ಸುಳ್ಯ: ಅವಿನಾಶ್ ಮೋಟಾರ್ಸ್ ಮಾಲಕ ನಾರಾಯಣ ರೈ ಆತ್ಮಹತ್ಯೆ

Team Udayavani, Dec 14, 2021, 11:30 AM IST

ಸುಳ್ಯ:  ಅವಿನಾಶ್ ಮೋಟಾರ್ಸ್ ಮಾಲಕ ನಾರಾಯಣ ರೈ ಆತ್ಮಹತ್ಯೆ

ಸುಳ್ಯ: ಸುಳ್ಯ ಭಾಗದಲ್ಲಿ ಗ್ರಾಮೀಣ ಸಂಪರ್ಕ ಕ್ರಾಂತಿಯ ಹರಿಕಾರನಾಗಿ, ಅವಿನಾಶ್ ಮೋಟಾರ್ಸ್ ನ  ಮಾಲಕರಾಗಿ ಖ್ಯಾತಿಯಾಗಿದ್ದ ನಾರಾಯಣ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಇಂದು (ಮಂಗಳವಾರ )ಬೆಳಕಿಗೆ ಬಂದಿದೆ.

ಘಟನೆಯ ವಿವರ:

ಅವಿನಾಶ್ ರೈಯವರು ಅರಂಬೂರಿನ ತನ್ನ ಮನೆಯಲ್ಲಿದ್ದರು. ಅವರ ಪತ್ನಿ ಮತ್ತು ಮಕ್ಕಳು ಮದುವೆ ಸಮಾರಂಭವೊಂದಕ್ಕೆ ಬೆಂಗಳೂರಿಗೆ ತೆರಳಿದ್ದ ಹಿನ್ನಲೆಯಲ್ಲಿ ಸಂಬಂಧಿಯಾಗಿರುವ ಯುವಕನೊಬ್ಬ ಮನೆಯಲ್ಲಿದ್ದರು. ರಾತ್ರಿ 11.45  ರ ಸುಮಾರಿಗೆ ಅವರು ಅವಿನಾಶ್ ಮೋಟಾರ್ಸ್ ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ತನ್ನ ತಂಗಿಯಾಗಿರುವ ನಳಿನಿಯವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ತಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುವುದಾಗಿ ವಾಯ್ಸ್ ಮೆಸೇಜ್‌ನಲ್ಲಿತ್ತು. ಆದರೆ ತಡರಾತ್ರಿಯಾಗಿದ್ದುದರಿಂದ ಅವರು ಇಂದು ಬೆಳಿಗ್ಗೆಯಷ್ಟೇ ಈ ಮೆಸೇಜ್ ನೋಡಿದ್ದರು. ಕೂಡಲೇ ಅವರು ಮನೆಯಲ್ಲಿದ್ದ ಯುವಕನಿಗೆ ಫೋನ್ ಮಾಡಿದಾಗ ಅವರು ಫೋನ್ ತೆಗೆದಿರಲಿಲ್ಲ. ಈ ಹಿನ್ನಲೆಯಲ್ಲಿ ಫಿಟ್ಟರ್‌ಗೆ ಕರೆ ಮಾಡಿ ತಕ್ಷಣ ಹೋಗುವಂತೆ ತಿಳಿಸಿದರು. ಕೂಡಲೇ ಅವರು ಮನೆಗೆ ಹೋಗಿ ಯುವಕನನ್ನು ಎಬ್ಬಿಸಿ ನಾರಾಯಣ ರೈಗಳ ಕೋಣೆಗೆ ಹೋಗಿ ನೋಡಿದಾಗ ಅವರು ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರು.

ಬಳಿಕ ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಲಾಯಿತು. ಮೃತದೇಹದ ಪಕ್ಕದಲ್ಲಿ ಡೆತ್‌ನೋಟ್ ಕೂಡಾ ಪತ್ತೆಯಾಗಿದ್ದು, ಅಸೌಖ್ಯದ ಹಿನ್ನಲೆಯಲ್ಲಿ ತನಗೆ ಬದುಕಲು ಕಷ್ಟವಾಗುತ್ತಿದೆ, ಮನೆಯವರಿಗೂ ಕಷ್ಟ ಕೊಡಲು ಮನಸ್ಸಿಲ್ಲ, ಹೀಗಾಗಿ ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದೇನೆ ಎಂದು ಅವರು ಅದರಲ್ಲಿ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ ತನ್ನ ಮರಣದ ಕಾರಣದಿಂದ ಬಸ್‌ಗಳ ಓಡಾಟವನ್ನು ನಿಲ್ಲಿಸಬಾರದು. ಕಪ್ಪು ಫ್ಲ್ಯಾಗ್ ಹಾಕಿ ಬಸ್ ಓಡಿಸಬೇಕು ಎಂದೂ ಅದರಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.

ಮೃತ ನಾರಾಯಣ ರೈಗಳು ಪತ್ನಿ ವಿಜಯಾ ರೈ, ಪುತ್ರರಾದ ಅವಿನಾಶ್ ರೈ, ಅಭಿಲಾಷ್ ರೈಯವರನ್ನು ಅಗಲಿದ್ದಾರೆ.

ಪೇರಾಲು ಪೂಜಾರಿಮೂಲೆ ರಾಮಣ್ಣ ರೈ ಮತ್ತು ಸೀತಮ್ಮ ರೈ ದಂಪತಿಯ ಪುತ್ರನಾದ ನಾರಾಯಣ ರೈಗಳು ಪ್ರೌಢ ಶಿಕ್ಷಣದ ಬಳಿಕ ಮಂಗಳೂರಿನಲ್ಲಿ ಖಾಸಗಿ ಉದ್ಯೋಗ ನಡೆಸಿ ಬಳಿಕ ಸ್ವಲ್ಪ ಕಾಲ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಾಗಿದ್ದರು. ನಂತರ ಸ್ವಯಂ ನಿವೃತ್ತಿ ಪಡೆದು ತಾವೇ ಬಸ್ ಖರೀದಿಸಿ ಗ್ರಾಮೀಣ ಭಾಗಗಳಿಗೆ ಸಂಚಾರ ಆರಂಭಿಸಿದರು. ಇದು ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಯಿತು. ಹಾಗೇ ಉದ್ಯಮದಲ್ಲಿ ಬೆಳೆದ ಅವರು ಒಂದು ಕಾಲದಲ್ಲಿ 18 ಬಸ್‌ಗಳ ಒಡೆಯರಾಗಿದ್ದರು. ಬೆಂಗಳೂರು, ಮಂಗಳೂರುಗಳಿಗೂ ಬಸ್ ಓಡಾಟ ನಡೆಸಿದ್ದರು. ಆದರೆ ವರ್ಷ ಕಳೆದಂತೆ ಈ ಉದ್ಯಮ ಅಷ್ಟು ಲಾಭದಾಯಕವಾಗಿಲ್ಲದ ಕಾರಣ ಉಳಿದ ಬಸ್‌ಗಳನ್ನು ನಿಲ್ಲಿಸಿ ಗ್ರಾಮೀಣ ಪ್ರದೇಶಗಳ ಬಸ್ ಸಂಚಾರವನ್ನಷ್ಟೇ ನಡೆಸುತ್ತಿದ್ದರು.

ಕೆಲವು ತಿಂಗಳ ಹಿಂದೆ ಅವರು ಪಾರ್ಶ್ವವಾಯು ಕಾಯಿಲೆಗೆ ಒಳಗಾಗಿದ್ದರು. ನಿಧಾನಕ್ಕೆ ಚೇತರಿಸಿಕೊಂಡ ಅವರು ಕಾರಿನಲ್ಲಿ ಸುಳ್ಯಕ್ಕೆ ಬಂದು ಹೋಗುತ್ತಿದ್ದರು.

ನಾರಾಯಣ ರೈಗಳ ಹಠಾತ್ ಅಗಲಿಕೆ ಅವರ ಸಿಬ್ಬಂದಿ ವರ್ಗದವರಲ್ಲಿ ಮತ್ತು ಸುಳ್ಯದ ಜನತೆಯಲ್ಲಿ ದಿಗ್ಭ್ರಮೆ ಮೂಡಿಸಿದೆ.

ಟಾಪ್ ನ್ಯೂಸ್

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.