ಸಾಲು ಸಾಲು ಬ್ಯಾಂಕ್ ರಜೆ?
Team Udayavani, Dec 16, 2018, 6:10 AM IST
ನವದೆಹಲಿ: ಡಿಸೆಂಬರ್ 20ರ ನಂತರ ಬ್ಯಾಂಕ್ ಕೆಲಸಗಳನ್ನು ಮಾಡಬೇಕು ಎಂದು ನೀವು ಯೋಜಿಸಿಕೊಂಡಿದ್ದರೆ, ಮೊದಲೇ
ಮುಗಿಸಿಕೊಳ್ಳಿ. ಯಾಕೆಂದರೆ ಡಿ. 21ರಿಂದ 25ರವರೆಗೆ ಸರಣಿ ರಜೆಗಳಿದ್ದು, 5 ದಿನಗಳವರೆಗೆ ಸತತವಾಗಿ ಬ್ಯಾಂಕ್ ಮುಚ್ಚಿರಲಿದೆ.
ಬ್ಯಾಂಕ್ ನೌಕರರು ಡಿ. 21 ಹಾಗೂ 26 ರಂದು ಮುಷ್ಕರ ಹೂಡಲು ನಿರ್ಧರಿಸಿದ್ದಾರೆ. ವಾರದಲ್ಲಿ ಐದು ದಿನಗಳ ಕೆಲಸ, ಸಂಬಳ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಮುಷ್ಕರಕ್ಕೆ ಕರೆ ನೀಡಿದೆ. ಈ ಮಧ್ಯೆ ಡಿ.22 ನಾಲ್ಕನೇ ಶನಿವಾರವಾಗಿರಲಿದೆ. ಡಿ. 23 ಭಾನುವಾರವಾಗಿದ್ದರೆ, ಡಿ.25 ಕ್ರಿಸ್ಮಸ್ ಪ್ರಯುಕ್ತ ರಜೆ ಇರಲಿದೆ. ಈ ಮಧ್ಯೆ ಸೋಮವಾರ ಅಂದರೆ ಡಿ. 24 ರಂದು ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ಅಂದು ತುರ್ತು ಕೆಲಸವಿರುವವರು ಬ್ಯಾಂಕ್ಗೆ ತೆರಳುವುದರಿಂದ, ಶಾಖೆಗಳಲ್ಲಿ ಬೇಗನೆ ಕೆಲಸ ಆಗದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ