ಗಾಜಾಪಟ್ಟಿ ಮೇಲೆ ಮುಗಿಬಿದ್ದ ಇಸ್ರೇಲ್‌ ಪಡೆ…ಹಮಾಸ್‌ ವಶದಲ್ಲಿದ್ದ 250 ಒತ್ತೆಯಾಳುಗಳ ರಕ್ಷಣೆ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಏಳನೇ ದಿನಕ್ಕೆ ಕಾಲಿಟ್ಟಿದೆ.

Team Udayavani, Oct 13, 2023, 12:05 PM IST

ಗಾಜಾಪಟ್ಟಿ ಮೇಲೆ ಮುಗಿಬಿದ್ದ ಇಸ್ರೇಲ್‌ ಪಡೆ…ಹಮಾಸ್‌ ವಶದಲ್ಲಿದ್ದ 250 ಒತ್ತೆಯಾಳುಗಳ ರಕ್ಷಣೆ

ಟೆಲ್‌ ಅವಿವ್:‌ ಗಾಜಾ ಪಟ್ಟಿಯ ಮೇಲೆ ನಿರಂತರ ರಾಕೆಟ್‌, ಕ್ಷಿಪಣಿ ದಾಳಿ ನಡೆಸುವ ಮೂಲಕ ಹಮಾಸ್‌ ದಾಳಿಗೆ ಪ್ರತೀಕಾರ ತೀರಿಸುತ್ತಿರುವ ಇಸ್ರೇಲ್‌ ನ ರಕ್ಷಣಾ ಪಡೆ ಗಾಜಾ ಪಟ್ಟಿಗೆ ನುಗ್ಗಿ 250ಕ್ಕೂ ಅಧಿಕ ಒತ್ತೆಯಾಳುಗಳನ್ನು ರಕ್ಷಿಸಿರುವ ವಿಡಿಯೋ ಫೂಟೇಜ್‌ ಅನ್ನು ಶುಕ್ರವಾರ (ಅಕ್ಟೋಬರ್‌ 13) ಬಿಡುಗಡೆಗೊಳಿಸಿದೆ.

ಇದನ್ನೂ ಓದಿ:Panaji: 37ನೇ ರಾಷ್ಟ್ರೀಯ ಕ್ರೀಡಾ ಸ್ಪರ್ಧೆ; ಸ್ಥಳ, ಸಿದ್ಧತೆ ಪರಿಶೀಲಿಸಿದ ಮುಖ್ಯಮಂತ್ರಿ

ಇಸ್ರೇಲ್‌ ರಕ್ಷಣಾ ಪಡೆ( IDF)ಯ ಸಾಹಸದ ಕಾರ್ಯಾಚರಣೆಯಲ್ಲಿ 60 ಹಮಾಸ್‌ ಭಯೋತ್ಪಾದಕರು ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ. ಐಡಿಎಫ್‌ ಮಾಹಿತಿಯ ಪ್ರಕಾರ, ಒತ್ತೆಯಾಳಾಗಿದ್ದ 250 ಇಸ್ರೇಲ್‌ ನಾಗರಿಕರನ್ನು ರಕ್ಷಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ 60 ಹಮಾಸ್‌ ಉಗ್ರರು ಹತ್ಯೆಗೀಡಾಗಿದ್ದು, ಹಮಾಸ್‌ ನ ದಕ್ಷಿಣ ನೌಕಾ ವಿಭಾಗದ ಡೆಪ್ಯುಟಿ ಕಮಾಂಡರ್‌ ಮುಹಮ್ಮದ್‌ ಅಬು ಅಲಿ ಸೇರಿದಂತೆ 26 ಜನರನ್ನು ಸೆರೆಹಿಡಿಯಲಾಗಿದೆ ಎಂದು ವಿವರಿಸಿದೆ.

ಇಸ್ರೇಲ್‌ ರಕ್ಷಣಾ ಪಡೆ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ, ಗಾಜಾ ಸೆಕ್ಯುರಿಟಿ ಡಿಫೆನ್ಸ್‌ ಸಮೀಪದ ಕಟ್ಟಡದೊಳಕ್ಕೆ ಇಸ್ರೇಲ್‌ ಸೈನಿಕರು ನುಗ್ಗಿ, ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಸೈನಿಕರು ಕವರ್‌ ಅಪ್‌ ಆಗಿ ಕಾರ್ಯಾಚರಣೆ ನಡೆಸಿ, ಔಟ್‌ ಪೋಸ್ಟ್‌ ಮೇಲೆ ಗ್ರೆನೇಡ್‌ ಎಸೆದು, ನಂತರ ಒತ್ತೆಯಾಳುಗಳನ್ನು ರಕ್ಷಿಸಿರುವ ದೃಶ್ಯ ವಿಡಿಯೋದಲ್ಲಿದೆ.

ಒತ್ತೆಯಾಳುಗಳನ್ನು ಬಂಕರ್‌ ನಿಂದ ಹೊರಗೆ ತಂದು ಕರೆದೊಯ್ಯುತ್ತಿದ್ದರೆ, ಮತ್ತೊಂದೆಡೆ ಹಮಾಸ್‌ ಬಂಡುಕೋರರನ್ನು ಸೆರೆಹಿಡಿದು ಎಳೆದೊಯ್ಯುತ್ತಿರುವುದು ವಿಡಿಯೋದಲ್ಲಿದೆ.  ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಹಮಾಸ್‌ ದಾಳಿಯಲ್ಲಿ 1,200 ಇಸ್ರೇಲ್‌ ನಾಗರಿಕರು ಮೃತರಾಗಿದ್ದು, ಇಸ್ರೇಲ್‌ ದಾಳಿಗೆ ಗಾಜಾಪಟ್ಟಿಯಲ್ಲಿ 1,400 ಜನರು ಸಾವಿಗೀಡಾಗಿದ್ದಾರೆ.

ಇಸ್ರೇಲ್‌ ಭದ್ರತಾ ಪಡೆ ಗಾಜಾ ಸೆಕ್ಯುರಿಟಿ ಫೆನ್ಸ್‌ ಸಮೀಪ ಸುತ್ತುವರಿದು ಕಾರ್ಯಾಚರಣೆ ನಡೆಸುವ ಮೂಲಕ ಸೂಫಾ ಮಿಲಿಟರಿ ಘಟಕವನ್ನು ಮತ್ತೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.

ಟಾಪ್ ನ್ಯೂಸ್

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌ ಸಾವು

Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್‌

Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್‌

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!

Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.