Udayavni Special

ಎಪಿಎಂಸಿ ಮುಖ್ಯ ದ್ವಾರ ಪರಿಶೀಲನೆ


Team Udayavani, May 31, 2020, 6:57 AM IST

ಎಪಿಎಂಸಿ ಮುಖ್ಯ ದ್ವಾರ ಪರಿಶೀಲನೆ

ಶಿರಸಿ: ಕೋವಿಡ್‌ 19 ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ರೈತರ ಹಿತದೃಷ್ಟಿಯಿಂದ ಎಪಿಎಂಸಿ ಆವಾರದೊಳಗೆ ಸಾರ್ವಜನಿಕ ವಾಹನಗಳ ಅನಗತ್ಯ ಪ್ರವೇಶಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೆಹಳ್ಳಿ ತಿಳಿಸಿದ್ದಾರೆ.

ಎಪಿಎಂಸಿ ಆವಾರದೊಳಗೆ ಹೆಚ್ಚಿನ ಬಂದೋಬಸ್ತ್ ಒದಗಿಸುವ ನಿಟ್ಟಿನಲ್ಲಿ ಮೂರು ಮುಖ್ಯ ದ್ವಾರಗಳಿಗೆ ಪ್ರತ್ಯೇಕ ಗೇಟ್‌ ವ್ಯವಸ್ಥೆ ಮಾಡಲಾಗುತ್ತಿದೆ. ಟಿಆರ್‌ಸಿ ಬ್ಯಾಂಕ್‌ ಹಿಂಭಾಗ ಹಾಗೂ ಟಿಎಸ್‌ಎಸ್‌ ಪಕ್ಕದಲ್ಲಿ ಗೇಟ್‌ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ಟಿಎಂಎಸ್‌ ಪಕ್ಕದಲ್ಲಿ ಗೇಟ್‌ ಅಳವಡಿಕೆ ಇನ್ನೊಂದು ವಾರದೊಳಗೆ ಅಂತ್ಯಗೊಳ್ಳಲಿದೆ.

ಎಪಿಎಂಸಿ ಆವಾರದಲ್ಲಿ ರಾತ್ರಿ ವೇಳೆ ಹೊರ ಭಾಗಗಳಿಂದ ಆಗಮಿಸಿದ ಹಾಗೂ ಖಾಸಗಿ ವಾಹನಗಳು ನಿತ್ಯ ಪಾರ್ಕಿಂಗ್‌ ಮಾಡುತ್ತಿರುವುದು ಕಂಡುಬಂದಿತ್ತು. ಖಾಸಗಿ ವಾಹನಗಳ ಮಾಲೀಕರಿಗೆ ಈಗಾಗಲೆ ನೋಟಿಸ್‌ ನೀಡಿ ಎಚ್ಚರಿಕೆ ಕೂಡ ನೀಡಲಾಗಿದೆ. ಸರ್ಕಾರದ ಆದೇಶದಂತೆ ಮೂರು ಗೇಟುಗಳ ಪೈಕಿ ಟಿಆರ್‌ಸಿ ಬ್ಯಾಂಕ್‌ ಹಿಂಬದಿಯಲ್ಲಿನ ಗೇಟ್‌ನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಬಂದ್‌ ಮಾಡಲಾಗಿದೆ. ಸಾರ್ವಜನಿಕರು ಮಾರುಕಟ್ಟೆಯ ಹೊರ ವಲಯದ ರಸ್ತೆ ಬಳಸಬೇಕೆಂದು ಮನವಿ ಮಾಡಿದ್ದಾರೆ.

ಮಾರುಕಟ್ಟೆಯೊಳಗೆ ಆಗಮಿಸುವ ಹೊರ ರಾಜ್ಯಗಳ ವಾಹನಗಳು ಟಿಎಸ್‌ಎಸ್‌ ಪಕ್ಕದ ಗೇಟ್‌ ಮೂಲಕ ಆಗಮಿಸಿ ಟಿಎಮ್‌ಎಸ್‌ ಪಕ್ಕದ ಗೇಟ್‌ ಮೂಲಕ ನಿರ್ಗಮಿಸಬೇಕು. ಹೊರ ಭಾಗಗಳಿಗಂದ ಆಗಮಿಸುವ ವಾಹನ ಚಾಲಕರು, ಕ್ಲೀನರ್‌ಗಳ ಸಂಪೂರ್ಣ ವಿವರ, ವಾಹನದ ಆಗಮನ ಹಾಗೂ ನಿರ್ಗಮನ ವೇಳೆಯನ್ನು ಗೇಟ್‌ ಬಳಿಯಲ್ಲಿರುವ ಅಧಿಕಾರಿಗಳು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ತಹಶೀಲ್ದಾರ್‌ ಎಂ.ಆರ್‌ ಕುಲಕರ್ಣಿ, ಮಾರ್ಕೆಟ್‌ ಯಾರ್ಡ್‌ ಪಿಎಸ್‌ಐ ನಾಗಪ್ಪ ಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಪಿಎಂಸಿ ಮುಖ್ಯ ಕಾರ್ಯನಿರ್ವಾಹಕಿ ವಿಜಯಲಕ್ಷ್ಮೀ ಸೇರಿದಂತೆ ಎಪಿಎಂಸಿ ಸದಸ್ಯರು, ಅಧಿ ಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಇಂದು(ಅ.16) ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಮಂಜಮ್ಮ ಜೋಗತಿ ಸಂದರ್ಶನ

ಇಂದು(ಅ.16) ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಮಂಜಮ್ಮ ಜೋಗತಿ ಸಂದರ್ಶನ

ಸಿದ್ದರಾಮಯ್ಯ

ಕುರ್ಚಿ ಉಳಿಸಿಕೊಳ್ಳಲು ಸಿಎಂ ಆರ್ ಎಸ್ಎಸ್ ಹೊಗಳುತ್ತಿದ್ದಾರೆ: ಸಿದ್ದರಾಮಯ್ಯ

ಆಯುಧಪೂಜೆ-ವಿಜಯದಶಮಿ ಎಫೆಕ್ಟ್

ಆಯುಧಪೂಜೆ-ವಿಜಯದಶಮಿ ಎಫೆಕ್ಟ್: ಎರಡೇ ದಿನದಲ್ಲಿ 6,200-6,500 ಟನ್‌ ತ್ಯಾಜ್ಯ ಸೃಷ್ಟಿ

kotigobba 3

ಕೋಟಿಗೊಬ್ಬ-3 ಚಿತ್ರ ವಿಮರ್ಶೆ: ಸತ್ಯ ಶೋಧನೆಯಲ್ಲಿ ದೊರೆತ ಶಿವ ಸಾಂಗತ್ಯ

ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣವೆಂದು ಜನರಿಗೆ ಗೊತ್ತಾಗಲಿ: ಎಚ್ ಡಿಕೆ

ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣವೆಂದು ಜನರಿಗೆ ಗೊತ್ತಾಗಲಿ: ಎಚ್ ಡಿಕೆ

rahul dravid

ಕೊನೆಗೂ ಫಲ ನೀಡಿತು ಗಂಗೂಲಿ ಪ್ರಯತ್ನ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sirsi news

ಬನವಾಸಿಯ ಉಮಾಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸತೀಶ್ ಜಾರಕಿಹೊಳಿ

14

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಪ್ರತಿಭೆ: ನಯನಾ

Bhatkala news

ಶ್ರೀ ನಾಗಯಕ್ಷೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲಸಿಕಾಕರಣ ಸಭಾಂಗಣ ಲೋಕಾರ್ಪಣೆ

dandeli news

ಉಳವಿ ರಸ್ತೆಯಲ್ಲಿ ಪ್ರವಾಸಿಗರಿಗೆ ಶಾಕ್‌ ಕೊಟ್ಟ ಕಪ್ಪು ಚಿರತೆ !

honnavara news

ಹೊನ್ನಾವರ ಬಂದರಿನಿಂದ ಎಂಟು ಜಿಲ್ಲೆಗಳ ಅಭಿವೃದ್ಧಿ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

7

ಬುದ್ಧನ ಕಂಚಿನ ಮೂರ್ತಿ ಪ್ರತಿಷ್ಠಾಪನೆ

ನಗರದ ದೇವಾಲಯಗಳಲ್ಲಿ ದಸರಾ ವೈಭವ

ನಗರದ ದೇವಾಲಯಗಳಲ್ಲಿ ದಸರಾ ವೈಭವ

6

ಕೋವಿಡ್‌ನಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡಿ

ಇಂದು(ಅ.16) ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಮಂಜಮ್ಮ ಜೋಗತಿ ಸಂದರ್ಶನ

ಇಂದು(ಅ.16) ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಮಂಜಮ್ಮ ಜೋಗತಿ ಸಂದರ್ಶನ

ಸಿದ್ದರಾಮಯ್ಯ

ಕುರ್ಚಿ ಉಳಿಸಿಕೊಳ್ಳಲು ಸಿಎಂ ಆರ್ ಎಸ್ಎಸ್ ಹೊಗಳುತ್ತಿದ್ದಾರೆ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.