ಟ್ರ್ಯಾಕ್ಟರ್ ಟಯರ್ ಗಳನ್ನು ಕದಿಯುತ್ತಿದ್ದ 7 ಮಂದಿ ಸೆರೆ ! 4.60 ಲಕ್ಷ ಮೌಲ್ಯದ ಸೊತ್ತು ವಶ
Team Udayavani, Sep 19, 2020, 3:52 PM IST
ಬೆಳಗಾವಿ: ಮನೆ ಹಾಗೂ ಹೊಲದ ಪಕ್ಕದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗಳ ಟೈರ್ಗಳನ್ನು ಕಳ್ಳತನ ಮಾಡುತ್ತಿದ್ದ 7 ಜನರನ್ನು ಬಂಧಿ ಸಿ, 4.60 ಲಕ್ಷ ರೂ. ಮೌಲ್ಯದ 46 ಟೆ„ರ್ ಹಾಗೂ ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದ ಮಾರುತಿ ಬಸಪ್ಪ ಠೊಣಿ, ಮಹಾದೇವ ಮುರಾರಿ ಮಾಕಾಳಿ, ಬಾಬು ಸಿದ್ದಪ್ಪ ಡಾಳೆ, ಶಿವಾನಂದ ಮಾರುತಿ ಗಜಬರ, ಖಾನಾಪುರ ತಾಲೂಕಿನ ಕಕ್ಕೇರಿಯ ಸಂಜು ಬಿಷ್ಠಪ್ಪ ಅಂಬಡಗಟ್ಟಿ, ಖಾನಾಪುರ ತಾಲೂಕಿನ ಘಸ್ಟೋಳಿ ದಡ್ಡಿಯ ಸಂತೋಷ ಯಲ್ಲಪ್ಪ ನಾಗನ್ನವರ, ಖಾನಾಪುರ ತಾಲೂಕಿನ ಕಕ್ಕೇರಿಯ ಶ್ರಾವಣ ಸೋಮಲಿಂಗ ಹುಲಮನಿ ಬಂಧಿತರು. ಬಂಧಿ ತರಿಂದ 4.60 ಲಕ್ಷ ರೂ. ಮೌಲ್ಯದ 46 ಟೆ„ರ್ಗಳು, ಎರಡು ಟಾಟಾ ಸುಮೋ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮನೆ ಹಾಗೂ ಹೊಲದಲ್ಲಿ ನಿಲ್ಲಿಸಿದ್ದ ವಾಹನಗಳನ್ನೇ ಗುರಿಯಾಗಿಸಿಕೊಂಡು ಡಿಸ್ಕ್ ಸಮೇತ ಟೆ„ರ್ಗಳನ್ನು ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕೋಡಿ ಉಪವಿಭಾಗ ಡಿಎಸ್ಪಿ ಮನೋಜಕುಮಾರ ನಾಯಕ, ನಿಪ್ಪಾಣಿ ಸಿಪಿಐ ಸಂತೋಷ ಸತ್ಯನಾಯಕ ಮಾರ್ಗದರ್ಶನದಲ್ಲಿ ಖಡಕಲಾಟ ಪಿಎಸ್ಐ ಎಸ್.ಎಸ್. ಮಂಟೂರ, ನಿಪ್ಪಾಣಿ ಪಿಎಸ್ಐ ಬಿ.ಎಸ್. ತಳವಾರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಕುರಿತು ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು