ಕಂಬದಕೋಣೆಯಲ್ಲಿ ರಸ್ತೆ ಅಪಘಾತ; ಇಬ್ಬರು ವಿದ್ಯಾರ್ಥಿಗಳು ಸಾವು
Team Udayavani, Jul 17, 2022, 11:42 AM IST
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರ ಕಂಬದಕೋಣೆ ಸಮೀಪದ ಸೇತುವೆ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು, ಸವಾರರಿಬ್ಬರು ಸಾವನ್ನಪ್ಪಿದ ಧಾರುಣ ಘಟನೆ ರವಿವಾರ ಸಂಭವಿಸಿದೆ.
ಆಂಧ್ರ ಪ್ರದೇಶ ಮೂಲದ ಆದಿತ್ಯ ರೆಡ್ಡಿ (18), ಹಾಗೂ ತರುಣ್ ಕುಮಾರ್ ರೆಡ್ಡಿ (19) ಸಾವನ್ನಪ್ಪಿದವರು. ಇಬ್ಬರು ಉಡುಪಿ ಜಿಲ್ಲೆಯ ಕಾಲೇಜೊವೊಂದರ ವಿದ್ಯಾರ್ಥಿಗಳಾಗಿದ್ದಾರೆ.
ಇವರು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಘಟನೆ ಸುದ್ದಿ ತಿಳಿದ ತತ್ ಕ್ಷಣ ಗಂಗೊಳ್ಳಿಯ 24×7 ಆಪತ್ಭಾಂಧವ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ನೆರವಾದರು. ಇವರಿಗೆ ಪ್ರದೀಪ್ ಖಾರ್ವಿ ಉಪ್ಪುಂದ, ಚಾಲಕ ಕೃಷ್ಣ, ನದೀಂ ಸಹಕರಿಸಿದರು.
ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.