ಲಡಾಖ್ ಗಡಿ ಉದ್ವಿಗ್ನ: ಪಾಂಗಾಗ್ ದಂಡೆಯಲ್ಲಿ ಭಾರತ- ಚೀನಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ
Team Udayavani, Sep 8, 2020, 7:50 AM IST
ಹೊಸದಿಲ್ಲಿ: ಭಾರತ- ಚೀನಾ ನಡುವಿನ ಗಡಿ ಸಂಘರ್ಷ ಮತ್ತೆ ಮುಂದುವರಿದಿದೆ. ಭಾರತ- ಚೀನಾ ಪಡೆಗಳ ನಡುವೆ ಸೋಮವಾರ ರಾತ್ರಿ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ವರದಿಯಾಗಿದೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಸೇನೆ ನಡೆಸಿದ ಎಚ್ಚರಿಕೆ ದಾಳಿಗೆ ಪ್ರತಿಯಾಗಿ ಕ್ರಮ ಕೈಗೊಳ್ಳಬೇಕಾಯಿತು ಎಂದಿದೆ.
ಭಾರತೀಯ ಸೇನೆಯು ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯ ಬಳಿ ನೈಜ ನಿಯಂತ್ರಣ ರೇಖೆಯನ್ನು ( ಏಲ್ ಎಸಿ) ಅಕ್ರಮವಾಗಿ ಉಲ್ಲಂಘಿಸಿದೆ ಎಂದು ಪಿಎಲ್ ಎ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ರಾತ್ರಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಸೇನೆಯಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.