ಮುಂದುವರಿಯಲಿದೆಯೇ ಸಮ್ಮಿಶ್ರ ಸರ್ಕಸ್‌?

•ಭಟ್ಕಳ ಪುರಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌ •ಮೀಸಲಾತಿಯೂ ಪ್ರಕಟ

Team Udayavani, May 11, 2019, 3:55 PM IST

ಭಟ್ಕಳ ಪುರಸಭೆ ಕಟ್ಟಡದ ನೋಟ.

ಭಟ್ಕಳ: ರಾಜ್ಯದಲ್ಲಿ ಇನ್ನೇನು ಲೋಕಸಭಾ ಚುನಾವಣೆ ಬಿಸಿ ಆರುತ್ತಿದ್ದಂತೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದ ಸಮ್ಮಿಶ್ರ ಸರಕಾರದ ಸರ್ಕಸ್‌ ಇಲ್ಲಿಯೂ ಮುಂದುವರಿಯಲಿದೆಯೇ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸಲಿದ್ದಾರೆಯೇ ಎನ್ನುವುದು ಕಾದು ನೋಡಬೇಕಿದೆ.

ರಾಜ್ಯ ಚುನಾವಣಾ ಆಯೋಗ 8 ನಗರಸಭೆ, 33 ಪುರಸಭೆ ಹಾಗೂ 22 ಪಟ್ಟಣ ಪಂಚಾಯತ್‌ ಪ್ರತಿನಿಧಿಗಳ ಚುನಾವಣೆಗೆ ಮೇ 29ರಂದು ದಿನಾಂಕ ನಿಗದಿ ಮಾಡಿದ್ದು, ಭಟ್ಕಳ ಪುರಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆದಂತಾಗಿದೆ.

23 ವಾರ್ಡ್‌ಗಳ ಮೀಸಲಾತಿಯನ್ನು ಸರಕಾರ 2018 ಜುಲೈ 30ರಂದೇ ಬಿಡುಗಡೆಗೊಳಿಸಿತ್ತು. 23 ವಾರ್ಡ್‌ಗಳ ಮೀಸಲಾತಿ ವಾರ್ಡ್‌ ನಂ. 1ರಲ್ಲಿ ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್‌ ನಂ. 2ರಲ್ಲಿ ಸಾಮಾನ್ಯ, ವಾರ್ಡ್‌ ನಂ. 3ರಲ್ಲಿ ಹಿಂದುಳಿವರ್ಗ ಬ ಮಹಿಳೆ, ವಾರ್ಡ್‌ ನಂ. 4ರಲ್ಲಿ ಸಾಮಾನ್ಯ, ವಾರ್ಡ್‌ ನಂ.5ರಲ್ಲಿ ಪರಿಶಿಷ್ಟ ಪಂಗಡ, ವಾರ್ಡ್‌ ನಂ.6ರಲ್ಲಿ ಹಿಂದುಳಿದ ವರ್ಗ ಅ, ವಾರ್ಡ್‌ ನಂ.7ರಲ್ಲಿ ಸಾಮಾನ್ಯ ಮಹಿಳೆ, ವಾರ್ಡ್‌ ನಂ. 8ರಲ್ಲಿ ಹಿಂದುಳಿದ ವರ್ಗ ಬ, ವಾರ್ಡ್‌ ನಂ. 9ರಲ್ಲಿ ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್‌ ನಂ. 10ರಲ್ಲಿ ಸಾಮಾನ್ಯ ಮಹಿಳೆ, ವಾರ್ಡ್‌ ನಂ.11ರಲ್ಲಿ ಸಾಮಾನ್ಯ, ವಾರ್ಡ್‌ ನಂ. 12ರಲ್ಲಿ ಹಿಂದುಳಿದ ವರ್ಗ ಅ, ವಾರ್ಡ್‌ ನಂ. 13ರಲ್ಲಿ ಸಾಮಾನ್ಯ ಮಹಿಳೆ, ವಾರ್ಡ್‌ ನಂ. 14ರಲ್ಲಿ ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್‌ ನಂ.15ರಲ್ಲಿ ಸಾಮಾನ್ಯ, ವಾರ್ಡ್‌ ನಂ.16ರಲ್ಲಿ ಸಾಮಾನ್ಯ, ವಾರ್ಡ್‌ ನಂ.17ರಲ್ಲಿ ಹಿಂದುಳಿದ ವರ್ಗ ಅ, ವಾರ್ಡ್‌ ನಂ.18ರಲ್ಲಿ ಸಾಮಾನ್ಯ ಮಹಿಳೆ, ವಾರ್ಡ್‌ ನಂ. 19ರಲ್ಲಿ ಪರಿಶಿಷ್ಟ ಜಾತಿ, ವಾರ್ಡ್‌ ನಂ.20ರಲ್ಲಿ ಸಾಮಾನ್ಯ, ವಾರ್ಡ್‌ ನಂ. 21ರಲ್ಲಿ ಸಾಮಾನ್ಯ ಮಹಿಳೆ, ವಾರ್ಡ್‌ ನಂ.22ರಲ್ಲಿ ಸಾಮಾನ್ಯ ಮಹಿಳೆ, ವಾರ್ಡ್‌ ನಂ.23ರಲ್ಲಿ ಸಾಮಾನ್ಯ ಮೀಸಲಾತಿ ಬಂದಿದೆ. ಭಟ್ಕಳ ಪುರಸಭೆಯಲ್ಲಿ ಸುಮಾರು 13 ಸ್ಥಾನಗಳಲ್ಲಿ ಅಲ್ಪಸಂಖ್ಯಾತ ಮತದಾರರೇ ನಿರ್ಣಾಯಕರಾಗಿದ್ದು ತಂಜೀಂ ಬೆಂಬಲಿತ ಅಭ್ಯರ್ಥಿಗಳೇ ಅವಿರೋಧವಾಗಿ ಆಯ್ಕೆಯಾಗುವುದು ಸಾಮಾನ್ಯ. ಉಳಿದಂತೆಯೂ 10 ವಾರ್ಡ್‌ಗಳಲ್ಲಿ ಚುನಾವಣೆಯಾಗುವುದು ಖಚಿತ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ