ಭರ್ಜರಿ ಬೆಂಬಲ: ಲೋಕಸಭೆ ಚುನಾವಣೆಗೂ ಮುನ್ನ ಮಹತ್ವದ ನಿರ್ಧಾರ


Team Udayavani, Jul 5, 2018, 6:00 AM IST

26.jpg

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ 10 ತಿಂಗಳು ಇರುವಾಗಲೇ ದೇಶದ ರೈತರ ಮನಗೆಲ್ಲಲು ಹೊರಟಿರುವ ಕೇಂದ್ರದ ನರೇಂದ್ರ ಮೋದಿ ಸರಕಾರ “ಭರ್ಜರಿ ಬೆಂಬಲ ಬೆಲೆ’ ಘೋಷಿಸುವ ಮೂಲಕ ಮುಂಗಾರಿನ ಬಂಪರ್‌ ಗಿಫ್ಟ್ ನೀಡಿದೆ. ರಾಜ್ಯದಲ್ಲೂ ಹೆಚ್ಚಾಗಿ ಬೆಳೆಯುವ ಭತ್ತ, ರಾಗಿ, ಜೋಳ ಸಹಿತ ಮಳೆಗಾಲದ 14 ಬೆಳೆಗಳಿಗೆ ನೀಡುವ ಬೆಂಬಲ ಬೆಲೆಯನ್ನು ಪರಿಷ್ಕರಿಸಿದೆ. ಕರಾವಳಿಯಲ್ಲಿ ಮುಖ್ಯವಾಗಿ ಬೆಳೆಯುವ ಭತ್ತದ ಬೆಂಬಲ ಬೆಳೆಯನ್ನು ದಾಖಲೆಯ 200 ರೂ.ಗಳಷ್ಟು ಹೆಚ್ಚಿಸಲಾಗಿದೆ. ಗರಿಷ್ಠವೆಂದರೆ ಶೇ.53ರಷ್ಟು ಹೆಚ್ಚಿನ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಆದಾಯವನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಭರವಸೆಗೆ ಪೂರಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕ್ವಿಂಟಾಲ್‌ ಭತ್ತದ ಬೆಂಬಲ ಬೆಲೆಯನ್ನು 200 ರೂ. ಏರಿಕೆ ಮಾಡಲಾಗಿದ್ದು, ಈಗ ಕ್ವಿಂಟಾಲ್‌ಗೆ 1,570 ರೂ. ಆಗಿದೆ. ಎ ಶ್ರೇಣಿಯ ಭತ್ತಕ್ಕೆ 160 ರೂ. ಏರಿಕೆ ಮಾಡಲಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಈ ಘೋಷಣೆ ಪ್ರಕಟಿಸಿದ್ದು ಅತ್ಯಂತ ಮಹತ್ವದ್ದಾಗಿದೆ. ತೊಗರಿಗೆ 5,450 ರೂ.ಗಳಿಂದ 5,675 ರೂ. ಹಾಗೂ ಹೆಸರು ಕಾಳಿಗೆ 5,575ರಿಂದ 6,975 ರೂ.ಗೆ, ಉದ್ದು 5,400 ರೂ. ಗಳಿಂದ 5,600 ರೂ.ಗೆ ಏರಿಕೆ ಮಾಡಲಾಗಿದೆ.

ಭತ್ತದ ರೈತರಿಗೆ ಖುಷಿ 
ದೇಶದ ಇತಿಹಾಸದಲ್ಲೇ ಭತ್ತಕ್ಕೆ ಈ ಪ್ರಮಾಣದಲ್ಲಿ ಬೆಂಬಲ ಬೆಲೆ ಏರಿಕೆಯನ್ನು ಒಂದೇ ವರ್ಷದಲ್ಲಿ ಮಾಡಿದ್ದು ದಾಖಲೆಯಾಗಿದೆ. ಇನ್ನೊಂದೆಡೆ ಈ ಬಾರಿ ಮುಂಗಾರು ಕೂಡ ಉತ್ತಮವಾಗಿದ್ದು ಈಗಾಗಲೇ ಕೃಷಿಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ.

12,000 ಕೋ.ರೂ. ಹೊರೆ
ಈ ನಿರ್ಧಾರದಿಂದ ಕೇಂದ್ರ ಸರಕಾರಕ್ಕೆ 12,000 ಕೋಟಿ ರೂ. ಹೊರೆಯಾಗಲಿದೆ. ಈ ಹಿಂದೆಯೇ ಬೆಳೆ ಬೆಳೆಯುವ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಕನಿಷ್ಠ ಬೆಲೆ ನಿಗದಿ ಮಾಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿತ್ತು. ಅದಕ್ಕೆ ಪೂರಕವಾಗಿ ಸರಕಾರದಿಂದ ಈ ನಿರ್ಧಾರ ಹೊರ
ಬಿದ್ದಿದೆ. ಕೇಂದ್ರ ಸರಕಾರ ರೈತರ ಬಗ್ಗೆ ಕೈಗೊಂಡ ಕ್ರಮಗಳಲ್ಲಿಯೇ ಇದು 2ನೇ ಅತೀ ದೊಡ್ಡದು ಎಂದು ಹೇಳಲಾಗುತ್ತಿದೆ.

ಹಣದುಬ್ಬರ ಏರಿಕೆ ಅಪಾಯ 
ಭತ್ತ ಹಾಗೂ ಇತರ ಧಾನ್ಯಗಳ ಬೆಂಬಲ ಬೆಲೆ ಏರಿಕೆ ಮಾಡಿರುವುದರಿಂದಾಗಿ ಆಹಾರ ಹಣದುಬ್ಬರ ಹೆಚ್ಚುವ ಅಪಾಯ ಇದೆ. ಆದರೆ ಇದು ತಾತ್ಕಾಲಿಕವಾಗಿರುತ್ತದೆ ಮತ್ತು ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಹಣದುಬ್ಬರ ದೀರ್ಘಾವಧಿಯಲ್ಲಿ ಸ್ಥಿರ
ವಾಗುತ್ತದೆ ಎಂದು ಹೇಳಲಾಗಿದೆ.

ಕನಿಷ್ಠ ಬೆಂಬಲ ಬೆಲೆ 
ಹೆಚ್ಚಿಸುವ ಮೂಲಕ ಉತ್ಪಾದನಾ ವೆಚ್ಚದ ಶೇ. 1.5ರಷ್ಟು ಹೆಚ್ಚಿನ ಪ್ರಮಾಣದ ಬೆಂಬಲ ನೀಡುತ್ತೇವೆ ಎಂದು ಹೇಳಿದ ಮಾತನ್ನು ಪೂರೈಸಿದಂತಾಗಿದೆ. ಈ ಕ್ರಮ ನಿಜಕ್ಕೂ ಐತಿಹಾಸಿಕ.
ನರೇಂದ್ರ ಮೋದಿ, ಪ್ರಧಾನಮಂತ್ರಿ

ಭತ್ತ, ತೊಗರಿ, ರಾಗಿ ಸಹಿತ ಮುಂಗಾರಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಸಿ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ.
ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ 

ಟಾಪ್ ನ್ಯೂಸ್

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

4

ಜಡ್ಜ್ ನಾಗಪ್ರಸನ್ನರಿಂದ ಒಂದೇ ದಿನ 600 ಅರ್ಜಿಗಳ ವಿಚಾರಣೆ!

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

7-sagara

Sagara: ಸಿಗಂದೂರು ಲಾಂಚ್; ವಾಹನಗಳ ಸಾಗಾಣಿಕೆ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

Chennai: ಮಿತಿಮೀರಿದ ವೇಗ- BMW ಹೊಡೆದು ಯುವಕ ಮೃತ್ಯು; YSR ಸಂಸದನ ಪುತ್ರಿ ಪರಾರಿ

NEETಲೋಪ: ಸುಪ್ರೀಂ ತರಾಟೆ; ತಪ್ಪಾಗಿದ್ದರೆ ಒಪ್ಪಿಕೊಳ್ಳಿ : ಎನ್‌ಟಿಎಗೆ ತಾಕೀತುNEETಲೋಪ: ಸುಪ್ರೀಂ ತರಾಟೆ; ತಪ್ಪಾಗಿದ್ದರೆ ಒಪ್ಪಿಕೊಳ್ಳಿ : ಎನ್‌ಟಿಎಗೆ ತಾಕೀತು

NEETಲೋಪ: ಸುಪ್ರೀಂ ತರಾಟೆ; ತಪ್ಪಾಗಿದ್ದರೆ ಒಪ್ಪಿಕೊಳ್ಳಿ : ಎನ್‌ಟಿಎಗೆ ತಾಕೀತು

Prime Minister will inaugurate Nalanda University

Nalanda university; ಇಂದು ಪ್ರಧಾನಿಯಿಂದ ನಳಂದಾ ವಿವಿ ಉದ್ಘಾಟನೆ

virat kohli

Virat Kohli; ಅತ್ಯಂತ ಬೆಲೆಬಾಳುವ ಸೆಲೆಬ್ರಿಟಿ ಪಟ್ಟಿ: ಅಗ್ರ ಸ್ಥಾನಕ್ಕೇರಿದ ಕೊಹ್ಲಿ!

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.