ಮತ್ತೊಂದು ‘ಪುಲ್ವಾಮ ಮಾದರಿ’ ದಾಳಿಗೆ ಜೈಶ್ ಸಜ್ವು?
Team Udayavani, Mar 8, 2019, 3:09 AM IST
ಶ್ರೀನಗರ : ಇನ್ನು 3-4 ದಿನಗಳ ಒಳಗೆ ಪಾಕಿಸ್ಥಾನ ಬೆಂಬಲಿತ ಉಗ್ರ ಸಂಘಟನೆ ಜೈಶ್-ಎ-ಮಹಮ್ಮದ್ ಪುಲ್ವಾಮ ಮಾದರಿಯ ಆತ್ಮಾಹುತಿ ದಾಳಿಯೊಂದನ್ನು ನಡೆಸಲು ಸಿದ್ಧತೆ ನಡೆಸಿದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಮೂಲಗಳು ನೀಡಿವೆ. ಬಾಲಕೋಟ್ ನಲ್ಲಿರುವ ತನ್ನ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಗೆ ಪ್ರತೀಕಾರವಾಗಿ ಇನ್ನೊಂದು ಪುಲ್ವಾಮ ಮಾದರಿಯ ದಾಳಿಯನ್ನು ಜೈಶ್ ಸಂಘಟನೆ ಶೀಘ್ರವೇ ನಡೆಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಗುಪ್ತಚರ ಮಾಹಿತಿಗಳನ್ನು ಆಧರಿಸಿ ಇದೀಗ ಕಣಿವೆ ರಾಜ್ಯದಲ್ಲಿ ಗರಿಷ್ಠ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಮತ್ತು ಎಲ್ಲಾ ಭದ್ರತಾ ಪಡೆಗಳನ್ನು ‘ಹೈ ಅಲರ್ಟ್’ ಸ್ಥಿತಿಯಲ್ಲಿರಿಸಲಾಗಿದೆ. ಜೈಶ್ ಮುಖ್ಯಸ್ಥ ಮಸೂದ್ ಅಜ್ಹರ್ ನೇತೃತ್ವದ ಜೈಶ್ ಸಂಘಟನೆಯು ಪ್ರಮುಖವಾಗಿ ದಕ್ಷಿಣ ಕಾಶ್ಮೀರದ ಖ್ವಾಝಿಗಂಡ್ ಮತ್ತು ಅನಂತನಾಗ್ ಪ್ರದೇಶಗಳಲ್ಲಿ ಐಇಡಿ ದಾಳಿಗಳನ್ನು ನಡೆಸಲು ಸಂಚು ರೂಪಿಸಿದೆ ಎಂಬ ಮಾಹಿತಿಯೂ ಗುಪ್ತಚರ ಮೂಲಗಳಿಂದ ಬಹಿರಂಗಗೊಂಡಿದೆ. ಮತ್ತು ತನ್ನ ಈ ಸ್ಪೋಟ ಸಂಚಿಗಾಗಿ ಈ ಉಗ್ರ ಸಂಘಟನೆಯು ‘ಟಾಟಾ ಸುಮೋ’ ಮಾದರಿಯ ವಾಹನಗಳನ್ನು ಬಳಸುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಿತ್ತೂರ್ ಪ್ರವಾಸಕ್ಕೆ ತಡೆ;ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಧರಣಿ, ಪೊಲೀಸರ ವಶಕ್ಕೆ
ಬಿಜೆಪಿ ಅಧಿಕಾರಕ್ಕೆ ಬಂದರೆ ಕೇರಳದ ಮುಖ್ಯಮಂತ್ರಿಯಾಗಲು ಸಿದ್ಧ : ‘ಮೆಟ್ರೋ ಮ್ಯಾನ್’ ಶ್ರೀಧರನ್
ಕೋವಿಡ್ 19-ಲಸಿಕೆ ಪಡೆದ ನಂತರ ಪ್ರಧಾನಿ ಮೋದಿ… ಸಿಸ್ಟರ್ ನಿವೇದಾಗೆ ಹೇಳಿದ್ದೇನು?
ಅತ್ಯಾಚಾರವೆಸಗಿ, ಕೃತ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವ ಅಂದರ್…!
ಇಂದಿನಿಂದ ದ್ವಿತೀಯ ಹಂತದ ಲಸಿಕೆ: ಕೋವಿಡ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ