ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಡಿದ ಗ್ರಹಣ

ಸಾವಿರಕ್ಕೂ ಅಧಿಕ ಕಡತ ವಿಲೇವಾರಿಗೆ ಬಾಕಿ

Team Udayavani, Jun 28, 2023, 4:28 PM IST

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಡಿದ ಗ್ರಹಣ

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸದ್ಯ ಗ್ರಹಣ ಬಡಿದಿದ್ದು, ಸಾವಿರಕ್ಕೂ ಅಧಿಕ ಕಡತ ವಿಲೇವಾರಿಗೆ ಬಾಕಿ ಇದೆ. ಕಟ್ಟಡ, ಮನೆ ನಿರ್ಮಾಣ, ಭೂ ವಿನ್ಯಾಸ ಬದಲಾವಣೆ ವಿಷಯಕ್ಕೆ ಸಂಬಂಧಿಸಿ ಆಗಬೇಕಾದ ಅಗತ್ಯ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವಾರು ತಿಂಗಳಿನಿಂದ ಟೌನ್‌ ಪ್ಲ್ರಾನಿಂಗ್‌ ಮೆಂಬರ್‌(ಟಿಪಿಎಂ), ಟೌನ್‌ ಪ್ಲ್ರಾನಿಂಗ್‌ ಆಫೀಸರ್‌ (ಟಿಪಿಒ) ಖಾಯಂ ಇಲ್ಲದೆ ಇರುವುದರಿಂದ ಉಡುಪಿ ಜನತೆ ಬಸವಳಿಯುವಂತಾಗಿದೆ.

ತಿಂಗಳುಗಟ್ಟಲೆ ಕಾಯುತ್ತಿರುವ ಸಾರ್ವಜನಿಕರು
ಎಟಿಪಿ, ಟಿಪಿಎಂ ವರದಿ ಇಲ್ಲದಿದ್ದರೆ ನಗರಸಭೆ, ಗ್ರಾ. ಪಂ. ಅನುಮತಿ ಕೊಡಲು ಬರುವುದಿಲ್ಲ. ಮನೆ ಕಟ್ಟಲು, ಮನೆ ಪೂರ್ಣಗೊಂಡರೂ ಎರಡು ಹಂತಕ್ಕೂ ಪ್ರಾಧಿಕಾರದ ವರದಿಗಾಗಿ ಜನರು ತಿಂಗಳುಗಟ್ಟಲೆ ಕಾಯುವಂತಾಗಿದೆ. ಕಟ್ಟಡ, ಮನೆಗಳ ನಿರ್ಮಾಣದ ಸಮಯದಲ್ಲಿ ಜನರು ಸಾಕಷ್ಟು ತೊಂದರೆಗೊಳಗಾಗುತ್ತಿದ್ದಾರೆ. ಬಡವರು ಮನೆ ನವೀಕರಣಕ್ಕೆ ಬ್ಯಾಂಕ್‌ನಿಂದ ಸಾಲ ಪಡೆಯಲು ಪ್ರಾಧಿಕಾರದ ರಿಪೇರಿ ಲೈಸೆನ್ಸ್‌ ಪಡೆಯಬೇಕು. ಇದನ್ನೂ ಸಹ ಕಾಲಮಿತಿಯಲ್ಲಿ ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು. ಟಿಪಿಎಂ ವಾರಕ್ಕೆ ಎರಡು ದಿನ ಪ್ರಾಧಿಕಾರದ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸೈಟ್‌ ವಿಸಿಟ್‌, ದಾಖಲೆ ಪರಿಶೀಲನೆ, ತಾಂತ್ರಿಕ ಅನುಮೋದನೆ ಕೆಲಸಗಳು ವಿಳಂಬವಾಗಲು ಕಾರಣವಾಗಿದೆ. ಇನ್ನೂ ಟಿಪಿಒ ಅವರನ್ನು ಸಹ ಇದೇ ರೀತಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಅವರು ಕೆಲವು ದಿನಗಳಿಂದ ಇಲ್ಲಿನ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ.

ಈ ಪ್ರಕ್ರಿಯೆಗಳಿಗೆ ಸಮಯ ತಗಲುವುದ ರಿಂದ ಎರಡು ದಿನಗಳಲ್ಲಿ ಸಾಧ್ಯವಾದಷ್ಟು ಕನಿಷ್ಠ ಪ್ರಮಾಣದಲ್ಲಿ ಕಡತಗಳು ವಿಲೇವಾರಿ ಯಾಗುತ್ತದೆ. ಚುನಾವಣೆ ಅನಂತರ ವ್ಯವಸ್ಥಿತವಾಗಿ ತಾಂತ್ರಿಕ ವರದಿ ಅನುಮೋದನೆ ಯಾಗದೆ ಜನರು ತೀರ ಸಂಕಷ್ಟಪಡು ವಂತಾಗಿದೆ. ಕಟ್ಟಡ, ಮನೆ ನಿರ್ಮಾಣಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ತಿಂಗಳುಗಟ್ಟಲೆ ಕಾಯುತ್ತಿರುವ ಸಾರ್ವಜನಿಕರು
ಎಟಿಪಿ, ಟಿಪಿಎಂ ವರದಿ ಇಲ್ಲದಿದ್ದರೆ ನಗರಸಭೆ, ಗ್ರಾ. ಪಂ. ಅನುಮತಿ ಕೊಡಲು ಬರುವುದಿಲ್ಲ. ಮನೆ ಕಟ್ಟಲು, ಮನೆ ಪೂರ್ಣಗೊಂಡರೂ ಎರಡು ಹಂತಕ್ಕೂ ಪ್ರಾಧಿಕಾರದ ವರದಿಗಾಗಿ ಜನರು ತಿಂಗಳುಗಟ್ಟಲೆ ಕಾಯುವಂತಾಗಿದೆ. ಕಟ್ಟಡ, ಮನೆಗಳ ನಿರ್ಮಾಣದ ಸಮಯದಲ್ಲಿ ಜನರು ಸಾಕಷ್ಟು ತೊಂದರೆಗೊಳಗಾಗುತ್ತಿದ್ದಾರೆ. ಬಡವರು ಮನೆ ನವೀಕರಣಕ್ಕೆ ಬ್ಯಾಂಕ್‌ನಿಂದ ಸಾಲ ಪಡೆಯಲು ಪ್ರಾಧಿಕಾರದ ರಿಪೇರಿ ಲೈಸೆನ್ಸ್‌ ಪಡೆಯಬೇಕು. ಇದನ್ನೂ ಸಹ ಕಾಲಮಿತಿಯಲ್ಲಿ ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.

ಏನೇನು ಸಮಸ್ಯೆಗಳಾಗುತ್ತಿವೆ ?
ನಗರಸಭೆ, ಗ್ರಾ. ಪಂ. ಕಟ್ಟಡ ಪರವಾನಿಗೆ, ನಿರಾಕ್ಷೇಪಣ ಪತ್ರ, ಕನ್ವರ್ಷನ್‌, ಬಿಲ್ಡಿಂಗ್‌ ಕಂಪ್ಲೀಷನ್‌ ಸರ್ಟಿಫಿಕೆಟ್‌, ಸಿಂಗಲ್‌ ಲೇಔಟ್‌, ಮಲ್ಟಿ ಲೇಔಟ್‌, ವಲಯ ಬದಲಾವಣೆಗಾಗಿ ಜನರು ಪ್ರಾಧಿಕಾರದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ತಾಂತ್ರಿಕ ವರದಿಗೆ ಸಂಬಂಧಿಸಿ ಕಡತಗಳು ಮುಖ್ಯವಾಗಿ ವಿಲೇವಾರಿಯಾಗುತ್ತದೆ.

ನಗರಸಭೆಗೆ ಸಂಬಂಧಿಸಿದ್ದು ಆನ್ಲ„ನ್‌ ಮೂಲಕ ಪ್ರಕ್ರಿಯೆಗೊಂಡು ಪ್ರಾಧಿಕಾರದ ಸುಪರ್ದಿಗೆ ಬರುತ್ತದೆ. ನಗರಸಭೆ ಸುತ್ತಲಿನ ಗ್ರಾಮೀಣ ಭಾಗದ ಗ್ರಾ. ಪಂ.ನಿಂದ ಆಫ್ಲೈನ್‌ ಮೂಲಕ ಅನುಮೋದನೆಗೆ ಪ್ರಾಧಿಕಾರಕ್ಕೆ ಬರುತ್ತದೆ.

ಖಾಯಂ ಇದ್ದರೆ ತೊಂದರೆಯಾಗದು
ಪ್ರಾಧಿಕಾರದಲ್ಲಿ ಟಿಪಿಎಂ, ಟಿಪಿಒ ಎರಡು ಹುದ್ದೆಗಳು ಖಾಯಂ ಇದ್ದರೆ ಕಡತ ವಿಲೇವಾರಿ ವಿಳಂಬವಾಗುವುದಿಲ್ಲ. ಬೇರೆ ಸಿಬಂದಿ ಕೊರತೆ ಇಲ್ಲ. ಟಿಪಿಎಂ, ಟಿಪಿಒ ಅವರು ಬಿಲ್ಡಿಂಗ್‌ ಲೈಸೆನ್ಸ್‌, ಎನ್‌ಒಸಿ, ಸಿಂಗಲ್‌, ಮಲ್ಟಿ ಲೇಔಟ್‌ ಎಲ್ಲವು ಸೈಟ್‌ ವಿಸಿಟ್‌, ಪರಿಶೀಲನೆಯಾಗಿ ತಾಂತ್ರಿಕ ವರದಿ ನೀಡಬೇಕು. ನಮ್ಮ ಹಂತದಲ್ಲಿ ಸಾಧ್ಯವಾದಷ್ಟು ಕಡತ ವಿಲೇವಾರಿಗೆ ಶ್ರಮಿಸುತ್ತಿದ್ದೇವೆ. ಟಿಪಿಎಂ ವಾರಕ್ಕೆ ಎರಡು ದಿನ ಪ್ರಾಧಿಕಾರದ ಕರ್ತವ್ಯಕ್ಕೆ ಬರುತ್ತಾರೆ. 2 ದಿನ ಕುಂದಾಪುರ, 2 ಡಿಸಿ ಕಚೇರಿಯಲ್ಲಿ ಅವರಿಗೆ ಕರ್ತವ್ಯ ನಿರ್ವಹಿಸಬೇಕು. ಇದೇ ರೀತಿ ಟಿಪಿಒ ಒಬ್ಬರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇವರು ಸತತವಾಗಿ ಗೈರು ಹಾಜರಾಗುತ್ತಿದ್ದಾರೆ. ಡಿಸಿ ಅವರಿಗೆ ಈ ಬಗ್ಗೆ ವರದಿ ನೀಡಿದ್ದು, ಅವರಿಗೆ ಡಿಸಿ ಅವರಿಂದ ಶೋಕಾಸ್‌ ನೋಟಿಸ್‌ ನೀಡಲಾಗಿದೆ.
– ಗುರುಪ್ರಸಾದ್‌, ಆಯುಕ್ತರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ

ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ
ಪ್ರಾಧಿಕಾರದಲ್ಲಿ ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ. ಸಾವಿರಾರು ಕಡತಗಳು ವಿಲೇವಾರಿಗೆ ಬಾಕಿ ಇದೆ. ಕಟ್ಟಡ, ಮನೆ ನಿರ್ಮಾಣ ಸಹಿತ ಅನೇಕ ಕೆಲಸಗಳಿಗೆ ಜನರು ಪರದಾಡುವಂತಾಗಿದೆ. ನಿಯೋಜಿತ ಟಿಪಿಎಂ ಅವರು ವಾರಕ್ಕೆ ಒಂದೆರಡು ಸಲ ಬರುತ್ತಾರೆ. ಅದಕ್ಕೂ ಗಂಟೆಗಟ್ಟಲೆ ಕಾಯಬೇಕು. ಜನಸಾಮಾನ್ಯರು ಮತ್ತು ನಿರ್ಮಾಣ ಕ್ಷೇತ್ರಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ಶಾಸಕರೊಂದಿಗೂ ಚರ್ಚೆ ನಡೆಸಿದ್ದೇವೆ. ಶೀಘ್ರ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸರಕಾರ ಸೂಕ್ತ ಕ್ರಮವಹಿಸಬೇಕು.
– ಪಾಂಡುರಂಗ ಆಚಾರ್‌. ಕೆ.,
ಅಧ್ಯಕ್ಷರು, ಸಿವಿಲ್‌ ಎಂಜಿನಿಯರ್ಸ್‌ ಅಸೋಸಿಯೇಶನ್‌ ಉಡುಪಿ

– ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ

Bommai BJP

Haveri; ಕಮಲ-ಕೈ ನಡುವೆ ನೇರ ಸ್ಪರ್ಧೆ: ಯಾರ ಕೊರಳಿಗೆ ಏಲಕ್ಕಿ ಹಾರ?

bjp-congress

Bagalkote: ಒಬ್ಬರಿಗೆ ಮೊದಲನೆಯದು, ಇನ್ನೊಬ್ಬರಿಗೆ ‘ಕಡೇ’ ಚುನಾವಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Udupi: ಆಕಸ್ಮಿಕವಾಗಿ ಬಾವಿಗೆ ಬಿದ್ದವರ ರಕ್ಷಣೆ

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.