Election Results Out: ಸಂಸದರಿಗೆ ಸಂಬಳ ಎಷ್ಟಿದೆ, ಏನೇನು ಸೌಲಭ್ಯ ಸಿಗುತ್ತೆ ಗೊತ್ತಾ?!

ಪ್ರಧಾನಮಂತ್ರಿಯ ಸಂಬಳ ಎಷ್ಟು?

Team Udayavani, Jun 7, 2024, 11:22 AM IST

Election Results Out: ಸಂಸದರಿಗೆ ಸಂಬಳ ಎಷ್ಟಿದೆ, ಏನೇನು ಸೌಲಭ್ಯ ಸಿಗುತ್ತೆ ಗೊತ್ತಾ?!

ಇತ್ತೀಚೆಗಷ್ಟೇ ಜಗತ್ತಿನ ಬಹುದೊಡ್ಡ ಪ್ರಜಾತಂತ್ರ ದೇಶವಾದ ಭಾರತದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಪಡೆದಿದೆ. ವಿಪಕ್ಷಗಳ INDIA ಮೈತ್ರಿಕೂಟ ಈ ಬಾರಿ 232 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಪ್ರಬಲ ಪ್ರತಿಪಕ್ಷಗಳಾಗಿ ಹೊರಹೊಮ್ಮಿವೆ. ಹೊಸ ಸಂಸದರು ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದು, ಸಂಸದರಿಗೆ ಸಿಗುವ ಸಂಬಳ ಎಷ್ಟು? ಭತ್ಯೆ, ಇತರ ಸೌಲಭ್ಯಗಳು ಯಾವುದು ಎಂಬುದು ಮಾಹಿತಿ ಇಲ್ಲಿದೆ…

ಇದನ್ನೂ ಓದಿ:Election: ಉಪೇಂದ್ರ ಯಾವಾಗ ಗೆಲ್ಲುವುದು….?: ಉತ್ತರ ನೀಡಿದ ರಿಯಲ್ ಸ್ಟಾರ್

ಸಂಸದರ ಸಂಬಳ ಎಷ್ಟು?

ಒಬ್ಬ ಸಂಸದರ ಬೇಸಿಕ್‌ ಸಂಬಳ ತಿಂಗಳಿಗೆ ಒಂದು ಲಕ್ಷ ರೂಪಾಯಿ. ಹಣದುಬ್ಬರ, ಜೀವನ ನಿರ್ವಹಣೆಯ ಆಧಾರದ ಮೇಲೆ 2018ರಲ್ಲಿ ಪರಿಷ್ಕೃತಗೊಂಡ ವೇತನ ಹೆಚ್ಚಳದ ಬಳಿಕದ ಅಂಕಿ-ಅಂಶ(ಸಂಬಳ) ಇದಾಗಿದೆ.

ಸಂಸದರಿಗೆ ದೊರಕುವ ಭತ್ಯೆ ಮತ್ತು ಇತರ ಸೌಲಭ್ಯಗಳು ಯಾವುದು?

ಕ್ಷೇತ್ರದ ಭತ್ಯೆ:

ಒಬ್ಬ‌ ಸಂಸದರು ಕ್ಷೇತ್ರದ ಭತ್ಯೆಯಾಗಿ ಪ್ರತಿ ತಿಂಗಳು 70,000 ರೂಪಾಯಿ ಪಡೆಯುತ್ತಾರೆ. ಕಚೇರಿ ನಿರ್ವಹಣೆ ಹಾಗೂ ಕ್ಷೇತ್ರದೊಳಗಿನ ತಿರುಗಾಟದ ಖರ್ಚು-ವೆಚ್ಚ ಇದರಲ್ಲಿ ಸೇರ್ಪಡೆಯಾಗಲಿದೆ.

ಕಚೇರಿ ಖರ್ಚು:

ಒಬ್ಬ ಸಂಸದರು ಕಚೇರಿ ನಿರ್ವಹಣೆಗಾಗಿ ಪ್ರತಿ ತಿಂಗಳು 60,000 ರೂಪಾಯಿ ಪಡೆಯುತ್ತಾರೆ. ಸ್ಟೇಷನರಿ, ದೂರವಾಣಿ ಸಂಪರ್ಕ, ಕಚೇರಿ ಸಿಬಂದಿಗಳ ಸಂಬಳ ಇದರಲ್ಲಿ ಸೇರಿದೆ.

ದಿನದ ಭತ್ಯೆ:

ಸಂಸತ್‌ ಕಲಾಪ, ಸಮಿತಿ ಸಭೆಗೆ ಹಾಜರಾಗುವ ವೇಳೆ ಸಂಸದರಿಗೆ ಪ್ರತಿದಿನ 2,000 ಸಾವಿರ ರೂಪಾಯಿ ಭತ್ಯೆ ಲಭ್ಯವಾಗಲಿದೆ. ಇದು ಊಟೋಪಚಾರ, ವಸತಿಯ ಖರ್ಚನ್ನು ಒಳಗೊಂಡಿದೆ.

ಪ್ರಯಾಣ ಭತ್ಯೆ:

ಸಂಸದರಿಗೆ ಪ್ರತಿವರ್ಷ ತಾವೂ ಸೇರಿದಂತೆ ಕುಟುಂಬ ಸದಸ್ಯರು 34 ಬಾರಿ ಉಚಿತವಾಗಿ ವಿಮಾನ ಪ್ರಯಾಣ ಕೈಗೊಳ್ಳಬಹುದು. ಅದೇ ರೀತಿ ವೈಯಕ್ತಿಕವಾಗಿ ಹಾಗೂ ಸಂಸದರ ಕಾರ್ಯಗಳಿಗಾಗಿ ಉಚಿತವಾಗಿ ಫಸ್ಟ್‌ ಕ್ಲಾಸ್‌ ರೈಲು ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲ ತಮ್ಮ ಕ್ಷೇತ್ರ ಸುತ್ತಾಟಕ್ಕಾಗಿ ಮೈಲೇಜ್‌ ಭತ್ಯೆಯನ್ನು ಪಡೆಯಬಹುದಾಗಿದೆ.

ಮನೆ ಹಾಗೂ ವಾಸ್ತವ್ಯ ಭತ್ಯೆ:

ಐದು ವರ್ಷಗಳ ಕಾಲಾವಧಿಯಲ್ಲಿ ಸಂಸದರಿಗೆ ಪ್ರಮುಖ ಸ್ಥಳಗಳಲ್ಲಿ ಬಾಡಿಗೆ ರಹಿತ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಸಂಸದರು ಬಂಗ್ಲೆ, ಫ್ಲ್ಯಾಟ್‌ ಅಥವಾ ಹಾಸ್ಟೆಲ್‌ ರೂಂ ಪಡೆದುಕೊಳ್ಳಬಹುದಾಗಿದೆ. ಯಾವ ಸಂಸದರು Official ನಿವಾಸವನ್ನು ಬಳಸಲು ಇಷ್ಟಪಡದಿದ್ದಲ್ಲಿ ಅವರು ಪ್ರತಿ ತಿಂಗಳು ಹೌಸಿಂಗ್‌ ಭತ್ಯೆಗಾಗಿ 2,00,000 ಲಕ್ಷ ರೂಪಾಯಿ ಪಡೆದುಕೊಳ್ಳಬಹುದಾಗಿದೆ.

ಔಷಧೋಪಚಾರ ಭತ್ಯೆ:

ಸಂಸದರು ಮತ್ತು ಅವರ ಕುಟುಂಬ ಸದಸ್ಯರು ಸೆಂಟ್ರಲ್‌ ಗವರ್ನಮೆಂಟ್‌ ಹೆಲ್ತ್‌ ಸ್ಕೀಮ್‌ ( CGHS) ನಡಿ ಉಚಿತ ಔಷಧೋಪಚಾರ ಪಡೆಯಬಹುದು. ಈ ಯೋಜನೆಯಡಿ ಸರ್ಕಾರಿ ಅಥವಾ ಆಯ್ದ ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಪಿಂಚಣಿ:

ಒಂದು ಅವಧಿಗೆ ಸಂಸದರಾದ ಮಾಜಿ ಸದಸ್ಯರು ಪ್ರತಿ ತಿಂಗಳು 25,000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಪ್ರತಿ ಹೆಚ್ಚುವರಿ ವರ್ಷದ ಸೇವೆಗಾಗಿ ಪ್ರತಿ ತಿಂಗಳು 2,000 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಪಡೆಯಲಿದ್ದಾರೆ.

ದೂರವಾಣಿ ಮತ್ತು ಇಂಟರ್ನೆಟ್‌ ಭತ್ಯೆ:

ಸಂಸದರು ವಾರ್ಷಿಕವಾಗಿ 1,50,000 ಸಾವಿರ ಉಚಿತ ದೂರವಾಣಿ ಕರೆ ಮಾಡಲು ಅವಕಾಶವಿದೆ. ಅದೇ ರೀತಿ ಉಚಿತ ಹೈಸ್ಪೀಡ್‌ ಇಂಟರ್ನೆಟ್‌ ಸೌಲಭ್ಯ ಮನೆ ಮತ್ತು ಕಚೇರಿಗಳಿಗೆ ನೀಡಲಾಗುತ್ತದೆ.

ನೀರು ಮತ್ತು ವಿದ್ಯುತ್‌ ಭತ್ಯೆ:

ಸಂಸದರುಗಳಿಗೆ ವಾರ್ಷಿಕವಾಗಿ 50,000 ಯೂನಿಟ್‌ ಗಳವರೆಗೆ ಉಚಿತ ವಿದ್ಯುತ್ ಹಾಗೂ 4,000 ಸಾವಿರ ಲೀಟರ್‌ ಉಚಿತ ನೀರು ಪಡೆಯಬಹುದಾಗಿದೆ.

ಪ್ರಧಾನಮಂತ್ರಿಯ ಸಂಬಳ ಎಷ್ಟು?

ಭಾರತದಲ್ಲಿ ಪ್ರಧಾನ ಮಂತ್ರಿಯಾದವರು ಪ್ರತಿ ತಿಂಗಳು 1.66 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ವೇತನ 50,000 ರೂಪಾಯಿ ಮೂಲ ವೇತನವನ್ನು ಒಳಗೊಂಡಿದೆ. ಜೊತೆಗೆ ಪ್ರಧಾನ ಮಂತ್ರಿಯವರು ವೆಚ್ಚದ ಭತ್ಯೆಯಾಗಿ 3,000 ರೂ. ಹಾಗೂ ಸಂಸದೀಯ ಭತ್ಯೆ 45,000 ಸಾವಿರ ರೂ. ಪಡೆಯುತ್ತಾರೆ.

ಅಲ್ಲದೇ ಪ್ರತಿದಿನದ ಭತ್ಯೆ 2,000 ರೂಪಾಯಿ ಪಡೆಯುತ್ತಾರೆ. ತಿಂಗಳ ಭತ್ಯೆಯನ್ನು ಹೊರತುಪಡಿಸಿ ಪ್ರಧಾನಿಯವರಿಗೆ ಹಲವು ಸೌಲಭ್ಯಗಳಿವೆ. ಉಚಿತ ನಿವಾಸ, ಎಸ್‌ ಪಿಜಿ ಭದ್ರತೆ. ದೇಶ-ವಿದೇಶ ಪ್ರವಾಸ. ಈ ಎಲ್ಲಾ ಖರ್ಚುಗಳನ್ನು ಸರ್ಕಾರ ಪಾವತಿಸುತ್ತದೆ.

ಟಾಪ್ ನ್ಯೂಸ್

9

ಡಿಸೆಂಬರ್‌ 20, 21 ಹಾಗೂ 22 ರಂದು ಮಂಡ್ಯ ಸಾಹಿತ್ಯ ಸಮ್ಮೇಳನ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

8

Bollywood: ಮದ್ವೆ ದಿನವೇ ಕುಡಿದು ಟೈಟ್‌ ಆದ ಸೋನಾಕ್ಷಿ ಗಂಡ; ಎಣ್ಣೆ ಪಾರ್ಟಿ ಎಂದ ನೆಟ್ಟಿಗರು

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

Udupi: ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಗರುಡ ಗ್ಯಾಂಗ್ ವಾರ್ ಆರೋಪಿಗಳು

Udupi: ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಗರುಡ ಗ್ಯಾಂಗ್ ವಾರ್ ಆರೋಪಿಗಳು

Milk

KMF: ರಾಜ್ಯದಲ್ಲಿ ಹಾಲಿನ ದರ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ…

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆ ಸ್ವರ್ಣ ಸಮರ್ಪಣೆಗೆ ಚಾಲನೆ

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆದರ್‌ಲ್ಯಾಂಡ್ಸ್‌ನ ಕುಕೇಂಹೊಫ್ ಟುಲಿಪ್‌ ತೋಟ: ಕಣ್ಣು ಹಾಯಿಸಿದಷ್ಟೂ ಬಣ್ಣಬಣ್ಣದ ಸುಂದರ ನೋಟ!

ನೆದರ್‌ಲ್ಯಾಂಡ್ಸ್‌ನ ಕುಕೇಂಹೊಫ್ ಟುಲಿಪ್‌ ತೋಟ: ಕಣ್ಣು ಹಾಯಿಸಿದಷ್ಟೂ ಬಣ್ಣಬಣ್ಣದ ಸುಂದರ ನೋಟ!

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನ

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನದ ಇತಿಹಾಸ…

ಓ….ಸರ್ಕಾರಿ ಶಾಲೆಯಾ? …ಇದು ಕೇವಲ ಬಡವರ ಶಾಲೆಯಾ!

ಓ….ಸರ್ಕಾರಿ ಶಾಲೆಯಾ? …ಇದು ಕೇವಲ ಬಡವರ ಶಾಲೆಯಾ!

8

ಪತ್ನಿ ಮೇಲೆ ಹಲ್ಲೆ To ನಿರ್ಮಾಪಕರ ಜೊತೆ ತಗಾದೆ.. ದರ್ಶನ್‌ ವಿವಾದದ ಸುತ್ತ ಒಂದು ಸುತ್ತು..

Hawaiian Islands; ಅಸಾಧಾರಣ ಹವಾ “ಹವಾಯಿ’ ಐಲ್ಯಾಂಡ್‌

Hawaiian Islands; ಅಸಾಧಾರಣ ಹವಾ “ಹವಾಯಿ’ ಐಲ್ಯಾಂಡ್‌

MUST WATCH

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

ಹೊಸ ಸೇರ್ಪಡೆ

9

ಡಿಸೆಂಬರ್‌ 20, 21 ಹಾಗೂ 22 ರಂದು ಮಂಡ್ಯ ಸಾಹಿತ್ಯ ಸಮ್ಮೇಳನ

Udayavani Campaign:ಪುತ್ತೂರು- ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

Udayavani Campaign: ಪುತ್ತೂರು- ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

8

Bollywood: ಮದ್ವೆ ದಿನವೇ ಕುಡಿದು ಟೈಟ್‌ ಆದ ಸೋನಾಕ್ಷಿ ಗಂಡ; ಎಣ್ಣೆ ಪಾರ್ಟಿ ಎಂದ ನೆಟ್ಟಿಗರು

Drainage

Bengaluru ಒಳಚರಂಡಿ: 3000 ಅನಧಿಕೃತ ಸಂಪರ್ಕ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.