ಬೆಟ್ಟಕೊಪ್ಪ ಕೆರೆ ಒಡ್ಡು ದುರಸ್ತಿ ಮುಕ್ತಾಯ


Team Udayavani, May 13, 2019, 5:18 PM IST

nc-2

ಶಿರಸಿ: ಕಳೆದ ಮಳೆಗಾಲದಲ್ಲಿ ಕೆರೆಯ ಒಂದು ಪಾರ್ಶ್ವದ ಒಡ್ಡು ಒಡೆದು ಅಪಾಯದ ಕರೆಗಂಟೆ ಬಾರಿಸಿದ್ದ ತಾಲೂಕಿನ ಬೆಟ್ಟಕೊಪ್ಪ ಗ್ರಾಮದ ಕೆರೆ ಬಹುತೇಕ ದುರಸ್ತಿಯಾಗಿದ್ದು, ಇದೀಗ ನಳನಳಿಸುವಂತೆ ಆಗಿದೆ.

ಗ್ರಾಮದ ಸರ್ವೆ ನಂಬರ್‌ 49ರಲ್ಲಿ ಇರುವ ಒಂದು ಎಕರೆ ವಿಸ್ತೀರ್ಣದ ಕೆರೆ ಕಳೆದ ಮಳೆಗಾಲದಲ್ಲಿ ತೂತು ಬಿದ್ದು ಒಡ್ಡು ಒಡೆಯುವ ಅಪಾಯ ಇತ್ತು. ಒಂದುವರೆ ದಶಕಗಳ ಹಿಂದೆ ಕೆರೆಯ ಹೂಳನ್ನು ಎತ್ತಿ ಚೆಂದಗೊಳಿಸಲಾಗಿದ್ದ ಕೆರೆಯ ನೀರೂ ನಿಲ್ಲದಂತಹ ಡೊಂಬ ಬಿದ್ದಿದ್ದು ಹಾಗೂ ತಕ್ಷಣ ದುರಸ್ತಿ ಮಾಡಿಸದೇ ಇದ್ದರೆ ಕೆರೆಯ ಕೆಳಭಾಗದಲ್ಲಿದ್ದ ಇಪ್ಪತ್ತು ಎಕರೆಗೂ ಅಧಿಕ ಪ್ರದೇಶದ ಅಡಕೆ ತೋಟ, ಭತ್ತದ ಗದ್ದೆಗೆ ಹಾನಿ ಉಂಟಾಗುವ ಸಾಧ್ಯತೆ ಇತ್ತು.

ಇದನ್ನು ಗಮನಿಸಿದ ಗ್ರಾಮಸ್ಥರಿಂದ ಕಾಯಂ ದುರಸ್ತಿ ಮಾಡಿಸಲು ಸಾಧ್ಯವಾಗದೇ ಇದ್ದಾಗ ಜನಪ್ರತಿನಿಧಿಗಳ ಬಳಿ ವಿನಂತಿಸಿಕೊಂಡಿದ್ದರು. ಸ್ಪಂದಿಸಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಪಂ ಸದಸ್ಯೆ ಉಷಾ ಹೆಗಡೆ ಅವರ ಪ್ರಸ್ತಾವನೆಗೆ ಈ ಹಿಂದೆ ಜಿ.ಪಂ ಸಿಇಒ ರೋಶನ್‌ ಅನುಮತಿ ನೀಡಿದ್ದರು. ಇತರರು ಕೆರೆ ಅಭಿವೃದ್ಧಿ ಮಾಡುವಂತೆ ಸೂಚನೆ ನೀಡಿದ್ದರು.

ಜಿಪಂ ಇಂಜನೀಯರಿಂಗ ಶಿರಸಿ ಉಪ ವಿಭಾಗದಿಂದ ಕೆರೆಗಳ ನಿರ್ವಹಣೆ ಯೋಜನೆ ಅಡಿ ತಾತ್ಕಾಲಿಕ ದುರಸ್ತಿ ನಡೆಸಲು 3.17 ಲಕ್ಷ ರೂ. ಮೊತ್ತದಲ್ಲಿ ಕಾಮಗಾರಿಗೆ ಅನುಮತಿ ಸಿಕ್ಕಿತ್ತು. ಎರಡು ತಿಂಗಳ ಕಾರ್ಯದಿಂದ 50 ಅಡಿ ಉದ್ದದಲ್ಲಿ ಏರಿಯ ಪುನರ್‌ ನಿರ್ಮಾಣ ಮಾಡಲಾಗಿದೆ. ಇನ್ನೊಂದೆಡೆ ಕುಸಿದಿದ್ದ ಪಿಚ್ಚಿಂಗ್‌ ಮರಳಿ ಕಟ್ಟಲಾಗಿದೆ. ಕೆರೆಯಲ್ಲಿ ಇದೀಗ ನೀರು ನಿಂತಿದ್ದು, ಈ ಭಾಗದ ಜನ ಜಾನುವಾರುಗಳಿಗೆ, ಪಶು ಪಕ್ಷಿಗಳಿಗೆ, ರೈತರ ತೋಟಗಳಿಗೆ ನೆರವಾಗಿದೆ.

ಇಲಾಖೆ ಅಧಿಕಾರಿ ರಾಮಚಂದ್ರ ಗಾಂವಕರ್‌ ಹಾಗೂ ಇತರ ಅಧಿಕಾರಿಗಳ ಸೂಚನೆ ಪ್ರಕಾರ ಗುತ್ತಿಗೆದಾರ ಗಣೇಶ ಆಚಾರಿ ಕಾಮಗಾರಿ ನಡೆಸಿದ್ದಾರೆ. ಜಿಪಂ ಸದಸ್ಯೆ ಉಷಾ ಹೆಗಡೆ ಸ್ಥಳ ಭೇಟಿ ಮಾಡಿ ಕಾಮಗಾರಿಯನ್ನೂ ವೀಕ್ಷಿಸಿದ್ದರು. ಇದೀಗ ಕೆರೆ ನಳನಳಿಸುತ್ತಿದ್ದು, ತುಂಬಿದ ಕೆರೆ ನೋಡಲು ಕೂಡ ಸುಂದರವಾಗಿದೆ ಎಂಬುದು ಅಭಿಮತವಾಗಿದೆ.

ಇದೀಗ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ವಾರಾಂತ್ಯದಲ್ಲಿ ಕಾಮಗಾರಿ ಪೂರ್ಣವಾಗಲಿದೆ. ಕೆರೆಯ ನೀರನ್ನೂ ಉಳಿಸಿ ಒಡ್ಡಿನ ದುರಸ್ತಿ ಮಾಡಿದ್ದು ಗ್ರಾಮಸ್ಥರ ಹರ್ಷಕ್ಕೆ ಕಾರಣವಾಗಿದೆ.

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shirur landslide; Green signal for National highway traffic in three or four days?

Shirur landslide; ರಾ.ಹೆದ್ದಾರಿ ಸಂಚಾರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಗ್ರೀನ್ ಸಿಗ್ನಲ್ ?

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

1-ccc-aa

Shiruru hill collapse; 10 ದಿನದಿಂದ ಇಲ್ಲೇ ಇದ್ದೇನೆ : ಟೀಕೆಗಳಿಗೆ ಶಾಸಕ ಸೈಲ್‌ ಬೇಸರ

1–eewr-aa-aa

Shiruru hill collapse; ಮಣ್ಣು ತೆಗೆಯುವ ಕಾರ್ಯಾಚರಣೆ ವೇಳೆ ಸಿಕ್ಕ ಹೋಟೆಲ್ ಅವಶೇಷಗಳು

1–eewr-aa

Shiruru hill collapse; ನದಿಯ ನಾಲ್ಕು ಕಡೆ ಅವಶೇಷಗಳು ಬೆಳಕಿಗೆ:ಇಂದ್ರಬಾಲನ್‌ ನಂಬಿಯಾರ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.