ಕೊಲ್ಲಮೊಗ್ರು: ಸೇತುವೆ ಅಭಿವೃದ್ಧಿ ಪ್ರಸ್ತಾವನೆಗಿಲ್ಲ ಮನ್ನಣೆ

ಮೈಲ ಕಿರು ಸೇತುವೆ ಸ್ಲಾéಬ್‌ಗ ಹಾನಿ; ಸಂಪರ್ಕ ಕಡಿತ ಭೀತಿ !

Team Udayavani, Oct 2, 2020, 2:14 AM IST

ಕೊಲ್ಲಮೊಗ್ರು: ಸೇತುವೆ ಅಭಿವೃದ್ಧಿ ಪ್ರಸ್ತಾವನೆಗಿಲ್ಲ ಮನ್ನಣೆ

ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮದ ಮೈಲ ಎಂಬಲ್ಲಿಯ ಕಿರು ಸೇತುವೆಯ ಸ್ಲ್ಯಾಬ್‌ಗ ಹಾನಿ ಉಂಟಾಗಿದ್ದು, ಸಂಪರ್ಕ ಕಡಿತ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿನಿಂದ ಕಟ್ಟ ಗೋವಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮೈಲದಲ್ಲಿ ಕಿರು ಸೇತುವೆಯ ಒಂದು ಬದಿಯ ಕಾಂಕ್ರೀಟ್‌ ಸ್ಲ್ಯಾಬ್‌ ಮುರಿದಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಇದರಿಂದಾಗಿ ರಸ್ತೆ ಸಂಪರ್ಕ ಕಡಿತ ಭೀತಿಯಲ್ಲಿದೆ. ಭಯ ದಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಿರು ಸೇತುವೆ
ಮೈಲದ ತೋಡಿಗೆ ಕಿರುಸೇತುವೆ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ಇದೀಗ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಜೋರು ಮಳೆ ಬಂದಲ್ಲಿ ಮುಳುಗಡೆಯಾಗಿ, ಸಂಪರ್ಕ ಕಡಿತಗೊಳ್ಳುತ್ತದೆ. ಪ್ರತೀ ವರ್ಷ ಸಾರ್ವಜನಿಕರೇ ದುರಸ್ತಿ ಮಾಡುತ್ತಾರೆಂದು ಸ್ಥಳೀಯರು ತಿಳಿಸುತ್ತಾರೆ. ಕಳೆದ ವರ್ಷ ಈ ಸೇತುವೆಯ ಒಂದು ಬದಿ ಕುಸಿದಿದ್ದು, ಊರವರೇ ಚರಳು ತುಂಬಿಸಿ ಸರಿಪಡಿಸಿದ್ದರು. ಈ ಮಳೆಗಾಲದಲ್ಲಿ ಪುನಃ ಸಮಸ್ಯೆ ಎದುರಾಗಿದ್ದು ಸೇತುವೆ ಬಹುತೇಕ ಹಾನಿಯಾಗಿದೆ.

ಹಲವು ವರ್ಷಗಳಿಂದ ಈ ಸೇತುವೆ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಂಬಂಧ ಪಟ್ಟವರಿಗೆ ಸ್ಥಳೀಯರು ಮನವಿ ನೀಡುತ್ತಾ ಬರುತ್ತಿದ್ದರೂ, ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಅನುದಾನ ನೀಡಲಾಗುವುದು ಎಂಬ ಉತ್ತರ ನೀಡುತ್ತಾರೆಯೇ ವಿನಃ ಕಾರ್ಯಗತ ಮಾಡಿಲ್ಲ ಎಂದು ಆರೋಪ ಕೇಳಿ ಬಂದಿದೆ. ಪ್ರಸ್ತುತ ಇರುವ ಕಿರು ಸೇತುವೆಯ ಬದಲಿಗೆ ಎತ್ತರ ಹೆಚ್ಚಳ ಮಾಡಿ ಹೊಸ ಸೇತುವೆ ನಿರ್ಮಾಣ ಮಾಡಿದಲ್ಲಿ ಮಳೆಗಾಲದಲ್ಲಿ ಮುಳುಗಡೆ ಭೀತಿಯಿಂದ ತಪ್ಪಿಸಿ ಕೊಳ್ಳಬಹುದು ಎನ್ನುತ್ತಾರೆ ಸ್ಥಳೀಯರು.

ಸೂಚನೆ ನೀಡಲಾಗಿದೆ
ಮೈಲ ಕಿರುಸೇತುವೆ ಹಾನಿಯ ಬಗ್ಗೆ ಮಾಹಿತಿ ಬಂದಿದೆ. ಈ ಸೇತುವೆ ಅಭಿವೃದ್ಧಿಗೆ ಈ ಹಿಂದೆಯೂ ಪಂಚಾಯತ್‌ ರಾಜ್‌ ಇಂಜಿನಿಯರ್‌ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇತ್ತೀಚೆಗೆ ಆಡಳಿತಾಧಿಕಾರಿಗಳ ಸೂಚನೆಯಂತೆ ಇನ್ನೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ರವಿಚಂದ್ರ, ಪಿಡಿಒ ಕೊಲ್ಲಮೊಗ್ರು ಗ್ರಾ.ಪಂ.

ಪ್ರಸ್ತಾವನೆ ಸಲ್ಲಿಕೆ
ಮೈಲ ಕಿರುಸೇತುವೆಯ ಹಾನಿಯನ್ನು ಮಳೆಹಾನಿ ದುರಸ್ತಿ ಯೋಜನೆಯಲ್ಲಿ ದುರಸ್ತಿ ಪಡಿಸಲು ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಜನಾರ್ದನ, ಎಂಜಿನಿಯರ್‌

ಟಾಪ್ ನ್ಯೂಸ್

Netherlands player Ryan ten Doeschate announced retirement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನೆದರ್ಲೆಂಡ್ ಆಲ್ ರೌಂಡರ್ ಟೆನ್ ಡೆಶ್ಕೋಟ್

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

daily-horoscope

ಈ ರಾಶಿಯವರು ಇಂದು ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ.

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುರದಮೇಲುವಿನಲ್ಲಿ ಇಂದು ಲೋಕಾರ್ಪಣೆ

ಮುರದಮೇಲುವಿನಲ್ಲಿ ಇಂದು ಲೋಕಾರ್ಪಣೆ

ಪುತ್ತೂರು ಎಪಿಎಂಸಿ ರಸ್ತೆ: ಅಂಡರ್‌ಪಾಸ್‌ ನಿರ್ಮಾಣ ಶೀಘ್ರ ಅಂತಿಮ ಮುದ್ರೆ: ನಳಿನ್‌

ಪುತ್ತೂರು ಎಪಿಎಂಸಿ ರಸ್ತೆ: ಅಂಡರ್‌ಪಾಸ್‌ ನಿರ್ಮಾಣ ಶೀಘ್ರ ಅಂತಿಮ ಮುದ್ರೆ: ನಳಿನ್‌

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

shasana-22

ಬಳ್ಳಮಂಜ: 14-15 ನೇ ಶತಮಾನದ ಶಾಸನದ‌ ಅಧ್ಯಯನ

d news

ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ದೀಪಗಳ ಉತ್ಸವಕ್ಕೆ ಚಾಲನೆ

ದೀಪಗಳ ಉತ್ಸವಕ್ಕೆ ಚಾಲನೆ

Netherlands player Ryan ten Doeschate announced retirement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನೆದರ್ಲೆಂಡ್ ಆಲ್ ರೌಂಡರ್ ಟೆನ್ ಡೆಶ್ಕೋಟ್

7——-

ಇಂಡಿಯಲ್ಲಿ ಬಿಜೆಪಿ ವಿರುದ್ದ ಹರಿಹಾಯ್ದ ಎಚ್ಡಿಕೆ

ಹೆಲ್ತ್‌ ಕೇರ್

ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಯಿಂದ ಮಿತ್ರಾಕ್ಲಿಪ್‌ ಯಶಸ್ವಿ ಬಳಕೆ

6shetter

2023ರಲ್ಲೂ ಬಿಜೆಪಿ ಸರ್ಕಾರ: ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.