ಮಹಾಭಿಯೋಗ ಚರ್ಚೆಯಿಂದ ನೋವು


Team Udayavani, Apr 21, 2018, 6:00 AM IST

32.jpg

ಹೊಸದಿಲ್ಲಿ: ಸುಪ್ರೀಂಕೋರ್ಟ್‌ ಮುಖ್ಯನ್ಯಾಯ ಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧದ ಮಹಾಭಿಯೋಗ ಚರ್ಚೆಯಿಂದ ನೋವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮಹಾಭಿಯೋಗ ಚರ್ಚೆಯಿಂದ ಮಾಧ್ಯಮಗಳನ್ನು ದೂರ ಇಡಬಹುದೇ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರುಳ್ಳ ನ್ಯಾಯಪೀಠ, ಮಹಾಭಿಯೋಗ ಚರ್ಚೆಯಿಂದ ಮನಸ್ಸಿಗೆ ಕಿರಿಕಿರಿಯಾಗುತ್ತಿದೆ. ಆದರೆ ಅಟಾರ್ನಿ ಜನರಲ್‌ ಅವರ ಅಭಿಪ್ರಾಯ ಕೇಳದೇ ನಾವು ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬಹುದೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಅವರ ಸಲಹೆ ಪಡೆದು ಮುಂದಿನ ನಡೆ ತೀರ್ಮಾನಿಸುತ್ತೇವೆ ಎಂದಿದೆ. 

ಸೇಡಿನ ಕ್ರಮ: ನ್ಯಾ. ಬಿ.ಎಚ್‌.ಲೋಯಾ ಅವರ ಸಾವಿನ ತನಿಖೆ ಕುರಿತ ತೀರ್ಪು ಹೊರಬಿದ್ದ ಮಾರನೇ ದಿನವೇ ವಿಪಕ್ಷಗಳು ಸೇಡಿನ ಕ್ರಮವಾಗಿ ಮಹಾಭಿಯೋಗ ಅರ್ಜಿ ಸಲ್ಲಿಸಿವೆ. ಆದರೆ, ನ್ಯಾಯಮೂರ್ತಿಯೊಬ್ಬರ ಅಧಿಕಾರ ದುರ್ಬಳಕೆ ಅಥವಾ ಅಸಮರ್ಥತೆಯ ಕಾರಣದಿಂದಾಗಿ ಮಹಾಭಿ ಯೋಗ ಮಾಡಬಹುದೇ ಹೊರತು, ಕೇಸುಗಳನ್ನು ನಿರ್ದಿಷ್ಟ ಪೀಠಕ್ಕೆ ಕೊಡಲಿಲ್ಲವೆಂಬ ಕಾರಣಕ್ಕೆ ಮಹಾಭಿಯೋಗ ಅರ್ಜಿ ದಾಖಲಿಸಬಹುದೇ ಎಂದು ಸಚಿವ ಜೇಟ್ಲಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ದುಸ್ಸಾಹಸ: ಕಾಂಗ್ರೆಸ್‌ ಸೇರಿದಂತೆ 7 ವಿಪಕ್ಷಗಳ ಇಡೀ ಪ್ರಕ್ರಿಯೆ ಕೇವಲ ದುಸ್ಸಾಹಸವೇ ಹೊರತು, ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹಿರಿಯ ಕಾನೂನು ತಜ್ಞ ರಾಮ್‌ ಜೇಠ್ಮಲಾನಿ ಕಿಡಿಕಾರಿದ್ದಾರೆ. ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ಕಾಂಗ್ರೆಸ್‌ ನಾಶಪಡಿಸಲು ಹೊರಟಿದೆ. ಇನ್ನು 3ತಿಂಗಳಲ್ಲಿ ನಿವೃತ್ತಿಯಾಗುತ್ತಿರುವ ಸಿಜೆಐ ವಿರುದ್ಧ ಮಹಾಭಿಯೋಗ ಅರ್ಜಿ ದಾಖಲಿಸಿರುವುದು ಯಾತಕ್ಕಾಗಿ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ, ಇಡೀ ಪ್ರಕ್ರಿಯೆ ಸದನಕ್ಕೆ ಹೋದರೂ, ಅಗತ್ಯ ಸದಸ್ಯರ ಬೆಂಬಲ ಇಲ್ಲದೇ ಇರುವುದರಿಂದ ಬಿದ್ದು ಹೋಗಲಿದೆ ಎನ್ನಲಾಗುತ್ತಿದೆ.  

3 ಬಾರಿ ಪ್ರಯತ್ನ
ಕಳೆದ 25 ವರ್ಷಗಳಲ್ಲಿ ಮೂವರು ಜಡ್ಜ್ಗಳ ವಿರುದ್ಧ ಮಹಾಭಿ ಯೋಗಕ್ಕೆ ಪ್ರಯತ್ನಿಸಲಾಗಿತ್ತು. 1993ರಲ್ಲಿ ನ್ಯಾ. ರಾಮಸ್ವಾಮಿ ಎಂಬ ಸುಪ್ರೀಂ ಜಡ್ಜ್ ವಿರುದ್ಧ ಭ್ರಷ್ಟಾಚಾರ ಆರೋಪ ಸಂಬಂಧ ಮಹಾಭಿಯೋಗಕ್ಕೆ ಗುರಿಪಡಿಸ ಲಾಗಿತ್ತು. ಆದರೆ, ಇದು  ಬಿದ್ದು ಹೋಗಿತ್ತು. ಇನ್ನು ಕರ್ನಾ ಟಕ ಸಿಜೆ ಆಗಿದ್ದ ಪಿ.ಡಿ. ದಿನಕರನ್‌, ಕೊಲ್ಕತಾ ಹೈಕೋರ್ಟ್‌ನ ನ್ಯಾ| ಸೌಮಿತ್ರಾ ಸೇನ್‌ ವಿರುದ್ಧ ಮಹಾಭಿಯೋಗಕ್ಕೆ ಯತ್ನ ನಡೆಯಿತಾದರೂ, ಅವರು ರಾಜೀನಾಮೆ ಕೊಟ್ಟರು. 

 ಸಿಜೆಐ ಮಿಶ್ರಾ ವಿರು ದ್ಧದ ಐದು ಆರೋಪಗಳೇನು?
1 ಒಡಿಶಾದ ಪ್ರಸಾದ್‌ ಎಜುಕೇಶನ್‌ ಟ್ರಸ್ಟ್‌ನ ಅವ್ಯವಹಾರ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರ ವಿರುದ್ಧ ಲಂಚ ಪಡೆದ ಆರೋಪವಿದ್ದು, ಸಿಬಿಐ ಅದಕ್ಕೆ ಸಾಕ್ಷ್ಯಗಳನ್ನು ಒದಗಿಸಿದರೂ, ಆ ಬಗ್ಗೆ ಎಫ್ಐಆರ್‌ ದಾಖಲಿಸಲು ಸಿಬಿಐಗೆ ಸಿಜೆಐ ಮಿಶ್ರಾ ಅನುಮತಿ ನೀಡದೇ ಇರುವುದು.

2 ಪ್ರಸಾದ್‌ ಎಜುಕೇಶನ್‌ ಟ್ರಸ್ಟ್‌ನ ಅವ್ಯವಹಾರದಲ್ಲಿ ಸಿಜೆಐ ಅವರೂ ತನಿಖೆಯ ವ್ಯಾಪ್ತಿಗೆ ಬರುವಂಥ ಸಾಧ್ಯತೆಯಿದ್ದಾಗ, ಅವರು ಹುದ್ದೆಯಲ್ಲಿ ಮುಂದುವರಿಯಬಾರದು

3 ಸಿಜೆಐ ಸಂವಿಧಾನ ಪೀಠದ ನೇತೃತ್ವವಹಿಸಿದ್ದಾಗ ಕೇಸುಗಳನ್ನು ಲಿಸ್ಟ್‌ ಮಾಡುವ ಜವಾಬ್ದಾರಿ ಅವರ ನಂತರದವರದ್ದು.  2017ರ ನ.9ರ ಪ್ರಕರಣವೊಂದನ್ನು ಸಿಜೆಐ ಮೂರು ದಿನ ಮುಂಚಿತವಾಗಿಯೇ ಪೀಠವೊಂದಕ್ಕೆ ನೀಡಿದ್ದರು. ಆದರೆ, ನಿಯಮ ಪ್ರಕಾರ ಈ ಕೇಸನ್ನು ಸಿಜೆಐ ನಂತರದ ಜಡ್ಜ್ ನ್ಯಾ. ಚಲಮೇಶ್ವರ ಅವರು ಬೇರೊಂದು ಪೀಠಕ್ಕೆ ವಹಿಸಬೇಕಿತ್ತು.

4 ಸಿಜೆಐ ಅವರು ವಕೀಲರಾಗಿದ್ದಾಗ ಸುಳ್ಳು ಅಫಿದವಿತ್‌ ನೀಡಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು. ಇದನ್ನು ಹೆಚ್ಚುವರಿ ಜಿಲ್ಲಾಧಿಕಾರಿಯವರು ರದ್ದು ಮಾಡಿದ್ದರೂ ವಾಪಸ್‌ ಕೊಟ್ಟಿರಲಿಲ್ಲ. ಆದರೆ, ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಭಡ್ತಿ ಪಡೆದ ಮೇಲೆ ಈ ಭೂಮಿ ವಾಪಸ್‌ ನೀಡಿದ್ದರು.

5 ತಮಗಿರುವ ಅಧಿಕಾರವನ್ನು ದುರುಪಯೋಗಿಸಿಕೊಂಡು ಅತಿ ಸೂಕ್ಷ್ಮ ಪ್ರಕರಣಗಳನ್ನು ತಮ್ಮ ಆದ್ಯತೆಯ ನಿರ್ದಿಷ್ಟ ಪೀಠಗಳಿಗೆ ವರ್ಗಾಯಿಸುತ್ತಿದ್ದರು. ಈ ಪೀಠದ ಮೇಲೆ ಪ್ರಭಾವ ಬೆಳೆಸಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದರು.

ಮಹಾಭಿಯೋಗ ಹೇಗೆ?
ಭಾರತದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನು ಮಹಾಭಿಯೋಗಕ್ಕೆ ಗುರಿಪಡಿಸುವುದು ಸುಲಭದ ಮಾತೇ ನಲ್ಲ. ಅಲ್ಲದೆ ಮುಖ್ಯ ನ್ಯಾಯಮೂರ್ತಿಗಳನ್ನು ಮಹಾಭಿ ಯೋಗಕ್ಕೆ ಗುರಿಪಡಿಸುವುದು ತೀರಾ ಕಷ್ಟದ ಕೆಲಸವೇ. ಸಂವಿಧಾನದ 124(4)ರಲ್ಲಿ ಮಹಾಭಿಯೋಗದ ಕ್ರಮಗಳನ್ನು ವಿವರಿಸಲಾಗಿದೆ. 

1 ಮಹಾಭಿಯೋಗ ನೋಟಿಸ್‌ ಲೋಕಸಭೆಯ 100 ಅಥವಾ ರಾಜ್ಯಸಭೆಯ 50 ಸದಸ್ಯರ ಸಹಿಯೊಂದಿಗೆ ನೀಡಬಹುದು. ಈ ಮಹಾಭಿಯೋಗ ಪ್ರಸ್ತಾಪವನ್ನು ಯಾವುದೇ ಸದನಕ್ಕಾದರೂ ಸಲ್ಲಿಸಬಹುದು. 

2 ಈ ಪ್ರಸ್ತಾಪವನ್ನು ಸ್ಪೀಕರ್‌ ಅಥವಾ ಸಭಾಪತಿ ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಒಂದೊಮ್ಮೆ ಪ್ರಸ್ತಾಪ ಅಂಗೀಕಾರವಾದಲ್ಲಿ ಸ್ಪೀಕರ್‌/ಸಭಾಪತಿ ಸುಪ್ರೀಂನ ಜಡ್ಜ್, ಹೈಕೋರ್ಟ್‌ ಜಡ್ಜ್ ಮತ್ತು ನ್ಯಾಯವೇತ್ತರೊಬ್ಬ ರನ್ನು  ಒ ಳ ಗೊಂಡ ಮೂರು ಸದಸ್ಯರ ಸಮಿತಿ ರಚಿಸಬೇಕು. ಈ ಸಮಿತಿ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಆರೋಪಗಳ ಕುರಿತಂತೆ ತನಿಖೆ ನಡೆಸಬೇಕು.

3 ಸಮಿತಿಯು ಪ್ರಸ್ತಾಪಕ್ಕೆ ಅಂಗೀಕಾರ ನೀಡಿದಲ್ಲಿ, ಇದು ಸೀದಾ ಸದನಕ್ಕೆ ಹೋಗುತ್ತದೆ. ಅಲ್ಲಿ ಚರ್ಚೆಯಾದ ನಂತರ ವಿಶೇಷ  ಬಹುಮತದೊಂದಿಗೆ ಅಂಗೀಕಾರ ಆಗಬೇಕು. ಅಂದರೆ, ಸದನದಲ್ಲಿ ಹಾಜರಿದ್ದವರ ಪೈಕಿ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಬೇಕು.

4 ಒಂದು ಸದನದಲ್ಲಿ ಇದು ಒಪ್ಪಿಗೆ ಪಡೆದ ಮೇಲೆ, ಮತ್ತೂಂದು ಸದನಕ್ಕೆ ಹೋಗಬೇಕು. ಅಲ್ಲೂ ವಿಶೇಷ ಬಹುಮತದ ಮೂಲಕ ಅಂಗೀಕಾರಗೊಳ್ಳಬೇಕು. 

5 ಒಂದು ವೇಳೆ ಎರಡೂ ಸದನಗಳಲ್ಲಿ ಮಹಾಭಿಯೋಗ ಪ್ರಸ್ತಾಪ ಅಂಗೀಕಾರವಾದಲ್ಲಿ ಸೀದಾ ರಾಷ್ಟ್ರಪತಿಗಳತ್ತ ಹೋಗುತ್ತದೆ. ಅವರು ಮುಖ್ಯ ನ್ಯಾಯಮೂರ್ತಿಗಳನ್ನು ಹುದ್ದೆಯಿಂದ ತೆಗೆದುಹಾಕಬಹುದು. 

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

kejriwal

Bail stay: ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಸಿಎಂ ಕೇಜ್ರಿವಾಲ್‌ ಅರ್ಜಿ

1—-dsadsadasd

Rajasthan ಸಚಿವ ವಿವಾದ: ಆದಿವಾಸಿಗಳ ಡಿಎನ್‌ಎ ಪರೀಕ್ಷೆ ನಡೆಸಬೇಕು

1-aatt

Bihar ಸೇತುವೆ ಕುಸಿತ: ವಾರದಲ್ಲಿ 3ನೇ ಘಟನೆ!

firing

Madhya Pradesh: ಬಿಜೆಪಿ ಯುವ ನಾಯಕನ ಗುಂಡಿಕ್ಕಿ ಹತ್ಯೆ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.