ಉಡುಪಿ ತಾಲೂಕಿನಾದ್ಯಂತ ಉತ್ತಮ ಮಳೆ: ಮೆಸ್ಕಾಂಗೆ 36 ಲ.ರೂ. ನಷ್ಟ

Team Udayavani, Jun 13, 2021, 8:23 PM IST

ಉಡುಪಿ ತಾಲೂಕಿನಾದ್ಯಂತ ಉತ್ತಮ ಮಳೆ: ಮೆಸ್ಕಾಂಗೆ 36 ಲ.ರೂ. ನಷ್ಟ

ಉಡುಪಿ : ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರವಿವಾರ ಮಳೆ ಬಿರುಸುಗೊಂಡಿದ್ದು, ಜನರ ಸಂಚಾರ ಅಸ್ತವ್ಯಸ್ಥಗೊಂಡಿದೆ.

ಶನಿವಾರದ ಮುಂಜಾನೆಯಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೃತಕ ನೆರೆ ನಿರ್ಮಾಣವಾಗಿದ್ದು, ರಸ್ತೆಗಳಲ್ಲಿ ನಿಂತ ನೀರಿನಿಂದಾಗಿ ವಾಹನ ಸಂಚಾರರಿಗೆ ತೊಂದರೆ ಸಿಲುಕಿಕೊಂಡರು.ಇನ್ನೊಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ನಾಟಿ ಸೇರಿದಂತೆ ಇತರೆ ಕೆಲಸಗಳು ಭರದಿಂದ ಸಾಗುತ್ತಿದೆ. ಜೂ.13ರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿ 30.2 ಮಿ.ಮೀ , ಕಾರ್ಕಳ 58.3 ಮಿ.ಮೀ., ಬ್ರಹ್ಮಾವರ 51.1 ಮಿ.ಮೀ., ಕಾಪು 36.9 ಮಿ.ಮೀ., ಕುಂದಾಪುರ 36.2ಮಿ.ಮೀ., ಬೈಂದೂರು 56.1ಮಿ.ಮೀ., ಹೆಬ್ರಿ 46.7 ಮಿ.ಮೀ. ಮಳೆಯಾಗಿದ್ದು ಜಿಲ್ಲೆಯಾದ್ಯಂತ ಒಟ್ಟು 83.3 ಮಿ.ಮೀ. ಮಳೆಯಾಗಿದೆ.

ಮೆಸ್ಕಾಂಗೆ 36 ಲ.ರೂ. ನಷ್ಟ
ಶನಿವಾರ ನಿರಂತರವಾದ ಗಾಳಿ ಮಳೆಯಿಂದಾಗಿ ಜಿಲ್ಲೆಯಲ್ಲಿ 107 ವಿದ್ಯುತ್‌ ಕಂಬ, 23 ಟ್ರಾನ್ಸ್‌ಫಾರ್ಮರ್‌, ವಿದ್ಯುತ್‌ ತಂತಿಗಳು ನೆಲಕ್ಕೆ ಉರುಳಿದೆ. ಏಕಕಾಲದಲ್ಲಿ ವಿವಿಧೆಡೆಯಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯದಲ್ಲಿ ವಿಳಂಬವಾಗಿದ್ದು, ಇದರಿಂದಾಗಿ ವಿವಿಧ ತಾಲೂಕಿನಲ್ಲಿ ರವಿವಾರ ಮುಂಜಾನೆಯಿಂದ ವಿದ್ಯುತ್‌ ವ್ಯತ್ಯಯವಾಗಿದೆ. ನಗರದಲ್ಲಿ ಶನಿವಾರ ಅಲಂಕಾರ ಚಿತ್ರಮಂದಿರ ಹಿಂಭಾಗದ ರಸ್ತೆಯಲ್ಲಿ ಸೇರಿದಂತೆ ವಿವಿಧೆಡೆಯಲ್ಲಿ ವಿದ್ಯುತ್‌ ತಂತಿ ಹಾಗೂ ಕಂಬಗಳು ಗಾಳಿ ಮಳೆಗೆ ಧರೆಗುರುಳಿವೆ. ಇದರಿಂದಾಗಿ ಈ ಭಾಗದಲ್ಲಿ ರವಿವಾರ ಮುಂಜಾನೆಯವರೆಗೆ ವಿದ್ಯುತ್‌ ವ್ಯತ್ಯಯವಾಗಿದೆ. ಜಿಲ್ಲೆಯಲ್ಲಿ ಶನಿವಾರ ಸುರಿದ ಮಳೆಗೆ ಒಟ್ಟು 36 ಲ.ರೂ. ಮೆಸ್ಕಾಂಗೆ ಹಾನಿಯಾಗಿದೆ.

ಗಾಳಿ ಮಳೆ – ಆಸ್ತಿ ಹಾನಿ
ನಿರಂತರವಾಗಿ ಸುರಿಯುವ ಮಳೆಯೊಂದಿಗೆ ಗಾಳಿಯು ಬೀಸುತ್ತಿರುವುದರಿಂದ ಜಿಲ್ಲೆಯಾದ್ಯಂತ ವಿವಿಧ ಕಡೆಯಲ್ಲಿ ಆಸ್ತಿ ಹಾನಿಯಾಗಿದೆ. ವಿವಿಧ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯಲ್ಲಿ ಮರ ಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ರವಿವಾರ ಬೆಳಗ್ಗೆ ಮರದ ತೆರವು ಕಾರ್ಯ ಪ್ರಾರಮಬಗೊಂಡಿತು. ಒಳಕಾಡುವಿನ ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ. ಇದೇ ಪ್ರದೇಶದಲ್ಲಿ ವಿದ್ಯುತ್‌ ಕಂಬವೊಂದು ಬಿದ್ದು, ತಂತಿಗಳು ರಸ್ತೆಯೂದ್ದಕ್ಕೂ ಆವರಿಸಿಕೊಂಡಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಈ ಪ್ರದೇಶದಲ್ಲಿ ವಿದ್ಯುತ್‌ ಉಂಟಾಗಿದೆ.

ತಗ್ಗು ಪ್ರದೇಶ ಜಲಾವೃತ
ಬೇಸಗೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಇಂದ್ರಾಣಿಯ ಎರಡು ಬದಿಯನ್ನು ತಡೆಗೋಡಿ ನಿರ್ಮಿಸಲಾಗಿದೆ. ಇದರಿಂದಾಗಿ ಇಂದ್ರಾಣಿಯಲ್ಲಿ ಮಳೆಯ ನೀರು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಹರಿಯುತ್ತಿದೆ. ನಗರದ ತಗ್ಗು ಪ್ರದೇಶದಲ್ಲಿ ಕೃತಕ ನೆರೆಯುಂಟಾಗಿದೆ. ಗೆದ್ದೆಯಲ್ಲಿ ನೀರು ನಿಂತು ಕೊಂಡ ದೃಶ್ಯಗಳ ಗ್ರಾಮೀಣಭಾಗದಲ್ಲಿ ಕಂಡು ಬಂತು. ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟವನ್ನು ತುಂಬಿಲ್ಲ.

ಟಾಪ್ ನ್ಯೂಸ್

PAYTM

Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಪರವಾನಿಗೆ ರದ್ದು?

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

Manipal; ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

ಜಾಲತಾಣದಲ್ಲಿ ಹರಿಯುವ ಜಾತಿ ಲೆಕ್ಕಾಚಾರ ನಮ್ಮ ವರದಿಯದ್ದಲ್ಲ: ಜಯಪ್ರಕಾಶ್‌ ಹೆಗ್ಡೆ

ಜಾಲತಾಣದಲ್ಲಿ ಹರಿಯುವ ಜಾತಿ ಲೆಕ್ಕಾಚಾರ ನಮ್ಮ ವರದಿಯದ್ದಲ್ಲ: ಜಯಪ್ರಕಾಶ್‌ ಹೆಗ್ಡೆ

1-wqeeqw-ewqe

Finance management; ಶೆಹಬಾಜ್‌ ಈಗ ಪಾಕ್‌ ಪಿಎಂ: ವಿತ್ತ ನಿರ್ವಹಣೆಯೇ ಸವಾಲು

Kaniyoor: ನೇಣು ಬಿಗಿದು ಯುವತಿ ಆತ್ಮಹತ್ಯೆ

Kaniyoor: ನೇಣು ಬಿಗಿದು ಯುವತಿ ಆತ್ಮಹತ್ಯೆ

Subramanya ಮನೆಗೆ ನುಗ್ಗಿ ಮಹಿಳೆಯ ಸರ ಸೆ‌ಳೆದು ಪರಾರಿ

Subramanya ಮನೆಗೆ ನುಗ್ಗಿ ಮಹಿಳೆಯ ಸರ ಸೆ‌ಳೆದು ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

Manipal; ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

ಜಾಲತಾಣದಲ್ಲಿ ಹರಿಯುವ ಜಾತಿ ಲೆಕ್ಕಾಚಾರ ನಮ್ಮ ವರದಿಯದ್ದಲ್ಲ: ಜಯಪ್ರಕಾಶ್‌ ಹೆಗ್ಡೆ

ಜಾಲತಾಣದಲ್ಲಿ ಹರಿಯುವ ಜಾತಿ ಲೆಕ್ಕಾಚಾರ ನಮ್ಮ ವರದಿಯದ್ದಲ್ಲ: ಜಯಪ್ರಕಾಶ್‌ ಹೆಗ್ಡೆ

Fraud Case; ಆ್ಯಪ್‌ ಡೌನ್‌ಲೋಡ್‌ ಮಾಡಿಸಿ ಲಕ್ಷಾಂತರ ರೂ. ವಂಚನೆ

Fraud Case; ಆ್ಯಪ್‌ ಡೌನ್‌ಲೋಡ್‌ ಮಾಡಿಸಿ ಲಕ್ಷಾಂತರ ರೂ. ವಂಚನೆ

Barkur ಕೊಲೆ ಪ್ರಕರಣ: ವಿವಿಧ ಆಯಾಮದಲ್ಲಿ ತನಿಖೆ

Barkur ಕೊಲೆ ಪ್ರಕರಣ: ವಿವಿಧ ಆಯಾಮದಲ್ಲಿ ತನಿಖೆ

Kapu ನಿಂತಿದ್ದ ಪಿಕಪ್‌ಗೆ ಸ್ಕೂಟಿ ಢಿಕ್ಕಿ; ಸವಾರ ಸಾವು

Kapu ನಿಂತಿದ್ದ ಪಿಕಪ್‌ಗೆ ಸ್ಕೂಟಿ ಢಿಕ್ಕಿ; ಸವಾರ ಸಾವು

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

PAYTM

Paytm; ಶೀಘ್ರವೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಪರವಾನಿಗೆ ರದ್ದು?

NIA (2)

Nizamabad ಪಿಎಫ್ಐ ಕೇಸಿನ ಆರೋಪಿಯನ್ನು ಬಂಧಿಸಿದ ಎನ್‌ಐಎ

1-dsadaadadasdas

TMCಗೆ ಹೊಡೆತ:ಪಕ್ಷ ತೊರೆದ ಹಿರಿಯ ನಾಯಕ ತಪಸ್‌ ರಾಯ್‌

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

Manipal; ಟಿ. ರಂಗ ಪೈ ಅವರಿಗೆ ಸಂಗತ್ಕಾರ್‌ ಪುರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.