ತಂಬಾಕು ಉತ್ಪನ್ನ: ನಿಷೇಧದ ನಡುವೆಯೂ…
Team Udayavani, Apr 28, 2020, 5:55 AM IST
ಸಾಂದರ್ಭಿಕ ಚಿತ್ರ..
ವಿಶೇಷ ವರದಿ-ಮಂಗಳೂರು: ಲಾಕ್‌ಡೌನ್ ಸಮಯ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶವಿದೆ. ಆದರೆ ಇದರ ನಡುವೆಯೂ ಹಲವೆಡೆ ನಿಷೇಧಿತ ತಂಬಾಕು ಉತ್ಪನ್ನಗಳ ಪೂರೈಕೆ, ಮಾರಾಟ ಬಿರುಸಾಗಿದೆ. ಕಾಳಸಂತೆಯೂ ಭರ್ಜರಿಯಾಗಿದೆ.
ನಗರ, ಪಟ್ಟಣಗಳ ಹೊರವಲಯ, ಗ್ರಾಮೀಣ ಭಾಗಗಳಲ್ಲಿ ವಿವಿಧ ಗುಟ್ಕಾಗಳನ್ನು ಮೂರ್ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇವುಗಳ ಮಾರಾಟದಲ್ಲಿ ಕೆಲವು ದಿನಸಿ, ತರಕಾರಿ ಅಂಗಡಿಗಳೂ ಹಿಂದೆ ಬಿದ್ದಿಲ್ಲ. ಸಿಗರೇಟ್ ಕೂಡ ತೆರೆಮರೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಪರಿಚಿತರಿಗೆ ಮಾರಾಟವಾಗುತ್ತಿರುವುದು ಹೆಚ್ಚು. ದ.ಕ. ಮತ್ತು ಉಡುಪಿ ಜಿಲ್ಲೆಯ ಹಲವೆಡೆ ಗ್ರಾಮೀಣ ಭಾಗಗಳಲ್ಲಿ ತಯಾರಾಗುವ ಸ್ಥಳೀಯ ತಂಬಾಕು ಪುಡಿಗೂ ಬೇಡಿಕೆ ಹೆಚ್ಚಿದೆ.
ಪೊಲೀಸರಿಗೆ ಸವಾಲು
ನಿಷೇಧಿತ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ “ಕೋಟಾ³’ ತಂಡ ನಿಗಾ ವಹಿಸುತ್ತಿತ್ತು. ಆದರೆ ಪ್ರಸ್ತುತ ಈ ತಂಡದ ಸಿಬಂದಿಗೆ ಕೋವಿಡ್ 19 ನಿಯಂತ್ರಣದ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇದರ ನಡುವೆ ತಂಬಾಕು ಕಾಳಸಂತೆಯನ್ನು ಪತ್ತೆಹಚ್ಚುವುದು ಪೊಲೀಸರಿಗೂ ಸವಾಲಾಗಿದೆ. ಕೆಲವರು ಅಗತ್ಯ ವಸ್ತುಗಳ ಜತೆ ತಂಬಾಕು ಉತ್ಪನ್ನಗಳನ್ನು ಸಾಗಿಸುವ ಬಗ್ಗೆಯೂ ಗುಮಾನಿಗಳಿವೆ.
ಸಂಪೂರ್ಣ ನಿಷೇಧ
ಕೋವಿಡ್ 19 ವೈರಸ್ ಉಗುಳಿನ ಮೂಲಕವೂ ಪಸರಿಸುವ ಅಪಾಯ ಇದ್ದು, ತಂಬಾಕು ಉತ್ಪನ್ನಗಳ ಮಾರಾಟ, ಬಳಕೆಯನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿತ್ತು. ಅಲ್ಲದೆ ಸಿಗರೇಟ್, ಮದ್ಯ ಎರಡೂ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ.
ಸಾರ್ವಜನಿಕರು ಜಾಗೃತರಾಗಿ
ಸರಕಾರ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿದೆ. ಇಂತಹ ಉತ್ಪನ್ನಗಳ ಸಾಗಾಟ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತಿದೆ. ಪೊಲೀಸರಿಗೂ ಸೂಚನೆ ನೀಡಲಾಗಿದೆ. ತಂಬಾಕು ಉತ್ಪನ್ನಗಳಿಂದ ಆರೋಗ್ಯಕ್ಕೆ ಹಾನಿಯಿದ್ದು, ಕೋವಿಡ್ 19 ಸೋಂಕು ಬರುವ, ಹರಡುವ ಸಾಧ್ಯತೆಗಳೂ ಹೆಚ್ಚಿವೆ. ಸಾರ್ವಜನಿಕರು ಜಾಗೃತರಾಗಬೇಕು.
-ಡಾ | ಜಗದೀಶ್ ದ.ಕ. ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು
Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ
Dakshina Kannada ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮ: ಜಿಲ್ಲಾಧಿಕಾರಿ ಸೂಚನೆ
Fraud Case; ಸಿಬಿಐ ಅಧಿಕಾರಿ ಹೆಸರಿನಲ್ಲಿ ಮೋಸ : ಗುತ್ತಿಗೆದಾರನಿಗೆ 15 ಲಕ್ಷ ರೂ. ವಂಚನೆ
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್