ಬೆಂಗಳೂರು: ಮುಂದುವರಿದ ಮಳೆ;ಕುಸಿದು ಬಿದ್ದ ವಸತಿ ಕಟ್ಟಡ
Team Udayavani, Nov 19, 2021, 3:24 PM IST
ಬೆಂಗಳೂರು: ಭಾರೀ ಮಳೆಗೆ ಬೆಂಗಳೂರಿನ ಹಲಸೂರು ಪ್ರದೇಶದಲ್ಲಿ ವಸತಿ ಕಟ್ಟಡವೊಂದು ಶುಕ್ರವಾರ ಕುಸಿದು ಬಿದ್ದಿದೆ.
ಕಟ್ಟಡದಿಂದ ಎಲ್ಲ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿಗಳು ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ.
50 ವರ್ಷದ ವ್ಯಕ್ತಿ ಮತ್ತು ಮೂವರು ಸದಸ್ಯರ ಕುಟುಂಬ ಕಟ್ಟಡದಲ್ಲಿ ವಾಸಿಸುತ್ತಿತ್ತು.
ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇದೆ ಪ್ರದೇಶದಲ್ಲಿ ಶಿಥಿಲಾವಸ್ಥೆಯಲ್ಲಿರುವ ಇನ್ನೆರಡು ಕಟ್ಟಡಗಳನ್ನು ಇಂದು ನೆಲಸಮಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.