ಸಂಕ್ರಾಂತಿ ಹಬ್ಬಕ್ಕೆ ಕೋವಿಡ್ ಕರಿನೆರಳು :ವೈಕುಂಠ ಏಕಾದಶಿಗೂ ನಿರ್ಬಂಧಿಸಿ ಡೀಸಿ ಆದೇಶ


Team Udayavani, Jan 13, 2022, 7:40 PM IST

ಸಂಕ್ರಾಂತಿ ಹಬ್ಬಕ್ಕೆ ಕೋವಿಡ್ ಕರಿನೆರಳು : ವೈಕುಂಠ ಏಕಾದಶಿಗೂ ನಿರ್ಬಂಧಿಸಿ ಡೀಸಿ ಆದೇಶ

ಮಂಡ್ಯ: ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾಂತಿ ಹಬ್ಬಕ್ಕೆ ಕೊರೊನಾ ಕರಿನೆರಳು ಬಿದ್ದಿದ್ದು, ಸಂಕ್ರಾಂತಿ ಸಂಭ್ರಮದಲ್ಲಿ ದನಗಳ ಕಿಚಾಯಿಸಲು ಸಿದ್ಧತೆ ಮಾಡಿ ಕೊಂಡಿದ್ದ ರೈತರು, ಯುವಕರಿಗೆ ನಿರಾಸೆ ತಂದಿದೆ. ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ತಂದಿದೆ. ಇದರ ಜತೆಗೆ ರೂಪಾಂತರಿ ತಳಿ ಓಮಿಕ್ರಾನ್‌ ಭೀತಿಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಭೀತಿಯಿಂದ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕೋವಿಡ್‌ ಪರೀಕ್ಷೆಗೆ ಮುಗಿ ಬೀಳುತ್ತಿದ್ದಾರೆ. ಕೋವಿಡ್‌ ಪರೀಕ್ಷಾ ಕೇಂದ್ರಗಳಲ್ಲಿ
ದಿನನಿತ್ಯ ಸರತಿ ಸಾಲುಗಳ ದೃಶ್ಯ ಕಂಡು ಬರುತ್ತಿದೆ.

ಸಂಕ್ರಾಂತಿಗೆ ಸಿದ್ಧತೆ: ಶನಿವಾರ ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಅಂದೇ ವಾರಾಂತ್ಯ ಕರ್ಫ್ಯೂ ಕೂಡ ಜಾರಿಯಲ್ಲಿದೆ. ಇದು ಹಬ್ಬದ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬಕ್ಕೆ ತಯಾರಿ ನಡೆದಿದೆ. ಮಂಡ್ಯ ನಗರ ಸೇರಿದಂತೆ ಏಳು ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲೂ ದನಗಳ ಕಿಚಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿರಾಸೆ: ಮಂಡ್ಯ ನಗರದ ಹೊಸಹಳ್ಳಿ, ಕಲ್ಲಹಳ್ಳಿ, ಹೌಸಿಂಗ್‌ ಬೋರ್ಡ್‌, ಪೇಟೆಬೀದಿ ಸೇರಿದಂತೆ ನಗರದ ಪ್ರಮುಖ ಬಡಾವಣೆಗಳಲ್ಲಿ ಯುವಕರು ಈಗಾಗಲೇ ಹೋರಿ, ದನಗಳನ್ನು ಕರೆತಂದು ಸಂಕ್ರಾಂತಿ ಹಬ್ಬಕ್ಕೆ ಕಿಚ್ಚಾಯಿಸಲು ಸಿದ್ಧತೆ ನಡೆಸಿದ್ದಾರೆ. ಪ್ರತೀ ವರ್ಷ ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ದೊಡ್ಡಮಟ್ಟದಲ್ಲಿ ದನ ಕಿಚಾಯಿಸುವ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ನಗರದ ಎಲ್ಲ ಭಾಗಗಳಿಂದಲೂ ಜಾನುವಾರುಗಳು ಬಂದು ಸೇರುತ್ತಿದ್ದವು. ಆದರೆ ಈ ಬಾರಿ ಜಿಲ್ಲಾಧಿಕಾರಿ ಆದೇಶದಿಂದ ನಿರಾಸೆ ತಂದಿದೆ ಎಂದು ಕೆಲ ಯುವಕರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಆದೇಶ: ಮಕರ ಸಂಕ್ರಾಂತಿ ಹಾಗೂ ವೈಕುಂಠ ಏಕಾದಶಿ ದಿನಗಳಂದು ಗುಂಪು ಸೇರಿ ಯಾವುದೇ ಧಾರ್ಮಿಕ ಆಚರಣೆ, ಸಂಭ್ರಮಾಚರಣೆ ಮಾಡದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಆದೇಶ ನೀಡಿದ್ದಾರೆ. ಈಗಾಗಲೇ ಜ.19ರವರೆಗೆ ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಗುಂಪು ಸೇರಿ ನಡೆಸುವ ಮದುವೆ, ನಿಶ್ಚಿತಾರ್ಥ,
ಬೀಗರ ಔತಣಕೂಟ, ಅಂತ್ಯಸಂಸ್ಕಾರ, ತಿಥಿ, ಶ್ರಾದ್ಧ, ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳಿಗೆ ಜನರ ಸೀಮಿತಗೊಳಿಸಲಾಗಿದೆ.

ವಿಶೇಷ ದಿನಗಳು, ಧಾರ್ಮಿಕ ಆಚರಣೆಗಳು, ರಾಜಕೀಯ ಸಭೆ, ಸಮಾರಂಭ, ರ್ಯಾಲಿ, ಜಾತ್ರೆಗಳು, ಉತ್ಸವಗಳು, ದೇವಾಲಯಕ್ಕೆ ಭಕ್ತಾ ದಿಗಳ ಪ್ರವೇಶ, ಧರಣಿ, ಮುಷ್ಕರಗಳನ್ನು ನಿರ್ಬಂಧಿ ಸಲಾಗಿದೆ. ಅದರಂತೆ ಜ.13ರ ವೈಕುಂಠ ಏಕಾದಶಿ ಹಾಗೂ ಜ.15ರ ಮಕರ ಸಂಕ್ರಾಂತಿ ಹಬ್ಬವನ್ನು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿ ರುವುದರಿಂದ ದನ ಕಿಚಾಯಿಸುವುದು, ಮನೆ ಮನೆಗೆ
ತೆರಳಿ ಗುಂಪು ಗುಂಪಾಗಿ ಹಬ್ಬ ಆಚರಿಸುವುದನ್ನು ನಿರ್ಬಂಧಿ ಸುವುದು ಸೂಕ್ತ ಎಂದು ನಿರ್ಧರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಟಾಪ್ ನ್ಯೂಸ್

Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು

Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು

Kampli

Kampli: ಹೆಚ್ಚಿದ ನೆರೆ ಪ್ರವಾಹ; ಹೊಲಗಳಿಗೆ ನುಗ್ಗಿದ ನೀರು

1–dsdasd

Hyper-s*xualised; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ: ಧರ್ಮನಿಂದೆ!

1-wqeq

NITI Aayog ಸಭೆಯಲ್ಲಿ ಯಾರು ಭಾಗವಹಿಸಲಿಲ್ಲವೋ ಅವರಿಗೇ ನಷ್ಟ: ಬಿ.ವಿ.ಆರ್.ಸುಬ್ರಹ್ಮಣ್ಯಂ

Drone Pratap: ಬಡ ಅಜ್ಜಿಗೆ ಕಣ್ಣಿನ ಆಪರೇಷನ್‌ ಮಾಡಿಸಿ, ನುಡಿದಂತೆ ನಡೆದ ಪ್ರತಾಪ್

Drone Pratap: ಬಡ ಅಜ್ಜಿಗೆ ಕಣ್ಣಿನ ಆಪರೇಷನ್‌ ಮಾಡಿಸಿ, ನುಡಿದಂತೆ ನಡೆದ ಪ್ರತಾಪ್

Rabakavi

Bagalakote: ಕೃಷ್ಣಾನದಿಯಲ್ಲಿ ಹರಿವು ಹೆಚ್ಚಳ; ಅಸ್ಕಿ ಗ್ರಾಮಸ್ಥರಲ್ಲಿ ಆತಂಕ

1-reee

Paris Olympics; ಫೈನಲ್‌ ಪ್ರವೇಶಿಸಿದ ಮನು ಭಾಕರ್: ಭಾರತಕ್ಕೆ ಪದಕದ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KRS Dam ಭರ್ತಿಗೆ ಒಂದೇ ಅಡಿ! 45 ವರ್ಷಗಳಲ್ಲಿ 32 ಬಾರಿ ಭರ್ತಿ; ಜು. 27ಕ್ಕೆ ಸಿಎಂ ಬಾಗಿನ

KRS Dam ಭರ್ತಿಗೆ ಒಂದೇ ಅಡಿ! 45 ವರ್ಷಗಳಲ್ಲಿ 32 ಬಾರಿ ಭರ್ತಿ; ಜು. 27ಕ್ಕೆ ಸಿಎಂ ಬಾಗಿನ

KRS Dam: ಶೀಘ್ರ ಕೆಆರ್‌ಎಸ್‌ ಡ್ಯಾಂ ಭರ್ತಿ 92 ಗ್ರಾಮಗಳಲ್ಲಿ ಪ್ರವಾಹ ಭೀತಿ

Cheluvaraya-swamy

Cauvery Water: ಎಚ್‌ಡಿಕೆ ಕಾವೇರಿ ಸಮಸ್ಯೆ ಬಗೆಹರಿಸಿದ್ರೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ

HDK

Cauvery Water Problem; ಸಾಯುವುದರೊಳಗೆ ಕಾವೇರಿ ಸಮಸ್ಯೆಗೆ ಮುಕ್ತಿ: ಎಚ್‌ಡಿಕೆ

1-eee

Mandya; ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ

MUST WATCH

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

udayavani youtube

ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ| ಭಯಭೀತರಾದ ಜನ

udayavani youtube

ಸಂಕೇಶ್ವರ : ಉಕ್ಕಿ ಹರಿದ ಹಿರಣ್ಯಕೇಶಿ ನದಿ; ನೀರಿನಲ್ಲೇ ನಿಂತು ಶಂಕರಲಿಂಗ ದೇವರಿಗೆ ಆರತಿ

udayavani youtube

ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

ಹೊಸ ಸೇರ್ಪಡೆ

Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು

Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು

Kampli

Kampli: ಹೆಚ್ಚಿದ ನೆರೆ ಪ್ರವಾಹ; ಹೊಲಗಳಿಗೆ ನುಗ್ಗಿದ ನೀರು

suicide

Mysuru ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮೃತಪಟ್ಟ 27 ರ ಯುವಕ!

1–dsdasd

Hyper-s*xualised; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ: ಧರ್ಮನಿಂದೆ!

Puttur: ವಿದೇಶದಲ್ಲಿ ಆತ್ಮಹತ್ಯೆ; ಪುತ್ತೂರಿಗೆ ಮೃತದೇಹ

Puttur: ವಿದೇಶದಲ್ಲಿ ಆತ್ಮಹತ್ಯೆ; ಪುತ್ತೂರಿಗೆ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.