ಪ್ರತೀ ಠಾಣೆ ವ್ಯಾಪ್ತಿಯಲ್ಲಿ ನೂರು ಪ್ರಕರಣ ದಾಖಲು: ಡಾ| ರಾಜೇಂದ್ರ


Team Udayavani, Sep 30, 2020, 10:29 PM IST

ಪ್ರತೀ ಠಾಣೆ ವ್ಯಾಪ್ತಿಯಲ್ಲಿ ನೂರು ಪ್ರಕರಣ ದಾಖಲು: ಡಾ| ರಾಜೇಂದ್ರ

ಬೆಳ್ತಂಗಡಿ: ತಾಲೂಕು ಸಮುದಾಯ ಅಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್‌ ಯಂತ್ರಕ್ಕೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಚಾಲನೆ ನೀಡಿದರು.

ಬೆಳ್ತಂಗಡಿ: ಕೋವಿಡ್‌ ಪ್ರಕರಣ ನಿಯಂತ್ರಣಕ್ಕೆ ತರುವ ಸಲುವಾಗಿ ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ 100 ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಜತೆಗೆ ಗ್ರಾಮ ಮಟ್ಟದಲ್ಲಿ ಗರಿಷ್ಠವಾಗಿ ಪರೀಕ್ಷಾ ಮಿತಿ ಹೆಚ್ಚಿಸಲಾಗುವುದು. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.

ಬೆಳ್ತಂಗಡಿ ತಾ|ನಲ್ಲಿ ವಿವಿಧ ಇಲಾ ಖೆಗಳಡಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾರ್ಯ ಕ್ರಮದ ವಿಚಾರವಾಗಿ ಸಭೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತ ನಾಡಿದರು. ಬೆಳ್ತಂಗಡಿ ಅಭಿವೃದ್ಧಿ ಪೂರಕ ಯೋಜ ನೆಗಳಾದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಅಭಿವೃದ್ಧಿ, ಕುಡಿಯುವ ನೀರು, ಘನತ್ಯಾಜ್ಯ ಘಟಕ ನಿರ್ವಹಣೆ ಕುರಿತಾದ ಒಂದಿಷ್ಟು ಅಭಿವೃದ್ಧಿ ಪೂರಕ ವಿಚಾರಗಳನ್ನು ಸಂಬಂ ಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾ ಲಿಸಿಸ್‌ಯಂತ್ರ ಸಮಸ್ಯೆ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆ. ಹೊಸ ಡಯಾಲಿಸಿಸ್‌ ಯಂತ್ರ ಜತೆಗೆ 7 ಯಂತ್ರಗಳು ರೋಗಿಗಳ ತುರ್ತು ಸೇವೆಗೆ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಕ್ರಮ ಕೈಗೊಳ್ಳುವ ಸಲುವಾಗಿ ಸರಕಾರಿ ಆಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೊಳಪಡಿಸುವುದು, ಆಹಾರ, ಸ್ವತ್ಛತೆ ಮತ್ತು ಸರಕಾರದಿಂದ ಬಂದ ವೆಂಟಿಲೇಟರ್‌ಗಳನ್ನು ಹೇಗೆ ಸದುಪಯೋಗ ಪಡಿಸಬಹುದು ಮುಂತಾದ ವಿಚಾರವಾಗಿ ಕ್ರಮ ಕೈಗೊಳ್ಳಲು ಆರೋಗ್ಯಧಿಕಾರಿ, ತಹಶೀಲ್ದಾರ್‌ಗೆ ಸೂಚಿಸಿದ್ದೇನೆ ಎಂದರು.

ಗುತ್ತಿಗೆ ನೌಕರರ ಸಮಸ್ಯೆ
ಗುತ್ತಿಗೆ ನೌಕರರ ವೇತನ ಹಾಗೂ ಖಾಯಂಗೊಳಿಸುವ ಬೇಡಿಕೆಯಿಟ್ಟು ಮುಷ್ಕರ ಕೈಗೊಂಡಿದ್ದರಿಂದ ಅವರ ವೇತನ ಖಡಿತಗೊಳಿಸಿ ಕ್ರಮ ಕೈಗೊಳ್ಳಲು ಸರಕಾರದ ಹಂತದಲ್ಲಿ ನಿರ್ದೇಶನ ಸಿಕ್ಕಿದೆ.

ನಿವೇಶನ ವೀಕ್ಷಿಸಿದ ಜಿಲ್ಲಾಧಿಕಾರಿ
ಬೆಳ್ತಂಗಡಿ ಪ.ಪಂ. ವ್ಯಾಪ್ತಿಗೊಳಪಟ್ಟಂತೆ ನಿವೇಶನ ಹಂಚಿಕೆಗೆ ಕಲ್ಲಗುಡ್ಡೆ ಪ್ರದೇಶದಲ್ಲಿ ಮೀಸಲಿರಿಸಿದ 4.04 ಎಕ್ರೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು. 128 ನಿವೇಶನ ಗುರುತಿಸಲಾಗಿದ್ದು, 110 ಸೈಟ್‌ ಪರಿಶೀಲನೆ ಹಂತದಲ್ಲೇ ಇದೆ ಎಂದು ಪ.ಪಂ. ಮುಖ್ಯಾಧಿಕಾರಿ ಸುಧಾಕರ್‌ ಮಾಹಿತಿ ನೀಡಿದರು. ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಅವರೊಂದಿಗೆ ಸಮಾಲೋಚನೆ ನಡೆಸಿ ಬಳಿಕ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಶಾಸಕ ಹರೀಶ್‌ ಪೂಂಜ, ಪುತ್ತೂರು ಸಹಾಯಕ ಆಯುಕ್ತ ಯತೀಶ್‌ ಉಳ್ಳಾಲ್‌, ತಹಶೀಲ್ದಾರ್‌ ಮಹೇಶ್‌ ಜೆ., ನ.ಪಂ. ಸದಸ್ಯರಾದ ಜಯಾನಂದ ಗೌಡ, ಶರತ್‌, ಎಂಜಿನಿಯರ್‌ ಮಹಾವೀರ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Screenshot (5) copy

Vitla: ಮಲೆತ್ತಡ್ಕ ಗೌರಿಮೂಲೆ: ಈಡೇರದ ಸರ್ವಋತು ರಸ್ತೆ ಬೇಡಿಕೆ

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

udAgricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Agricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

9-uv-fusion

College Days: ಕಾಲೇಜೆಂಬ ನೆನಪಿನ ದೋಣಿಯಲಿ

new-parli

Lok Sabha, Assembly ಕ್ಷೇತ್ರಗಳ ಪುನರ್ವಿಂಗಡಣೆ: ದಕ್ಷಿಣ ತಕರಾರು ಏನು?ಮಾಹಿತಿ ಇಲ್ಲಿದೆ

8-uv-fusion

UV Fusion: ತುಳುನಾಡಿನ ಹೆಮ್ಮೆ ಕಂಬಳ

7-uv-fusion

UV Fusion: ಮಂಗನ ಕೈಯಲ್ಲಿದೆ ಮಾಣಿಕ್ಯ

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.