ಸಚಿವ ಸ್ಥಾನ ಸಿಗದ ಪಂಜಾಬ್‌ ಕೈ ಶಾಸಕರಿಬ್ಬರಿಂದ ಪಕ್ಷದ ಹುದ್ದೆ ತ್ಯಾಗ

Team Udayavani, Apr 21, 2018, 7:28 PM IST

ಚಂಡೀಗಢ : ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ಕೊಡದ ಕಾರಣಕ್ಕೆ ಆಸಮಾಧಾನಗೊಂಡ ಇಬ್ಬರು ಕಾಂಗ್ರೆಸ್‌ ಶಾಸಕರು ಪಕ್ಷದ ಪಂಜಾಬ್‌ ಘಟಕದಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ವಿದ್ಯಮಾನ ಇಂದು ಸಂಭವಿಸಿದೆ.

ಸಂಗ್ರೂರ್‌ ಜಿಲ್ಲೆಯ ಅಮರಗಢ ಶಾಸಕ ಸುರ್ಜಿತ್‌ ಸಿಂಗ್‌ ಧಿಮಾನ್‌ ಮತ್ತು ಫಾಜಿಲ್ಕಾದ ಬಲ್ಲುವಾನಾ ಕ್ಷೇತ್ರದ ಶಾಸಕ ನಾಥು ರಾಮ್‌ ಅವರು ಪಕ್ಷದಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದವರು. ಇವರಿಬ್ಬರೂ ತಮ್ಮ ತ್ಯಾಗಪತ್ರವನ್ನು ಪಂಜಾಬ್‌ ಪ್ರದೇಶ್‌ ಕಾಂಗ್ರೆಸ್‌ ಸಮಿತಿಯ ಮುಖ್ಯಸ್ಥ ಸುನೀಲ್‌ ಜಾಖಡ್‌ ಅವರಿಗೆ ಸಲ್ಲಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ