ನಾಗಪ್ಪ ಗೌಡರಿಗೆ ಯಕ್ಷ ಶ್ರೀ ಪ್ರಶಸ್ತಿ ಪ್ರದಾನ

Team Udayavani, Jan 12, 2020, 4:31 PM IST

uk-tdy-2

ಭಟ್ಕಳ: ಯಕ್ಷಗಾನದ ಪಾರಂಪರಿಕ ಪ್ರಾಮುಖ್ಯತೆ ಉಳಿಸಿ ಬೆಳೆಸುವುದರೊಂದಿಗೆ ಬದಲಾವಣೆಯಿಂದಾಗಿ ಮೂಲ ರೂಪವನ್ನೇ ಕಳೆದುಕೊಳ್ಳುತ್ತಿರುವುದನ್ನು ತಡೆಯಬೇಕಾಗಿದೆ ಎಂದು ಯಕ್ಷಗಾನ ಕಲಾವಿದ ಹಾಗೂ ಯಕ್ಷ ಗುರು ಸುಜಯೀಂದ್ರ ಹಂದೆ ಹೇಳಿದರು.

ಅವರು ಮುರ್ಡೇಶ್ವರದ ಯಕ್ಷಧಾಮದಲ್ಲಿ ಯಕ್ಷರಕ್ಷೆ ಹಾಗೂ ಲಯನ್ಸ್‌ ಕ್ಲಬ್‌ ವತಿಯಿಂದ ನಡೆದ ದಿ| ಯಶೋಧಾ ಭಟ್ಟ ಸಂಸ್ಮರಣಾ ಕಾರ್ಯಕ್ರಮ ಹಾಗೂ ಯಕ್ಷಕಲಾ ಚಿಂತನೆ, ಯಕ್ಷಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಕಲಾವಿದರು ಯಕ್ಷಗಾನದ ಹಿಂದಿನ ರೂಪ ಮತ್ತು ಪರಂಪರೆ ಕಾಪಾಡಿಕೊಂಡು ಹೋಗ ಬೇಕಾಗಿದೆ. ಬದಲಾವಣೆ ಸನ್ನಿವೇಷದಲ್ಲಿ ಹಿಂದಿನ ಪರಂಪರೆ ತನ್ನ ರೂಪನ್ನೇ ಕಳೆದುಕೊಳ್ಳುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದರು. ಮುರ್ಡೇಶ್ವರ ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾಮದಾಸ ಶೇಟ್‌ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಅತಿಥಿ ಕುಂದಾಪುರದ ಪತ್ರಕರ್ತ ಭಾಸ್ಕರ ಶೆಟ್ಟಿ ಮಾತನಾಡಿ, ಯಕ್ಷಗಾನಕ್ಕೆ ತನ್ನದೇ ಆದ ಪರಂಪರೆ ಇದ್ದು, ತೆರೆಯ ಮರೆಯಲ್ಲಿ ಸಾಕಷ್ಟು ಕಲಾವಿದರು, ಕಲಾ ಸಾಧಕರು ಇದ್ದಾರೆ. ಯಕ್ಷಗಾನ ಉಳಿಸಿ ಬೆಳೆಸಲು ಕೊಡುಗೆ ನೀಡಿದಅವರನ್ನೆಲ್ಲಾ ಗುರುತಿಸುವ ಕೆಲಸ ಆಗಬೇಕಾಗಿದೆ ಎಂದರು.

ಮುಖ್ಯ ಅತಿಥಿ ದಂತವೈದ್ಯ ಡಾ| ರಾಘವ ಭಟ್‌ ಮಾತನಾಡಿ, ಯಕ್ಷರಕ್ಷೆ ಎನ್ನುವುದು ನನ್ನ ತಂದೆ ಡಾ| ಐ.ಆರ್‌. ಭಟ್‌ ರ ಕನಸಾಗಿತ್ತು. ಇಂದು ನೂರಾರು ಯಕ್ಷಗಾನ, ಸನ್ಮಾನ, ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದು ಕಲಾವಿದರಿಗೆ ಆಶ್ರಯಧಾತರಾಗಿ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಇದುನಮ್ಮೆಲ್ಲರಿಗೂ ಹೆಮ್ಮೆ ವಿಚಾರವಾಗಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು.

ಯಕ್ಷರಕ್ಷೆ ಅಧ್ಯಕ್ಷ ಡಾ| ಐ.ಆರ್‌. ಭಟ್‌ ಉಪಸ್ಥಿತರಿದ್ದರು. ಹಿರಿಯ ಯಕ್ಷಗಾನ ಕಲಾವಿದ ನಾಗಪ್ಪ ಗೌಡ ಗುಣವಂತೆ ಅವರಿಗೆ ಯಕ್ಷಶ್ರೀ ಪ್ರಶಸ್ತಿ, ಕಲಾವಿದ ಸುಬ್ರಾಯ ಭಟ್‌ ಗುಂಡಿಬೈಲ್‌ ಅವರಿಗೆ ಕೊಪ್ಪದಮಕ್ಕಿ ಈರಪ್ಪ ಭಾಗವತ ಸಂಸ್ಮರಣಾ ಪ್ರಶಸ್ತಿ, ಪಶುವೈದ್ಯ ಡಾ| ಗೌರೀಶ ಪಡುಕೋಣೆ ಶಿರಾಣಿ ಅವರಿಗೆ ದಿ| ವಸಂತಿ ರಾವ್‌ ಸಂಸ್ಮರಣಾ ಪ್ರಶಸ್ತಿ ನೀಡಲಾಯಿತು. ಲಯನ್ಸ್‌ ಕ್ಲಬ್‌ ಸದಸ್ಯರು, ಸಮಾಜ ಸೇವಕ ನಾಗರಾಜ ಭಟ್‌, ಗಜಾನನ ಶೆಟ್ಟಿ, ಮಂಜುನಾಥ ದೇವಡಿಗರನ್ನೂ ಸನ್ಮಾನಿಸಲಾಯಿತು. ಯಕ್ಷರಕ್ಕೆ ಕಾರ್ಯದರ್ಶಿ, ಉಪನ್ಯಾಸಕ ಗಣಪತಿ ಕಾಯ್ಕಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಕೃಷ್ಣ ಹೆಗಡೆ ನಿರೂಪಿಸಿದರು. ನಂತರ ಅತಿಥಿ ಕಲಾವಿದರಿಂದ ಇಂದ್ರ ನಂದನ ವಾನರೇಂದ್ರ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಟಾಪ್ ನ್ಯೂಸ್

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadadasdsd

PM ಮೋದಿಯವರೊಂದಿಗೆ ಕೃಷಿ ಸಂವಾದಕ್ಕೆ ಯಲ್ಲಾಪುರದ ಲತಾ ಹೆಗಡೆ ಆಯ್ಕೆ

Bhatkal ಕೋಣಗಳ ಅಕ್ರಮ ಸಾಗಾಟ: ಇಬ್ಬರ ಬಂಧನ

Bhatkal ಕೋಣಗಳ ಅಕ್ರಮ ಸಾಗಾಟ: ಇಬ್ಬರ ಬಂಧನ

ಬಾಗಿಲು ಮುರಿದು 16 ಲಕ್ಷಕ್ಕೂ ಅಧಿಕ ಮೌಲ್ಯದ ನಗ ನಗದು ಕಳವು

ಬಾಗಿಲು ಮುರಿದು 16 ಲಕ್ಷಕ್ಕೂ ಅಧಿಕ ಮೌಲ್ಯದ ನಗ ನಗದು ಕಳವು

Yellapur: ಸೇತುವೆ ತಳಭಾಗದಲ್ಲಿ ಶೇಖರಣೆಗೊಂಡ ಮರಮಟ್ಟುಗಳಿಗೆ ಆಕಸ್ಮಿಕ ಬೆಂಕಿ

Yellapur: ಸೇತುವೆ ತಳಭಾಗದಲ್ಲಿ ಶೇಖರಣೆಗೊಂಡ ಮರಮಟ್ಟುಗಳಿಗೆ ಆಕಸ್ಮಿಕ ಬೆಂಕಿ

Dandeli: ಸ್ಕೂಟಿಗೆ ಕಾರು ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

Dandeli: ಹಿಮ್ಮುಖವಾಗಿ ಚಲಾಯಿಸಿದ ಕಾರು ಸ್ಕೂಟಿಗೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

udupi-1

Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.