ಭರದಿಂದ ನಡೆಯುತ್ತಿರುವ ಕೋಸ್ಟಲ್‌ ರೋಡ್‌ ನಿರ್ಮಾಣ ಕಾರ್ಯ

Team Udayavani, May 18, 2019, 12:53 PM IST

210

ಮುಂಬಯಿ: ಬಾಂಬೇ ಹೈಕೋರ್ಟ್‌ನ ಎಪ್ರಿಲ್‌ ತಿಂಗಳ ಆದೇಶವನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ರದ್ದುಗೊಳಿಸಿದ ಬಳಿಕ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಯ(ಬಿಎಂಸಿ) ಮಹತ್ವಾಕಾಂಕ್ಷೆಯ ಕೋಸ್ಟಲ್‌ ರೋಡ್‌ ಯೋಜನೆಯ ನಿರ್ಮಾಣ ಕೆಲಸಗಳು ಪೂರ್ಣ ವೇಗದೊಂದಿಗೆ ನಡೆಯುತ್ತಿವೆ.

ಬಾಂಬೆ ಹೈಕೋರ್ಟ್‌ ತನ್ನ ಎ. 23ರ ಆದೇಶದಲ್ಲಿ ಕೋಸ್ಟರ್‌ ರೋಡ್‌ ಯೋಜನೆಯ ಕೆಲಸಗಳ ಮೇಲೆ ಸಂಪೂರ್ಣವಾಗಿ ತಡೆ ಹೇರಿತ್ತು. ಸುಪ್ರೀಂ ಕೋರ್ಟ್‌ ಬಾಂಬೇ ಹೈಕೋರ್ಟ್‌ನ ಎಪ್ರಿಲ್‌ನ ಆದೇಶವನ್ನು ಬದಲಾಯಿಸಿದ್ದು, ಯಾವುದೇ ಹೊಸ ಪ್ರದೇಶದಲ್ಲಿ ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳಬಾರದೆಂಬ ಷರತ್ತಿನ ಮೇರೆಗೆ ಈಗಾಗಲೇ ಪ್ರಾರಂಭವಾಗಿರುವ ಕೆಲಸವನ್ನು ಮುಂದುವರಿಸಲು ಗುತ್ತಿಗೆದಾರರಿಗೆ ಅವಕಾಶವನ್ನು ನೀಡಿದೆ. ಅಂತೆಯೇ, ಬಿಎಂಸಿ ಇದೀಗ ಪ್ರಿಯಾದರ್ಶಿನಿ ಪಾರ್ಕ್‌, ಮರೀನ್‌ ಡ್ರೈವ್‌, ಅಮರ್ಸನ್ಸ್‌ ಗಾರ್ಡನ್‌, ಹಾಜಿ ಅಲಿ ಮತ್ತು ವರ್ಲಿ ಸೀ ಫೇಸ್‌ನಲ್ಲಿ ಕೆಲಸವನ್ನು ಪುನರಾರಂಭಿಸಿದೆ. ವಾರದ ಎÇÉಾ ದಿನಗಳಲ್ಲಿ ದಿನದ 24 ತಾಸು ಕೆಲಸಗಳ ಕಾಲ ಕೆಲಸ ನಡೆಯುತ್ತಿದೆ ಎಂದು ಬಿಎಂಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ನಿರ್ಮಾಣ ಕೆಲಸವು ಕಳೆದ ಡಿಸೆಂಬರ್‌ನಿಂದ ಪ್ರಾರಂಭವಾಗಿದ್ದು, ಇದು ಯೋಜನೆಯ ಮೊದಲ ಹಂತದ ಒಟ್ಟು ಕೆಲಸದ ಶೇ. 17ರಷ್ಟು ಭಾಗವನ್ನು ಹೊಂದಿದೆ ಎಂದವರು ತಿಳಿಸಿದ್ದಾರೆ. ಕೋಸ್ಟಲ್‌ ರೋಡ್‌ ಯೋಜನೆಯ ಮೊದಲ ಹಂತವು ದ್ವೀಪ ನಗರ ಮುಂಬಯಿಯನ್ನು ಅದರ ಉಪನಗರಗಳೊಂದಿಗೆ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ. ಇದರ ಅಂದಾಜು ವೆಚ್ಚ 12,721 ಕೋಟಿ ರೂ. ಆಗಿದೆ.

ಬಿಎಂಸಿಯು ಈ ಕೆಲಸಗಳನ್ನು ಮಳೆಗಾಲ ಪ್ರಾರಂಭವಾಗುವ ಮೊದಲೇ ಪೂರ್ಣಗೊಳಿಸುವ ಆಶಯವನ್ನು ಹೊಂದಿತ್ತು. ಆದರೆ, ಈ ಯೋಜನೆಯು ನಗರದ ಸಮುದ್ರ ಕರಾವಳಿಯ ಪರಿಸರ ವಿಜ್ಞಾನದ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ ಎಂದು ಆರೋಪಿಸಿ ಪರಿಸರವಾದಿಗಳು ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕಾರಣದಿಂದಾಗಿ ಯೋಜನೆಯ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಗಿದೆ ಎಂದು ತಿಳಿಸಿದೆ.

ಇದು ಒಂದು ಮೆಗಾ ಯೋಜನೆ ಆಗಿದೆ. ಆದ್ದರಿಂದ, ದಿನದ 24 ತಾಸುಗಳ ಕಾಲ ಕೆಲಸ ನಡೆಯುತ್ತಿದೆ. ಇನ್ನು ಮಳೆಗಾಲದಲ್ಲೂ ಇದನ್ನು ನಿಲ್ಲಿಸಲಾಗುವುದಿಲ್ಲ. ಮಳೆಗಾಲದಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿದೆಯೋ, ಅದನ್ನು ಸಮುದ್ರ ಜೀವನಕ್ಕೆ ಯಾವುದೇ ಧಕ್ಕೆಯಾಗದಂತೆ ಮಾಡಲಾಗುವುದು. ಮಳೆಗಾಲ ಆಗಿದ್ದರೂ ಕೈಯಲ್ಲಿರುವ ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಅಧಿಕಾರಿ ನುಡಿದಿದ್ದಾರೆ. ಬಿಎಂಸಿ ಮತ್ತು ನಗರಕ್ಕೆ ಕೋಸ್ಟಲ್‌ ರೋಡ್‌ ಯೋಜನೆಯು ಮಹತ್ವ¨ªಾಗಿದೆ, 4 ವರ್ಷಗಳೊಳಗೆ ಇದರ ನಿರ್ಮಾಣವನ್ನು ಪೂರ್ಣಗೊಳಿಸಲು ಉದ್ದೇಶಿಸಿದೆ.

ಬಾಕಿ ಉಳಿದ ಕೆಲಸಗಳ ಪುನರಾರಂಭ
ಸದ್ಯದ ಮಟ್ಟಿಗೆ ಯಾವುದೇ ಹೊಸ ಕೆಲಸ ಪ್ರಾರಂಭಿಸುತ್ತಿಲ್ಲ. ಕೋರ್ಟ್‌ ಕೇಸ್‌ಗೆ ಮೊದಲು ನಡೆಯುತ್ತಿದ್ದ ಕೆಲಸಗಳನ್ನು ಈಗ ಪುನರಾರಂಭಿಸಲಾಗಿದೆ. ಇದು ಗಿರ್‌ಗಾಂವ್‌ ಚೌಪಾಟಿ ಮತ್ತು ಮಲಬಾರ್‌ ಹಿಲ್‌ ಅಡಿಯಲ್ಲಿ ಸುರಂಗಗಳ ನಿರ್ಮಾಣಕ್ಕೆ ಸಮುದ್ರ ಗೋಡೆಯ ನಿರ್ಮಾಣ, ಲಾಂಚಿಂಗ್‌ ಮತ್ತು ರಿಟ್ರೈವಲ್‌ ಶಾಫ್ಟ್‌ಗಳ ನಿರ್ಮಾಣ ಹಾಗೂ ಕೆಲಸದಲ್ಲಿ ನಿಯೋಜಿಸಲ್ಪಟ್ಟಿರುವ ಎಂಜಿನಿಯರ್‌ಗಳಿಗೆ ಸೈಟ್‌ ಕಚೇರಿಗಳ ನಿರ್ಮಾಣವನ್ನು ಒಳಗೊಂಡಿದೆ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ.

ಮಹತ್ವಾಕಾಂಕ್ಷೆಯ 29.2 ಕಿ.ಮೀ. ಉದ್ದದ ಕೋಸ್ಟಲ್‌ ರೋಡ್‌ ಯೋಜನೆಯು ಸುರಂಗಗಳ ಸಂಯೋಜನೆ, ಸಮುದ್ರದಲ್ಲಿ ಭೂಮಿಯ ಪುನಃಸ್ಥಾಪನೆ ಮತ್ತು ಎಲೆವೇಟೆಡ್‌ ರಸ್ತೆಗಳ ಮೂಲಕ ದಕ್ಷಿಣ ಮುಂಬಯಿಯನ್ನು ಪಶ್ಚಿಮ ಕರಾವಳಿಯ ಉಪನಗರಗಳಿಗೆ ಸಂಪರ್ಕಿಸಲಿದೆ. ಬಿಎಂಸಿಯ ಯೋಜನೆಗಳ ಪ್ರಕಾರ, ಇದು ಪ್ರಿನ್ಸೆಸ್‌ ಸ್ಟ್ರೀಟ್‌, ಮರೀನ್‌ ಲೈನ್ಸ್‌ನಿಂದ
ಪ್ರಾರಂಭವಾಗಿ ಉಪನಗರ ಕಾಂದಿವಲಿಗೆ ಜೋಡಣೆಯಾಗಲಿದೆ. ಇದು 2 ಮೀಸಲಾದ ಬಸ್‌ ಲೇನ್‌ಗಳೊಂದಿಗೆ 8 ಲೇನ್‌ಗಳನ್ನು ಹೊಂದಿರಲಿದೆ.

ಟಾಪ್ ನ್ಯೂಸ್

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

NEETಲೋಪ: ಸುಪ್ರೀಂ ತರಾಟೆ; ತಪ್ಪಾಗಿದ್ದರೆ ಒಪ್ಪಿಕೊಳ್ಳಿ : ಎನ್‌ಟಿಎಗೆ ತಾಕೀತುNEETಲೋಪ: ಸುಪ್ರೀಂ ತರಾಟೆ; ತಪ್ಪಾಗಿದ್ದರೆ ಒಪ್ಪಿಕೊಳ್ಳಿ : ಎನ್‌ಟಿಎಗೆ ತಾಕೀತು

NEETಲೋಪ: ಸುಪ್ರೀಂ ತರಾಟೆ; ತಪ್ಪಾಗಿದ್ದರೆ ಒಪ್ಪಿಕೊಳ್ಳಿ : ಎನ್‌ಟಿಎಗೆ ತಾಕೀತು

Prime Minister will inaugurate Nalanda University

Nalanda university; ಇಂದು ಪ್ರಧಾನಿಯಿಂದ ನಳಂದಾ ವಿವಿ ಉದ್ಘಾಟನೆ

virat kohli

Virat Kohli; ಅತ್ಯಂತ ಬೆಲೆಬಾಳುವ ಸೆಲೆಬ್ರಿಟಿ ಪಟ್ಟಿ: ಅಗ್ರ ಸ್ಥಾನಕ್ಕೇರಿದ ಕೊಹ್ಲಿ!

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.