ಅಬ್ಟಾ, ಕಡೆಗೂ ವಿಜಯ ಮಲ್ಯ ವಿಲ್ಲಾ ಹರಾಜು


Team Udayavani, Apr 9, 2017, 3:45 AM IST

anchor.jpg

ಪಣಜಿ: ಒಂದಲ್ಲ, ಎರಡಲ್ಲ, ಸತತ 4ನೇ ಪ್ರಯತ್ನದಲ್ಲಿ ಕೊನೆಗೂ ಉದ್ಯಮಿ ವಿಜಯ ಮಲ್ಯ ಅವರ ಗೋವಾದ “ಕಿಂಗ್‌ಫಿಶರ್‌’ ವಿಲ್ಲಾ ಹರಾಜಾಗಿದೆ.

ಮುಂಬೈನ ಕಿಂಗ್‌ಫಿಶರ್‌ ಸಂಸ್ಥೆಗೆ ಸೇರಿದ ಗೋವಾ ಕಾಂಡೋಲಿಮ್‌ ಕಡಲತೀರದಲ್ಲಿನ ವೈಭವೋಪೇತ ವಿಲ್ಲಾವನ್ನು ಬಾಲಿವುಡ್‌ ನಟ, ವಾಣಿಜ್ಯೋದ್ಯಮಿ ಸಚಿನ್‌ ಜೋಶಿ ಬರೋಬ್ಬರಿ 73 ಕೋಟಿ ರೂಗೆ. ಖರೀದಿಸಿದ್ದಾರೆ. ಈ ಹಿಂದೆ ಮೂರು ಸಲ ಎಸ್‌ಬಿಐ ಇದನ್ನು ಹರಾಜು ಹಾಕಲು ಪ್ರಯತ್ನಿಸಿತ್ತಾದರೂ ಅದು ಫ‌ಲಕೊಟ್ಟಿರಲಿಲ್ಲ. ಆದರೆ, ನಾಲ್ಕನೆ ಬಾರಿಗೆ ಇದು ಯಶಸ್ವಿಯಾಗಿ ಮುಕ್ತಾಯವಾಗಿದೆ.

ಸುಮಾರು 9 ಸಾವಿರ ಕೋಟಿ ರೂ. ಸಾಲದ ಸುಸ್ತಿದಾರನಾಗಿರುವ ಕಾರಣಕ್ಕೆ ಮಲ್ಯ ಅವರ ನಿವಾಸವನ್ನು ಬ್ಯಾಂಕ್‌ ಹರಾಜು ಹಾಕಿದೆ. ಬಿಡ್ಡುದಾರರು ಬಂದಿಲ್ಲ ಎಂಬ ಕಾರಣಕ್ಕಾಗಿ 2 ಬಾರಿ ಇದರ ಮೂಲ ಬೆಲೆಯನ್ನು 85 ಕೋಟಿ ರೂ.ನಿಂದ 81 ಕೋಟಿಗೆ ಇಳಿಸಲಾಗಿತ್ತು. ಈಗ ಜೋಷಿ ಅವರು 73 ಕೋಟಿ ರೂ.ಗೆ ಇದನ್ನು ಖರೀದಿಸಿದ್ದಾರೆ ಎಂಬ ಅಸಲಿ ಸಂಗತಿಯನ್ನು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಖಚಿತಪಡಿಸಿದ್ದಾರೆ.

ವಿಲ್ಲಾದಲ್ಲಿರುವ ಬೆಲೆಬಾಳುವ ಅಮೂಲ್ಯ ಕಲಾಕೃತಿಗಳನ್ನೂ ಹರಾಜು ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧಿಕರಣದ ಆದೇಶದ ಮೇರೆಗೆ ಬ್ಯಾಂಕ್‌ ವಿಲ್ಲಾವನ್ನು ಬಹಳ ಕಷ್ಟಪಟ್ಟು ಹರಾಜು ಮಾಡಿದೆ. ಇದೇ ಮಾದರಿಯಲ್ಲಿ ಮುಂಬೈನಲ್ಲಿರುವ ಕಿಂಗ್‌ಫಿಶರ್‌ ವಿಲ್ಲಾವನ್ನೂ ಹರಾಜು ಹಾಕಬೇಕು ಎಂಬ ಒತ್ತಾಯವೂ ಈಗ ಕೇಳಿಬರುತ್ತಿದೆ. ಈ ಮನೆಯನ್ನು ಮಲ್ಯ ಅವರು ತಮ್ಮ ವ್ಯಾಪಾರ ವಹಿವಾಟುಗಳ ಅನುಕೂಲಕ್ಕಾಗಿ ಬರುವವರಿಗೆ ಹಾಗೂ ಅತಿಥಿಗಳಿಗೆ ಅದ್ಧೂರಿ ಪಾರ್ಟಿ ಕೊಡಲು ಬಳಸುತ್ತಿದ್ದರು. 

ವಿಲ್ಲಾದೊಳಗೆ ಏನೇನಿದೆ?
-3 ಎಕರೆ ವ್ಯಾಪಿಸಿರುವ ವಿಲ್ಲಾ
-ಅತ್ಯಾಧುನಿಕ ಈಜುಕೊಳ 
-ಡಾನ್ಸ್‌ ಬಾರ್‌,  ಹೆಲಿಪ್ಯಾಡ್‌ 
-ಮೂರು ಬೆಡ್‌ರೂಂ. ವಿಸ್ತಾರವಾದ ಲಿವಿಂಗ್‌ ರೂಂ, ಸಮುದ್ರಕ್ಕೆ ಎದುರಾಗುವಂತೆ ಮಾಸ್ಟರ್‌ ಬೆಡ್‌ರೂಂ 
-ಅಮೂಲ್ಯ ಕಲಾಕೃತಿಗಳು, ಹೋಂಥಿಯೇಟರ್‌

ಖರೀದಿಸಿರುವ ನಟ ಯಾರು?
ಹರಾಜಿನಲ್ಲಿ ಖರೀದಿಸಿ ಈಗ ವಿಲ್ಲಾದ ಮಾಲೀಕನಾಗಿರುವ ಸಚಿನ್‌ ಜೋಷಿ ಬಾಲಿವುಟ್‌ ನಟನೂ ಹೌದು, ಉದ್ಯಮಿಯೂ ಹೌದು. ಜೆಎಂಜೆ ಗ್ರೂಪ್‌ ಆಫ್ ಕಂಪನೀಸ್‌ನ ಮುಖ್ಯಸ್ಥರಾಗಿರುವ ಇವರು, ಫಿಟೆ°ಸ್‌, ಆರೋಗ್ಯ, ರಿಯಲ್‌ ಎಸ್ಟೇಟ್‌ ಹಾಗೂ ಹೋಟೆಲ್‌ ಉದ್ಯಮಗಳನ್ನೂ ನಡೆಸುತ್ತಿದ್ದಾರೆ. ಗೋವಾದ ಬಿಯರ್‌ ಬ್ರಾಂಡ್‌ “ಕಿಂಗ್ಸ್‌’ ಅನ್ನು ಕೂಡ ಸಚಿನ್‌ ಜೋಷಿ ಖರೀದಿಸಿದ್ದಾರೆ. 
 

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

kejriwal

Bail stay: ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಸಿಎಂ ಕೇಜ್ರಿವಾಲ್‌ ಅರ್ಜಿ

1—-dsadsadasd

Rajasthan ಸಚಿವ ವಿವಾದ: ಆದಿವಾಸಿಗಳ ಡಿಎನ್‌ಎ ಪರೀಕ್ಷೆ ನಡೆಸಬೇಕು

1-aatt

Bihar ಸೇತುವೆ ಕುಸಿತ: ವಾರದಲ್ಲಿ 3ನೇ ಘಟನೆ!

firing

Madhya Pradesh: ಬಿಜೆಪಿ ಯುವ ನಾಯಕನ ಗುಂಡಿಕ್ಕಿ ಹತ್ಯೆ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.