ಎಂಎಸ್‌ಎಫ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ
Team Udayavani, Jul 5, 2018, 6:25 AM IST
ಕಾಸರಗೋಡು: ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರಿಗಳು ಕೇರಳ ಸರಕಾರದ ಹಣದಲ್ಲಿ ಮೋಜು ಮಾಡುವುದನ್ನು ಪ್ರತಿಭಟಿಸಿ ಎಂ.ಎಸ್.ಎಫ್. ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ನಡೆಯಿತು.
ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಪ್ರಧಾನ ಪ್ರವೇಶ ದ್ವಾರದಲ್ಲಿ ಜಾಥಾ ತಡೆದರು.ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿ ಗಳಿಗೆ ಮುಂದಿನ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು, ಸರಕಾರಿ, ಅನುದಾನಿತ ಪ್ರೌಢಶಾಲೆಗಳನ್ನು ಭಡ್ತಿಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿದೆ.
ಎಂ.ಎಸ್.ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ನವಾಸ್ ಜಾಥಾ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಆಬಿದ್ ಆರಂಗಾಡಿ ಅಧ್ಯಕ್ಷತೆ ವಹಿಸಿದರು.
ರಾಜ್ಯ ಉಪಾಧ್ಯಕ್ಷ ಹಾಶೀಂ ಬಂಬ್ರಾಣಿ, ರಾಜ್ಯ ಸಮಿತಿ ಸದಸ್ಯ ಉಸ್ಮಾನ್ ಪಳ್ಳಕೋಡ್. ಮುಹಮ್ಮದ್ ಕುಂಞಿ. ಅಜರ್, ಖಾದರ್ ಆಲೂರು, ಕುಂಞಂಬ್ದುಲ್ಲ, ಹಮೀದ್, ಅನಸ್. ಸಿದ್ದಿಕ್ ಮಂಜೇಶ್ವರ, ಸರ್ಫಾಜ್, ರಮೀಸ್, ಸವಾದ್, ನವಾಸ್ ಕುಂಜಾರು, ಅಶ್ರಫ್ ಬೋವಿಕ್ಕಾನ, ಉನೈಸ್, ಸೈಫುದ್ದೀನ್ ಮೊದಲಾದವರು ನೇತೃತ್ವ ನೀಡಿದರು. ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮೊಗ್ರಾಲ್ ಸ್ವಾಗತಿಸಿದರು.