ಭಾರತೀಯ ವಿದ್ಯಾರ್ಥಿನಿಯರ ಅಪಹರಣ?


Team Udayavani, Mar 1, 2022, 7:30 AM IST

ಭಾರತೀಯ ವಿದ್ಯಾರ್ಥಿನಿಯರ ಅಪಹರಣ?

ಉಕ್ರೇನ್‌ನಿಂದ ಪೋಲೆಂಡ್‌, ರೊಮೇನಿಯಾ, ಹಂಗೇರಿ ಮುಂತಾದ ನೆರೆರಾಷ್ಟ್ರಗಳಿಗೆ ಕಾಲ್ನಡಿಗೆಯಲ್ಲಿ ಬರುತ್ತಿರುವ ಅನೇಕ ವಿದ್ಯಾರ್ಥಿನಿಯರನ್ನು ರಷ್ಯನ್‌ ಸೈನಿಕರು ಅಪಹರಿಸಿದ್ದಾರೆಂಬ ಸ್ಫೋಟಕ ಮಾಹಿತಿಯೊಂದನ್ನು ಉಕ್ರೇನ್‌ನಲ್ಲಿರುವ ಲಕ್ನೋ ಮೂಲದ ಗರ್ವಾಮಿಶ್ರ ಎಂಬ ವಿದ್ಯಾರ್ಥಿನಿಯೊಬ್ಬರು ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹಾಗೂ ಇತರರು ಭಾರತೀಯ ವಿದ್ಯಾರ್ಥಿನಿಯರನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್‌ ಅವರಲ್ಲಿ ಮನವಿ ಮಾಡಿದ್ದಾರೆ.

ವಿದ್ಯಾರ್ಥಿನಿ ಹೇಳಿದ್ದೇನು?
“ನಾವು ಕೀವ್‌ನಲ್ಲಿ ಸಿಲುಕಿದ್ದೇವೆ. ನಮಗೆ ಯಾರಿಂದಲೂ ಸಹಾಯ ಸಿಗುತ್ತಿಲ್ಲ. ಇಲ್ಲಿನ ಸ್ಥಳೀಯರು ಕೀವ್‌ನಲ್ಲಿ ನಾವಿರುವ ಕಡೆ, ನಾವು ತಂಗಿರುವ ಕೋಣೆಯ ಬಾಗಿಲು ಒಡೆದು ಒಳಬರಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ನಮಗೆ ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭೀತಿ ಆವರಿಸಿದೆ.

ಭಾರತೀಯ ದೂತಾವಾಸ ಕಚೇರಿಗೆ ಎಷ್ಟು ಬಾರಿ ಫೋನ್‌ ಮಾಡಿದರೂ, ಸ್ಪಂದನೆ ಸಿಕ್ಕಿಲ್ಲ. ನಮಗೆ ಸಹಾಯ ಸಿಗುವುದಿಲ್ಲ ಎಂದೆನಿಸತೊಡಗಿದೆ” ಎಂದು ಗಿಡ್ವಾ ತಿಳಿಸಿದ್ದಾರೆ. ಇದಲ್ಲದೆ, “ಬಂಕರ್‌ಗಳಿಂದ ಗಡಿಯ ಕಡೆಗೆ ತೆರಳುವ ಭಾರತೀಯ ವಿದ್ಯಾರ್ಥಿನಿಯರ ಸಮೂಹದ ಮೇಲೆ ರಷ್ಯಾದ ಸೈನಿಕರು, ಕೆಟ್ಟದಾಗಿ ವರ್ತಿಸಿದ್ದಾರೆ. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳ ಮೇಲೆ ಫೈರಿಂಗ್‌ ಮಾಡಿ, ವಿದ್ಯಾರ್ಥಿನಿಯರನ್ನು ಅಪಹರಿಸಿದ್ದಾರೆಂದು ಹೇಳಲಾಗಿದೆ. ಆ ವಿದ್ಯಾರ್ಥಿನಿಯರು, ಫೈರಿಂಗ್‌ಗೆ ಒಳಗಾದ ವಿದ್ಯಾರ್ಥಿಗಳು ಎಲ್ಲಿ ಹೋದರು ಎಂಬ ಮಾಹಿತಿಯಿಲ್ಲ” ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌ ಸಾವು

Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್‌

Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್‌

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!

Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

Interview: “ಈ ಭಾಗದಲ್ಲಿ  ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ

ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.