ಬ್ರಜಿಲ್‌ಏರುತ್ತಲಿರುವ ಸೋಂಕಿತರ ಸಂಖ್ಯೆ : ತುದಿ ಕಾಣದ ಬೆಟ್ಟವನ್ನು ಹತ್ತುವ ಸ್ಥಿತಿ

Team Udayavani, Jun 6, 2020, 6:09 PM IST

ಬ್ರಜಿಲ್‌ಏರುತ್ತಲಿರುವ ಸೋಂಕಿತರ ಸಂಖ್ಯೆ : ತುದಿ ಕಾಣದ ಬೆಟ್ಟವನ್ನು ಹತ್ತುವ ಸ್ಥಿತಿ

ರಿಯೊ ಡಿ ಜನೆರೊ: ತುದಿ ಕಾಣದ ಬೆಟ್ಟವನ್ನು ಹತ್ತುವುದು ಎಂಬಂತಾಗಿದೆ ಬ್ರಜಿಲ್‌ನಲ್ಲಿ ಕೋವಿಡ್‌ ವೈರಸ್‌ ನಿಯಂತ್ರಣ. ಕೋವಿಡ್‌ ವೈರಸ್‌ ಅತಿ ಹೆಚ್ಚು ಬಾಧಿತ ದೇಶಗಳಲ್ಲಿ ಒಂದಾಗಿರುವ ಬ್ರಜಿಲ್‌ನಲ್ಲಿ ಸದ್ಯಕ್ಕೆ ಎಲ್ಲ ಲೆಕ್ಕಾಚಾರಗಳು ಬುಡಮೇಲಾಗುತ್ತಿವೆ. ಎಷ್ಟು ಮಂದಿ ಕೋವಿಡ್‌ ಸೋಂಕಿತರು ಇದ್ದಾರೆ ಎಂಬ ಪ್ರಶ್ನೆಗೆ ತಜ್ಞರು ತುದಿ ಕಾಣದ ಬೆಟ್ಟವನ್ನು ಹತ್ತುವ ಉದಾಹರಣೆ ನೀಡುತ್ತಾರೆ. ನಿರಂತರವಾಗಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇ ಇದ್ದೇವೆ. ಆದರೆ ರೋಗಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ವೈದ್ಯರು.

ಮೃತರ ಜತೆ ಒಂದೇ ತಾಸು
ಯಾರೇ ಕೋವಿಡ್‌ಗೆ ಬಲಿಯಾದರೂ ಮೃತದೇಹದ ಜತೆಗೆ ಇರಲು ಮನೆಯವರಿಗೆ ಸಿಗುವುದು ಒಂದೇ ತಾಸಿನ ಸಮಯ. ಹೆಚ್ಚೆಂದರೆ 10 ಮಂದಿ ಮಾತ್ರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಬಹುದು.

ಶವ ಸಂಸ್ಕಾರ ನೆರವೇರಿಸುವ ಅಂಡರ್‌ಟೇಕರ್‌ಗಳಿಗೆ ಇನ್ನೂ ಕಟ್ಟುನಿಟ್ಟಿನ ನಿಯಮಗಳಿವೆ. ಗುಂಡಿ ಅಗೆಯಲು ಇಳಿಯುವ ಮೊದಲು ಅವರಿಗೆ ಸಣ್ಣ ಚೀಟಿಯೊಂದನ್ನು ನೀಡಲಾಗುತ್ತದೆ. ಅದರಲ್ಲಿ ಈ3 ಎಂದು ಬರೆದಿರುತ್ತದೆ. ಇದರ ಅರ್ಥ ಇಷ್ಟೇ ಕೋವಿಡ್‌ನಿಂದಾಗಿ ಸಾವು ಎಂದು. ಈ ಚೀಟಿ ಸಿಕ್ಕಿದ ಕೂಡಲೇ ಅಂಡರ್‌ಟೇಕರ್ ಸುರಕ್ಷಾ ಉಡುಗೆ, ಮಾಸ್ಕ್, ಗ್ಲೌಸ್‌ಗಳನ್ನು ಧರಿಸಿ ಕೆಲಸಕ್ಕಿಳಿಯುತ್ತಾರೆ.

ಸರಾಸರಿ 40 ಶವ ಸಂಸ್ಕಾರ
ಬ್ರೆಜಿಲ್‌ನ ಅತಿ ದೊಡ್ಡ ನಗರ ಸಾವೊ ಪೌಲೊ ಒಂದರಲ್ಲೇ ನಿತ್ಯ ಸರಾಸರಿಯಾಗಿ 40 ಶವ ಸಂಸ್ಕಾರಗಳು ನೆರವೇರುತ್ತಿವೆ. ಕೆಲವೊಮ್ಮೆ ಒಂದೇ ದಿನದಲ್ಲಿ 60 ಶವಗಳನ್ನು ದಫ‌ನ ಮಾಡಿದ್ದೂ ಇದೆ. ಇತ್ತೀಚೆಗಷ್ಟೇ ನಗರಪಾಲಿಕೆ ಹೆಚ್ಚುವರಿಯಾಗಿ 5,000 ಶವಚೀಲಗನ್ನು ಖರೀದಿಸಿದೆ ಹಾಗೂ ಶವ ಸಂಸ್ಕಾರಕ್ಕಾಗಿ ಹೆಚ್ಚುವರಿ ಜನರನ್ನು ನೇಮಿಸಿಕೊಂಡಿದೆ. ಇಷ್ಟಾಗಿಯೂ ಬ್ರೆಜಿಲ್‌ನಲ್ಲಿ ಕೋವಿಡ್‌ ಪರಾಕಾಷ್ಠೆಗೆ ತಲುಪಿಲ್ಲ. ಜೂನ್‌ ಅಥವಾ ಜುಲೈಯಲ್ಲಿ ಪರಾಕಾಷ್ಠೆಗೆ ತಲುಪುವ ನಿರೀಕ್ಷೆಯಿದೆ ಎನ್ನುತ್ತಿದ್ದಾರೆ ತಜ್ಞರು.

ಪ್ರಯೋಗಾ ಲಯಗಳಿಗೆ ಪುರುಸೊತ್ತಿಲ್ಲ ದೇಶದಲ್ಲಿರುವ ಎಲ್ಲ ಪ್ರಯೋಗಾಲಯಗಳಿಗೆ ಪುರುಸೊತ್ತಿಲ್ಲದಷ್ಟು ಕೆಲಸ. ಎಷ್ಟೋ ಸಲ ಗಂಟಲ ದ್ರವ ಪರೀ ಕ್ಷೆಯ ವರದಿ ಬರುವ ಮೊದಲೇ ರೋಗಿ ಸತ್ತು ಹೋಗಿ ರುತ್ತಾನೆ. ಪರೀಕ್ಷಾ ಮಾದರಿಗಳು ವಾರಗಟ್ಟಲೆ ವಿಳಂಬ ವಾಗುತ್ತಿವೆ. ಪ್ರಯೋಗಾಲಯಗಳು ಇಷ್ಟು ಸಂಖ್ಯೆಯ ಪ್ರಯೋಗಗಳನ್ನು ಮಾಡುವ ಸಾಮರ್ಥ್ಯವನ್ನೇ ಹೊಂದಿಲ್ಲ.

300 ಪರೀಕ್ಷೆ
ಬ್ರೆಜಿಲ್‌ನಲ್ಲಿ ಈಗಲೂ ದಿನಕ್ಕೆ ಪ್ರತಿ 10 ಲಕ್ಷದಲ್ಲಿ ಹೆಚ್ಚೆಂದರೆ 300 ಮಂದಿಯ ಪರೀಕ್ಷೆ ಮಾಡಲಾಗುತ್ತಿದೆ. ಅದೇ ಅಮೆರಿಕದಲ್ಲಿ ಪ್ರತಿ 10 ಲಕ್ಷಕ್ಕೆ 9,500 ಮಂದಿಯನ್ನು ಪರೀಕ್ಷಿಸಲಾಗುತ್ತಿದೆ. ಪರೀಕ್ಷೆಗೆ ಅಗತ್ಯವಿರುವ ಸಾಧನಗಳ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ. ಇಡೀ ಜಗತ್ತು ಈ ಸಾಧನಗಳಿಗೆ ಬೇಡಿಕೆ ಸಲ್ಲಿಸುತ್ತಿರುವುದರಿಂದ ಪೂರೈಕೆ ಕಡಿಮೆಯಾಗಿದೆ. ಬ್ರೆಜಿಲ್‌ನಲ್ಲಿ ಈಗ ಆಸ್ಪತ್ರೆಗೆ ದಾಖಲಾಗಿರುವ ಚಿಂತಾಜನ ಸ್ಥಿತಿಯಲ್ಲಿರುವವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ.

ಲೆಕ್ಕ ಪಕ್ಕಾ ಅಲ್ಲ
ಬ್ರೆಜಿಲ್‌ನ ಸರಕಾರಿ ಅಂಕಿಅಂಶಗಳು “ಉಸಿರಾಟದ ಸಮಸ್ಯೆ’ಯಿಂದ ಸಾಯುತ್ತಿರುವವರ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 10ರಷ್ಟು ಹೆಚ್ಚಾಗಿದೆ ಎಂದು ಹೇಳುತ್ತಿವೆ. ಆದರೆ ಬರೀ ಸರಕಾರಿ ಲೆಕ್ಕ ಮಾತ್ರ. ವಾಸ್ತವದಲ್ಲಿ ಸೋಂಕಿನ ಮತ್ತು ಸಾವಿನ ಪ್ರಮಾಣ ಬಹಳ ಹೆಚ್ಚು ಇದೆ.

ನಿಧಾನ ಗತಿ
ಬ್ರೆಜಿಲ್‌ನಲ್ಲಿ ಎಲ್ಲವೂ ನಿಧಾನ ಗತಿಯಲ್ಲಿ ಸಾಗುತ್ತಿದೆ ಎನ್ನುವುದು ಜನರ ಮಾತ್ರವಲ್ಲ ತಜ್ಞರ ಆಕ್ರೋಶವೂ ಹೌದು. ವೈರಾಣು ತಜ್ಞ ಡಾ| ಡೇನಿಯಲ್‌ ತಬಕ್‌ ಹೇಳುವಂತೆ ದೇಶ ವೈರಸ್‌ ಎದುರಿಸುವ ತಯಾರಿ ಮಾಡುವಲ್ಲಿಯೇ ನಿಧಾನ ಗತಿ ಅನುಸರಿಸಿತ್ತು. ವೈರಸ್‌ ಬದಲಾಗಿ ದೇಶದಲ್ಲಿ ಕಾರ್ನಿವಲ್‌ನ ತಯಾರಿ ನಡೆಯುತ್ತಿತ್ತು. ಫೆ.26ರಂದು ಮೊದಲ ಸೋಂಕು ಪತ್ತೆಯಾಯಿತು. ಅನಂತರ ನಿರಂತರ ವಾಗಿ ಏರುಗತಿಯಲ್ಲಿದೆ ಎನ್ನುತ್ತಾರೆ ಡಾ| ಡೇನಿಯಲ್‌.

ಸಾಮಾಜಿಕ ಅಂತರ ಪಾಲನೆ ಹಾಗೂ ಇತರ ನಿರ್ಬಂಧಗಳಿಂದ ವೈರಸ್‌ ಹರಡುವುದನ್ನು ತಡೆಯಬಹುದಾದರೂ ಇದನ್ನು ದೇಶದ ಅಧ್ಯಕ್ಷ ಜೈರ್‌ ಬೊಲ್ಸನಾರೊ ಅವರೇ ವಿರೋಧಿಸುತ್ತಿದ್ದಾರೆ.

ಬ್ರೆಜಿಲ್‌ನಲ್ಲಿ ಕಡಿಮೆಯೆಂದರೂ 15 ಲಕ್ಷ ಕೋವಿಡ್‌ ಸೋಂಕಿತರು ಇರುವ ಸಾಧ್ಯತೆಯಿದೆ.ಇದು ಸರಕಾರಿ ಲೆಕ್ಕಕ್ಕಿಂತ 15 ಪಟ್ಟು ಹೆಚ್ಚು. ನಗರಳಲ್ಲಿರುವ ಸ್ಲಮ್‌ಗಳೇ ಕೋವಿಡ್‌ನ‌ ಕೇಂದ್ರ ಬಿಂದುಗಳಾಗಿವೆ.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.