Udayavni Special

 ಕಮಲಶಿಲೆ-ಹಳ್ಳಿಹೊಳೆ ಮುಖ್ಯ ರಸ್ತೆ; 6 ಕಿ.ಮೀ. ಅಂತರದಲ್ಲಿ 5ಕ್ಕೂ ಹೆಚ್ಚು ಅಪಾಯಕಾರಿ ತಿರುವು

Team Udayavani, Sep 19, 2020, 4:40 AM IST

 ಕಮಲಶಿಲೆ-ಹಳ್ಳಿಹೊಳೆ ಮುಖ್ಯ ರಸ್ತೆ; 6 ಕಿ.ಮೀ. ಅಂತರದಲ್ಲಿ 5ಕ್ಕೂ ಹೆಚ್ಚು ಅಪಾಯಕಾರಿ ತಿರುವು

ಕಮಲಶಿಲೆ - ಹಳ್ಳಿಹೊಳೆ ಮಾರ್ಗದಲ್ಲಿರುವ ಅಪಾಯಕಾರಿ ತಿರುವು.

ಕುಂದಾಪುರ: ಕಮಲಶಿಲೆಯಿಂದ ಹಳ್ಳಿಹೊಳೆ ಮೂಲಕವಾಗಿ ಕೊಲ್ಲೂರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ 6 ಕಿ.ಮೀ. ಅಂತರದಲ್ಲಿ 5ಕ್ಕೂ ಹೆಚ್ಚು ಅಪಾಯಕಾರಿ ತಿರುವುಗಳಿದ್ದು, ಆಗಾಗ ಅಪಘಾತಗಳು ಸಂಭವಿಸುತ್ತಲೇ ಇದೆ. ರಸ್ತೆಯ ವಿಸ್ತರಣೆಗೆ ಅನುದಾನ ಮಂಜೂರಾಗಿದ್ದರೂ, ಅಲ್ಲಲ್ಲಿ ಡೀಮ್ಡ್ ಫಾರೆಸ್ಟ್‌ ಕಾನೂನು ಅಡ್ಡಿಯಾಗಿದೆ. 6 ಕಿ.ಮೀ. ಉದ್ದದ ಕಮಲಶಿಲೆ  - ಹಳ್ಳಿಹೊಳೆ ರಸ್ತೆಯ ಕೇವಲ 2.5 ಕಿ.ಮೀ.ವರೆಗೆ ಮಾತ್ರ ವಿಸ್ತರಣೆಯಾಗಿದೆ.

ಕಮಲಶಿಲೆಯಿಂದ ಹಳ್ಳಿಹೊಳೆಯವರೆಗಿನ ಸುಮಾರು 6 ಕಿ.ಮೀ.ವರೆಗಿನ ರಸ್ತೆಯಲ್ಲಿ ಕನಿಷ್ಠ 5ಕ್ಕೂ ಹೆಚ್ಚು ಅಪಾಯಕಾರಿ ತಿರುವುಗಳಿವೆ. ಇದು ಕಿರಿದಾದ ರಸ್ತೆಯಾಗಿದ್ದು, ಬಸ್‌ ಮತ್ತಿತರ ಘನ ವಾಹನಗಳು ಬಂದಲ್ಲಿ ಇತರ ವಾಹನಗಳು ರಸ್ತೆಯಿಂದ ಕೆಳಗಿಳಿಯಲೇಬೇಕಾಗಿದೆ. ರಸ್ತೆಯ ಅಂಚುಗಳು ಮಳೆಗೆ ಹಾನಿಯಾಗಿರುವುದರಿಂದ ರಸ್ತೆಯಿಂದ ಕೆಳಗೆ ವಾಹನವನ್ನು ಇಳಿಸುವುದು ಕೂಡ ಅಪಾಯಕಾರಿಯಾಗಿದೆ.
ಇನ್ನೂ ಈ ಮಾರ್ಗವಾಗಿ ಪ್ರತಿ ದಿನ ಹತ್ತಾರು ಟ್ರಿಪ್‌ಗ್ಳಲ್ಲಿ ಸರಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಈಗ ಕೊರೊನಾ ಹಿನ್ನೆಲೆಯಲ್ಲಿ ಕೆಲ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಕೆಲವು ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಸಿದ್ದಾಪುರ, ಮತ್ತಿತರ ಕಡೆಯಿಂದ ಕಮಲಶಿಲೆ ಮೂಲಕವಾಗಿ ಕೊಲ್ಲೂರಿಗೆ ಯಾತ್ರಾರ್ಥಿಗಳ ನೂರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ.

ತಿರುವು ತೆರವಿಗೆ ಆಗ್ರಹ
ಈ ರಸ್ತೆಯ ವಿಸ್ತರಣೆ ಮಾಡಬೇಕು ಎನ್ನುವುದು ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿದೆ. ಪ್ರತಿನಿತ್ಯ ಹತ್ತಾರು ಬಸ್‌, ಇತರೆ ವಾಹನಗಳು ಸಂಚರಿಸುವುದರಿಂದ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಬಗ್ಗೆ ಸ್ಥಳೀಯರು ಒತ್ತಾಯಿಸುತ್ತಲೇ ಬಂದಿದ್ದಾರೆ. ಇದಲ್ಲದೆ ರಸ್ತೆ ವಿಸ್ತರಣೆ ಮಾಡಿದರೆ 5-6 ಅಪಾಯಕಾರಿ ತಿರುವು ಗಳು ಕೂಡ ತೆರವಾಗಬಹುದು. ಇದರಿಂದ ಸುಗಮ ಸಂಚಾರಕ್ಕೂ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.

10-12 ಕಿ.ಮೀ. ಬಾಕಿ
ಪ್ರಮುಖವಾಗಿ ಸಿದ್ದಾಪುರದಿಂದ ಕಮಲಶಿಲೆ- ಹಳ್ಳಿಹೊಳೆ – ಮುದೂರು- ಜಡ್ಕಲ್‌ವರೆಗಿನ 34 ಕಿ.ಮೀ. ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯು ಹಂತ – ಹಂತವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದೆ. ಅದರಲ್ಲಿ ಕಮಲಶಿಲೆ – ಹಳ್ಳಿಹೊಳೆ ಹಾಗೂ ಚಕ್ರ ಮೈದಾನದ ಅನಂತರ ಕೆಲ ಭಾಗ ಸೇರಿದಂತೆ ಅಲ್ಲಲ್ಲಿ ಮೀಸಲು ಅರಣ್ಯ ಪ್ರದೇಶ ಬರುವುದರಿಂದ ವಿಸ್ತರಣೆಗೆ ಅಡ್ಡಿಯಾಗಿದೆ. 34 ಕಿ.ಮೀ. ಪೈಕಿ ಇನ್ನು 10-12 ಕಿ.ಮೀ. ರಸ್ತೆ ವಿಸ್ತರಣೆ ಬಾಕಿಯಿದೆ ಎನ್ನುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

2.5 ಕಿ.ಮೀ. ಮಾತ್ರ ವಿಸ್ತರಣೆ
ಹಳ್ಳಿಹೊಳೆ – ಕಮಲಶಿಲೆ 6 ಕಿ.ಮೀ. ಉದ್ದದ ಮುಖ್ಯ ರಸ್ತೆಯ ವಿಸ್ತರಣೆಗೆ ಮುಖ್ಯಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರ ಮುತುವರ್ಜಿಯಲ್ಲಿ 1.40 ಕೋ.ರೂ. ಅನುದಾನ ಮಂಜೂರಾಗಿತ್ತು. ಕಳೆದ ಫೆಬ್ರವರಿಯಲ್ಲಿ ಕಾಮಗಾರಿ ಕೂಡ ನಡೆದಿತ್ತು. ಆದರೆ ಇದರಲ್ಲಿ ಅಲ್ಲಲ್ಲಿ ಒಟ್ಟು 2.5 ಕಿ.ಮೀ. ಮಾತ್ರ ವಿಸ್ತರಣೆಯಾಗಿದೆ. ಇನ್ನೂ 3 ಕಿ.ಮೀ. ಗಿಂತಲೂ ಹೆಚ್ಚು ಕಡೆಗಳಲ್ಲಿ ವಿಸ್ತರಣೆಯಾಗಬೇಕಿದೆ.

ಡೀಮ್ಡ್ ಫಾರೆಸ್ಟ್‌ ಅಡ್ಡಿ
ಕಮಲಶಿಲೆ – ಹಳ್ಳಿಹೊಳೆ ರಸ್ತೆ ವಿಸ್ತರಣೆಗೆ ಅನುದಾನ ಮಂಜೂರಾಗಿ, 2.5 ಗಿಂತಲು ಹೆಚ್ಚು ದೂರದವರೆಗೆ ರಸ್ತೆ ವಿಸ್ತರಣೆಯಾಗಿದೆ. ಆದರೆ ಪೂರ್ಣ 6 ಕಿ.ಮೀ. ವಿಸ್ತರಣೆ ಮಾಡಲು ಡೀಮ್ಡ್ ಫಾರೆಸ್ಟ್‌ ನಿಯಮ ಅಡ್ಡಿಯಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಅರಣ್ಯ ಇಲಾಖೆಗೆ ಅನುಮತಿ ಕೇಳಿದರೂ, ಅವಕಾಶ ನೀಡಿಲ್ಲ. ಆನ್‌ಲೈನ್‌ ಅನುಮತಿಗೆ ಬೇಡಿಕೆ ಸಲ್ಲಿಸುವಂತೆ ತಿಳಿಸಿದ್ದಾರೆ. ಅದು ಮತ್ತಷ್ಟು ವಿಳಂಬವಾಗಲಿದೆ.
– ರಾಘವೇಂದ್ರ ನಾಯಕ್‌, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಅಪಾಯಕಾರಿ ತಿರುವು
ಕಮಲಶಿಲೆಯಿಂದ ಹಳ್ಳಿಹೊಳೆ ರಸ್ತೆ ವಾಹನ ಸಂಚಾರ ನಿಬಿಡ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಅನೇಕ ಕಡೆಗಳಲ್ಲಿ ತಿರುವುಗಳಿದ್ದು, ಆಗಾಗ ವಾಹನಗಳ ಅಪಘಾತ, ನಿಯಂತ್ರಣ ತಪ್ಪಿ ಚರಂಡಿಗೆ ಬೀಳುವ ನಿದರ್ಶನಗಳು ನಡೆಯುತ್ತಲೇ ಇರುತ್ತವೆ.
– ರಾಘವೇಂದ್ರ ಜೋಗಿ, ಕಮಲಶಿಲೆ, ಸ್ಥಳೀಯರು

ಪ್ರಶಾಂತ್‌ ಪಾದೆ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಂಗಾರಪ್ಪ ಸ್ಮಾರಕ ನಿರ್ಮಣಕ್ಕೆ ಒಂದು ಕೋಟಿ ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

ಬಂಗಾರಪ್ಪ ಸ್ಮಾರಕ ನಿರ್ಮಣಕ್ಕೆ ಒಂದು ಕೋಟಿ ರೂ, ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ

ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ

ಅತಿವೃಷ್ಟಿ- ಪ್ರವಾಹ ಹಾನಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ

ಅತಿವೃಷ್ಟಿ- ಪ್ರವಾಹ ಹಾನಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ

ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ

ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ

ಆನೆಗಳಿಗೆ ಖೆಡ್ಡಾ; ಅನುಭವವೇ ರೋಚಕ, ಹೇಗಿರುತ್ತೆ ಖೆಡ್ಡಾ ವಿನ್ಯಾಸ

ಆನೆಗಳಿಗೆ ಖೆಡ್ಡಾ; ಅನುಭವವೇ ರೋಚಕ, ಹೇಗಿರುತ್ತೆ ಖೆಡ್ಡಾ ವಿನ್ಯಾಸ

ಜಂಬೂ ಸವಾರಿಗೆ ಸಿದ್ದವಾಗುತ್ತಿದೆ ಅಭಿಮನ್ಯು ನೇತೃತ್ವದ ಗಜಪಡೆ: ಇಲ್ಲಿದೆ ಆಕರ್ಷಕ ಚಿತ್ರಗಳು

ಜಂಬೂ ಸವಾರಿಗೆ ಸಿದ್ದವಾಗುತ್ತಿದೆ ಅಭಿಮನ್ಯು ನೇತೃತ್ವದ ಗಜಪಡೆ: ಇಲ್ಲಿದೆ ಆಕರ್ಷಕ ಚಿತ್ರಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

ವಾಹನ ಸವಾರರ ಜೀವಕ್ಕೆ ಕಂಟಕವಾದ ಗುಂಡಿಬೈಲು ರಸ್ತೆ !

ವಾಹನ ಸವಾರರ ಜೀವಕ್ಕೆ ಕಂಟಕವಾದ ಗುಂಡಿಬೈಲು ರಸ್ತೆ !

ಆನೆಕೆರೆ: ಸದ್ಯೋಜಾತ ಪಾರ್ಕ್‌ನಲ್ಲಿ  ಕೇಳಿಸುತ್ತಿಲ್ಲ ಮಕ್ಕಳ ಕಲರವ

ಆನೆಕೆರೆ: ಸದ್ಯೋಜಾತ ಪಾರ್ಕ್‌ನಲ್ಲಿ ಕೇಳಿಸುತ್ತಿಲ್ಲ ಮಕ್ಕಳ ಕಲರವ

kund-tdy-1

ಕೋಡಿ ಸೀವಾಕ್‌ಗೆ ನಾವೀನ್ಯದ ಸ್ಪರ್ಶ

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಬಂಗಾರಪ್ಪ ಸ್ಮಾರಕ ನಿರ್ಮಣಕ್ಕೆ ಒಂದು ಕೋಟಿ ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

ಬಂಗಾರಪ್ಪ ಸ್ಮಾರಕ ನಿರ್ಮಣಕ್ಕೆ ಒಂದು ಕೋಟಿ ರೂ, ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ

ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ

ಅತಿವೃಷ್ಟಿ- ಪ್ರವಾಹ ಹಾನಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ

ಅತಿವೃಷ್ಟಿ- ಪ್ರವಾಹ ಹಾನಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ

ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ

ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.