆ. ನಮ್ಮ ದೇಶದಲ್ಲಿ ಶೇ. 23 ಹೆಣ್ಮಕ್ಕಳು ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಭಾರತವು ಹೆಣ್ಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂದು ನನಗೇನೂ ಅನಿಸಿಲ್ಲ. ಭಾರತದ ಹೆಣ್ಮಗಳಾಗಿರುವುದಕ್ಕೆ ಹೆಮ್ಮೆಯಿದೆ ಎಂದರು. ಮಾನುಷಿ ಅವರನ್ನು ನೋಡಲು, ಸೆಲ್ಫಿ ತೆಗೆದುಕೊಳ್ಳಲು ಮತ್ತು ಆಟೋಗ್ರಾಫ್ ಪಡೆಯಲು ನೂರಾರು ಮಂದಿ ಸೇರಿದ್ದರು. ಮಾನುಷಿ ಸ್ವಲ್ಪ ಹೊತ್ತು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದರು.
 

ಟಾಪ್ ನ್ಯೂಸ್

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

B. S. Yediyurappa ಕುತಂತ್ರಿಗಳಿಗೆ ಜನರಿಂದ ತಕ್ಕ ಪಾಠ

B. S. Yediyurappa ಕುತಂತ್ರಿಗಳಿಗೆ ಜನರಿಂದ ತಕ್ಕ ಪಾಠ

Channapatna ಆಸ್ಪತ್ರೆಯಲ್ಲಿ ಸ್ಟೆತೊಸ್ಕೋಪ್‌ ಹಿಡಿದ ಸಂಸದ ಡಾ| ಮಂಜುನಾಥ್‌Channapatna ಆಸ್ಪತ್ರೆಯಲ್ಲಿ ಸ್ಟೆತೊಸ್ಕೋಪ್‌ ಹಿಡಿದ ಸಂಸದ ಡಾ| ಮಂಜುನಾಥ್‌

Channapatna ಆಸ್ಪತ್ರೆಯಲ್ಲಿ ಸ್ಟೆತೊಸ್ಕೋಪ್‌ ಹಿಡಿದ ಸಂಸದ ಡಾ| ಮಂಜುನಾಥ್‌

ಆರೋಗ್ಯ ಇಲಾಖೆ ಸಿಬಂದಿ ವರ್ಗಾವಣೆಗೆ ಅಧಿಸೂಚನೆ

ಆರೋಗ್ಯ ಇಲಾಖೆ ಸಿಬಂದಿ ವರ್ಗಾವಣೆಗೆ ಅಧಿಸೂಚನೆ

ಅತ್ಯಾಚಾರ ಪ್ರಕರಣ: ಪ್ರಜ್ವಲ್‌ಗೆ ವೈದ್ಯಕೀಯ ತಪಾಸಣೆ

ಅತ್ಯಾಚಾರ ಪ್ರಕರಣ: ಪ್ರಜ್ವಲ್‌ಗೆ ವೈದ್ಯಕೀಯ ತಪಾಸಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಬೈಕ್‌-ಸ್ಕೂಟರ್‌ ಢಿಕ್ಕಿ; ಗಾಯ

Udupi ಬೈಕ್‌-ಸ್ಕೂಟರ್‌ ಢಿಕ್ಕಿ; ಗಾಯ

ಬಕ್ರೀದ್‌: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

Bakrid: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

ಎಂಇಐಎಲ್‌ “ಇಂಡಿಯ 5000 ಅವಾರ್ಡ್ಸ್‌’ ಪುರಸ್ಕಾರಕ್ಕೆ ಆಯ್ಕೆ

Manipal ಎಂಇಐಎಲ್‌ “ಇಂಡಿಯಾ 5000 ಅವಾರ್ಡ್ಸ್‌’ ಪುರಸ್ಕಾರಕ್ಕೆ ಆಯ್ಕೆ

4-udupi

ರಾಮ ನಿರ್ಯಾಣದ ಪ್ರವಚನಗೈಯುತ್ತಲೇ ಮೋಕ್ಷಯಾನ ಕೈಗೊಂಡ ದ್ವೈತ ವೇದಾಂತ ವಿಚಕ್ಷಣ

3-application

Udupi: ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

1-sadadasdsd

PM ಮೋದಿಯವರೊಂದಿಗೆ ಕೃಷಿ ಸಂವಾದಕ್ಕೆ ಯಲ್ಲಾಪುರದ ಲತಾ ಹೆಗಡೆ ಆಯ್ಕೆ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

1-wewwqe

Manipur ಸಿಎಂ ಬಿರೇನ್‌ ಸಿಂಗ್‌ ನಿವಾಸದ ಬಳಿ ಬೆಂಕಿ ಆಕಸ್ಮಿಕ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.