ಬಿಜೆಪಿ ಗೆಲುವಿಗೆ ಶ್ರಮಿಸಿ: ಶಾಸಕ ಮುದ್ನಾಳ

Team Udayavani, Aug 14, 2018, 2:05 PM IST

yad-2.jpg

ಯಾದಗಿರಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಸಾಕಷ್ಟು ಆಕಾಂಕ್ಷಿಗಳಿರುವುದು ಸಹಜ. ಕಾರ್ಯಕರ್ತರು ಟಿಕೆಟ್‌ ಸಿಗದಿದ್ದಕ್ಕೆ ಹತಾಶರಾಗದೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ನಗರದ ಎನ್‌.ವಿ.ಎಂ. ಸಭಾಂಗಣದಲ್ಲಿ ಜರುಗಿದ ಯಾದಗಿರಿ ನಗರಸಭೆ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ನಾವು ಗೆದ್ದಂತೆ ಎಂದು ತಿಳಿದು ಚುನಾವಣೆ ಯುದ್ಧಕ್ಕೆ ಸನ್ನದ್ಧರಾಗಬೇಕೆಂದು ಹುರಿದುಂಬಿಸಿದರು.

ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ನಮ್ಮನ್ನು ಸೋಲಿಸಲು ಅನ್ಯ ಪಕ್ಷಗಳಿಂದ ಸಾಧ್ಯವಿಲ್ಲ. ಆದರೆ ನಮ್ಮಲ್ಲಿರುವ ಅಸಮಾಧಾನಿತರೇ ಪಕ್ಷದ ಸೋಲಿಗೆ ಕಾರಣರಾಗುವ ಸಾಧ್ಯತೆ ಇದೆ. ಆದ್ದರಿಂದ ಯಾರೂ ಕೂಡ ಪಕ್ಷದ ನಿಲುವಿಗೆ ವಿರೋಧ ತೋರಬಾರದು ಎಂದು ಕರೆ ನೀಡಿದರು.

ನಗರಸಭೆ ಚುನಾವಣಾ ಉಸ್ತುವಾರಿ ಮಾಜಿ ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ನಗರದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿದ್ದು, ಯಾರಿಗೆ ಟಿಕೆಟ್‌ ಸಿಕ್ಕರೂ ಒಮ್ಮತದಿಂದ ಕೆಲಸ ಮಾಡುವ ಮನೋಭಾವ ಹೊಂದಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರು ಮಾತನಾಡಿ, ಒಟ್ಟು 31 ವಾರ್ಡ್‌ಗಳ ಪೈಕಿ ಕನಿಷ್ಟ 25ಕ್ಕೂ ಮಿಕ್ಕಿ ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಲಿದೆ. ಎಲ್ಲ ರೀತಿಯಿಂದಲೂ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ನಗರಸಭೆ ಆಡಳಿತ ಬಿಜೆಪಿ ಕೈವಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಡಾ| ಶರಣಭೂಪಾಲರೆಡ್ಡಿ ನಾಯ್ಕಲ್‌, ಭಾರತ ಆಹಾರ ನಿಗಮದ ಸದಸ್ಯ ಖಂಡಪ್ಪ ದಾಸನ್‌, ದೇವಿಂದ್ರನಾಥನಾದ ಮಾತನಾಡಿದರು. ಸಭೆಯಲ್ಲಿ 31 ವಾರ್ಡಿನ ಆಕಾಂಕ್ಷಿಗಳು, ನಗರಾಧ್ಯಕ್ಷ ಹಣಮಂತ ಇಟಗಿ, ಶರಣಗೌಡ ಬಾಡಿಯಾಳ, ಎಸ್‌.ಪಿ. ನಾಡೇಕರ್‌, ಶಿವುಕುಮಾರ ದೊಡ್ಡಮನಿ, ರವಿ ಬಾಪುರೆ, ನಾಜಿಮ್‌ ಅಹಮ್ಮದ್‌, ವೆಂಕಟರೆಡ್ಡಿ ಅಬ್ಬೆತುಮಕೂರು, ರಮೇಶ ದೊಡ್ಡಮನಿ, ಪರಶುರಾಮ ಕುರಕುಂದಿ, ಸುರೇಶ
ಆಕಳ ಸೇರಿದಂತೆ ಇನ್ನಿತರರು ಇದ್ದರು. ಮಾರುತಿ ಕಲಾಲ್‌ ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

1-weweqwe

IPL; ವಾಂಖೇಡೆಯಲ್ಲಿ ಬೌಲರ್‌ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

1-weweqwe

IPL; ವಾಂಖೇಡೆಯಲ್ಲಿ ಬೌಲರ್‌ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.