ಮನುಷ್ಯ ಇತಿಹಾಸ ಅಧ್ಯಯನ ನಡೆಯಲಿ

Team Udayavani, May 5, 2019, 5:05 PM IST

nc-4

ಶಿರಸಿ: ಮನುಷ್ಯನ ಇತಿಹಾಸ ಅಧ್ಯಯನಕ್ಕೆ ಸಿಗುವ ಆಕರಗಳು ಕಡಿಮೆ. ಈ ಕಾರಣದಿಂದ ಡಿಎನ್‌ಎ ಸೇರಿದಂತೆ ವೈಜ್ಞಾನಿಕವಾಗಿಯೂ ಅಧ್ಯಯನದ ವಿಸ್ತಾರ ಆಗಬೇಕಾಗಿದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರಮೋದ ಗಾಯಿ ಹೇಳಿದರು.

ತಾಲೂಕಿನ ಸ್ವರ್ಣವಲ್ಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಇತಿಹಾಸ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ದಿನದ 24 ಗಂಟೆಯಲ್ಲಿ ಇತಿಹಾಸದ ದಾಖಲೆ ಸಿಗುವುದು ಕೇವಲ ಒಂದು ನಿಮಿಷ ಮಾತ್ರ. ಉಳಿದವುಗಳಿಗೆ ದಾಖಲೆ ಇಲ್ಲ. ಈ ಕಾರಣದಿಂದ ಎಲುಬುಗಳು ಸಿಕ್ಕರೂ ಅದರ ಡಿಎನ್‌ಎ ನೋಡಿಯೂ ವಿಸ್ತಾರ ಮಾಡಿಕೊಳ್ಳಬೇಕು ಎಂದ ಅವರು, ಇದಕ್ಕಾಗಿ ಇತಿಹಾಸದ ವಿಸ್ತಾರ ಅಧ್ಯಯನ ನಡೆಯಬೇಕು ಎಂದು ಪ್ರತಿಪಾದಿಸಿದರು.

ಸಾಮಂತರ ಇತಿಹಾಸ ಸೇರಿದಂತೆ ಯಾವುದೇ ಇತಿಹಾಸದ ಅಧ್ಯಯನಗಳು, ಸಂಶೋಧನೆಗಳು ಹೆಚ್ಚಾದಂತೆ ಮಾನವನ ಉಗಮ ಕಂಡು ಹಿಡಿಯುವ ವಿಧಾನ ಕೂಡ ಬದಲಾಗುತ್ತವೆ. ಇದಕ್ಕಾಗಿ ಜಗತ್ತಿನಲ್ಲಿ ಸತತ ಪ್ರಯತ್ನ ಆಗುತ್ತಿದೆ. ಇತಿಹಾಸ ಶೋಧನೆಗಳು ಆಕರಗಳು ಬೇಕಿದೆ. ಮಾನವನ ಗತ ಕಾಲದ ಬದುಕಿನಲ್ಲಿ ನಡೆದ ಘಟನೆಗಳು ಆಧರಿಸಿ ಅಧ್ಯಯನ ನಡೆಯುತ್ತದೆ ಎಂದರು.

ಇತಿಹಾಸ ತಜ್ಞ ಡಾ| ಅ.ಸುಂದರ್‌ ಮಾತನಾಡಿ, ಭಾರತೀಯ ಶಿಲ್ಪಗಳಲ್ಲಿ ವೈಜ್ಞಾನಿಕವಾಗಿಯೇ ಆಧ್ಯಾತ್ಮಿಕತೆ ಅಳವಡಿಸಿಕೊಳ್ಳಲಾಗಿದೆ ಎಂದರು.

ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ, ರಾಷ್ಟ್ರಕೂಟರು ಹಾವೇರಿ ಮತ್ತು ಉತ್ತರ ಕನ್ನಡ ಭಾಗಕ್ಕೆ ವಲಸೆ ಬಂದಿದ್ದರು. ಅವರು ಏಕೆ ಇಲ್ಲಿ ಬಂದರು ಎಂಬ ಬಗ್ಗೆ ಇದುವರೆಗೂ ಹೆಚ್ಚಿನ ಸಂಶೋಧನೆಗಳು ಆಗಿಲ್ಲ. ಅವರ ಅವಧಿಯಲ್ಲಿ ಸ್ಥಾಪಿಸಿರುವ ಕೋಣನ ತಲೆ ಕಲ್ಲುಗಳ ಬಗ್ಗೆ ಅಧ್ಯಯನ ಮಾಡಲು ಯುವ ಸಂಶೋಧಕರಿಗೆ ಅವಕಾಶವಿದೆ ಎಂದರು.

ಐಸಿಎಚ್ಆರ್‌ ಸದಸ್ಯ ಡಾ| ಎಂ. ಕೊಟ್ರೇಶ, ಇಡೀ ಕರ್ನಾಟಕ ಪ್ರಾದೇಶಿಕ ಇತಿಹಾಸಕ್ಕೆ ಐತಿಹಾಸಿಕ ಸಮ್ಮೇಳನ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ. ಹೆಗಡೆ, ನೆಲ, ಜಲ ವೃಕ್ಷಕ್ಕೆ ಅದರದ್ದೇ ಆದ ಇತಿಹಾಸ ಮಹತ್ವವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಚಾಲಕ ಇತಿಹಾಸ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ, ಪ್ರಾದೇಶಿಕ ಇತಿಹಾಸಗಳನ್ನು ಜೋಡಿಸುವ ಕಾರ್ಯ ಇದು. ಇತಿಹಾಸ ಅಕಾಡೆಮಿ, ಇತಿಹಾಸ ಕಾಂಗ್ರೆಸ್‌ ಬಿಟ್ಟರೆ ಜಾಗೃತ ವೇದಿಕೆಯೇ ಸಮ್ಮೇಳನ, ಇತಿಹಾಸ ಜಾಗೃತಿ ಮಾಡುತ್ತಿದೆ ಎಂದರು. ಸಂಸ್ಕೃಗಳ ಚಿಂತಕ ಬಾಲಸುಬ್ರಹ್ಮಣ್ಯ ಕೆಸ್ತೂರು, ಮಠದ ಅಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ಮನಳ್ಳಿ, ಚಂದ್ರರಾಜ ಜೈನ್‌, ಎನ್‌.ಎನ್‌. ಹೆಗಡೆ ವಾಜಗದ್ದೆ, ಎನ್‌.ಎನ್‌. ಹೆಗಡೆ ಕಲಗದ್ದೆ, ಸುಧೀರ ಪರಂಜಪೆ, ರತ್ನಾಕರ ಬಾಡಲಕೊಪ್ಪ ಇದ್ದರು. ವಿನಾಯಕ ಎಂ. ಭಟ್ಟ ನಿರ್ವಹಿಸಿದರು.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shirur landslide; Green signal for National highway traffic in three or four days?

Shirur landslide; ರಾ.ಹೆದ್ದಾರಿ ಸಂಚಾರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಗ್ರೀನ್ ಸಿಗ್ನಲ್ ?

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

1-ccc-aa

Shiruru hill collapse; 10 ದಿನದಿಂದ ಇಲ್ಲೇ ಇದ್ದೇನೆ : ಟೀಕೆಗಳಿಗೆ ಶಾಸಕ ಸೈಲ್‌ ಬೇಸರ

1–eewr-aa-aa

Shiruru hill collapse; ಮಣ್ಣು ತೆಗೆಯುವ ಕಾರ್ಯಾಚರಣೆ ವೇಳೆ ಸಿಕ್ಕ ಹೋಟೆಲ್ ಅವಶೇಷಗಳು

1–eewr-aa

Shiruru hill collapse; ನದಿಯ ನಾಲ್ಕು ಕಡೆ ಅವಶೇಷಗಳು ಬೆಳಕಿಗೆ:ಇಂದ್ರಬಾಲನ್‌ ನಂಬಿಯಾರ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.