Lok Sabha; ಪ್ರತಿಷ್ಠೆ ಬದಿಗೊತ್ತಿ ವಿಪಕ್ಷ ಒಕ್ಕೂಟಕ್ಕೆ ಗೆಲುವು ಕೊಡಿಸಿದ ಖರ್ಗೆ

Team Udayavani, Jun 5, 2024, 6:42 AM IST

Lok Sabha; ಪ್ರತಿಷ್ಠೆ ಬದಿಗೊತ್ತಿ ವಿಪಕ್ಷ ಒಕ್ಕೂಟಕ್ಕೆ ಗೆಲುವು ಕೊಡಿಸಿದ ಖರ್ಗೆ

ಹೊಸದಿಲ್ಲಿ: ಬಿಜೆಪಿಯನ್ನು ಅಧಿಕಾ ರದಿಂದ ಕೆಳಗಿಳಿಸುವ ಉದ್ದೇಶದಿಂದ ರಚನೆಯಾದ ಇಂಡಿಯಾ ಮೈತ್ರಿ ಕೂಟದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆದರೂ ಧೃತಿಗೆಡದೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ ಮಿತ್ರ ಪಕ್ಷಗಳನ್ನು ಒಗ್ಗಟ್ಟಾಗಿ ತೆಗೆದುಕೊಂಡು ಈ ಬಾರಿ ಯ ಚುನಾವಣೆಯಲ್ಲಿ 232 ಸ್ಥಾನ ಗಳನ್ನು ಗೆಲ್ಲಿಸಿದ್ದಾರೆ.

ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಈ ಒಕ್ಕೂಟ 1 ತಿಂಗಳ ಕಾಲವೂ ಒಟ್ಟಿಗಿರುವುದಿಲ್ಲ ಎಂದು ಬಿಜೆಪಿ ನಾಯಕರು ಮೂದಲಿಸಿದ್ದರು. ಮೈತ್ರಿಕೂಟದಲ್ಲಿದ್ದ ಕೆಲವು ನಾಯಕರೇ ಚುನಾವಣೆಗೂ ಮುನ್ನ ಕೂಟವನ್ನು ತೊರೆದರು. ಇದ್ಯಾವುದನ್ನೂ ಲೆಕ್ಕಿಸದೇ ಒಗ್ಗಟ್ಟು ಕಾಪಾಡಿಕೊಳ್ಳುವಲ್ಲಿ ಖರ್ಗೆ ಯಶಸ್ವಿಯಾದರು.

ಕಾಂಗ್ರೆಸ್‌ ಅತೀದೊಡ್ಡ ಪಕ್ಷ ಎಂಬ ಪ್ರತಿಷ್ಠೆಯನ್ನು ಬದಿಗಿಟ್ಟು ಎಲ್ಲ ಮಿತ್ರಪಕ್ಷಗಳ ಮಾತನ್ನು ಕೇಳಿ ಖರ್ಗೆ ಸೀಟು ಹಂಚಿಕೆ ನಡೆಸಿದರು.

ಮಿತ್ರ ಪಕ್ಷಗಳು ಗೆಲ್ಲಬಲ್ಲವು ಎನಿಸಿದ ಸ್ಥಾನ ಗಳನ್ನು ಮುಲಾಜಿಲ್ಲದೇ ಅವ ರಿಗೆ ಬಿಟ್ಟು ಕೊಟ್ಟರು. ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸದೇ, ಚುನಾ ವಣೆಯ ಬಳಿಕ ಇದನ್ನು ಮಿತ್ರಪಕ್ಷಗಳು ಒಟ್ಟಾಗಿ ಘೋಷಿಸುತ್ತವೆ ಎಂದು ಹೇಳುವ ಮೂಲಕ ಒಗ್ಗಟ್ಟನ್ನು ಕಾಪಾ ಡಿಕೊಂಡರು.

ದೀರ್ಘ‌ಕಾಲ ದೇಶ ಆಳಿದ್ದ ಪಕ್ಷವೊಂದು ಇದೇ ಮೊದಲ ಬಾರಿಗೆ ಅತಿ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ ಎಂದು ಪ್ರಧಾನಿ ಮೋದಿಯಾದಿಯಾಗಿ ಬಿಜೆಪಿಯ ಅನೇಕರು ವ್ಯಂಗ್ಯವಾಡಿದರು. ಆದರೆ ಅದ್ಯಾವುದರ ಬಗ್ಗೆಯೂ ಖರ್ಗೆ ತಲೆಕೆಡಿಸಿಕೊಳ್ಳದೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು “ಗೆಲ್ಲುವುದೊಂದೇ ಗುರಿ’ ಎಂಬ ಶಪಥದೊಂದಿಗೆ ಮುನ್ನಡೆದರು. ಆ ನಡೆಯೇ ಇಂದಿನ ಈ ಫ‌ಲಿತಾಂಶಕ್ಕೆ ಕಾರಣ.

ಟಾಪ್ ನ್ಯೂಸ್

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

8

Bollywood: ಮದ್ವೆ ದಿನವೇ ಕುಡಿದು ಟೈಟ್‌ ಆದ ಸೋನಾಕ್ಷಿ ಗಂಡ; ಎಣ್ಣೆ ಪಾರ್ಟಿ ಎಂದ ನೆಟ್ಟಿಗರು

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

Udupi: ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಗರುಡ ಗ್ಯಾಂಗ್ ವಾರ್ ಆರೋಪಿಗಳು

Udupi: ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಗರುಡ ಗ್ಯಾಂಗ್ ವಾರ್ ಆರೋಪಿಗಳು

Milk

KMF: ರಾಜ್ಯದಲ್ಲಿ ಹಾಲಿನ ದರ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ…

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆ ಸ್ವರ್ಣ ಸಮರ್ಪಣೆಗೆ ಚಾಲನೆ

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಚಾಲನೆ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hospitalised: ಉಪವಾಸ ಸತ್ಯಾಗ್ರಹದ ವೇಳೆ ಹದಗೆಟ್ಟ ಅರೋಗ್ಯ, ದೆಹಲಿ ಸಚಿವೆ ಆಸ್ಪತ್ರೆ ದಾಖಲು

Hospitalised: ನೀರಿಗಾಗಿ ಉಪವಾಸ: ಹದಗೆಟ್ಟ ಆರೋಗ್ಯ… ಆಸ್ಪತ್ರೆ ದಾಖಲಾದ ಸಚಿವೆ ಅತಿಶಿ

ಪರೀಕ್ಷೆಗಿನ್ನು ಎಐ ಕೆಮರಾ ಕಣ್ಣು; ಎಲ್ಲ ಪರೀಕ್ಷಾ ಅಕ್ರಮ ತಡೆಗೆ ಕ್ರಮ

ಪರೀಕ್ಷೆಗಿನ್ನು ಎಐ ಕೆಮರಾ ಕಣ್ಣು; ಎಲ್ಲ ಪರೀಕ್ಷಾ ಅಕ್ರಮ ತಡೆಗೆ ಕ್ರಮ

ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ? ಇಂದು ಬಿಜೆಪಿ ಅಭ್ಯರ್ಥಿ ಪ್ರಕಟ

ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ? ಇಂದು ಬಿಜೆಪಿ ಅಭ್ಯರ್ಥಿ ಪ್ರಕಟ

1-aaaa

Parliament; ಸಂಘರ್ಷ ಮೂಲಕವೇ ಲೋಕಸಭೆ ಕಲಾಪ ಶುರು!

1-asasasa

NEET ದಿಲ್ಲಿಗೂ  ಪರೀಕ್ಷೆ ಅಕ್ರಮ ನಂಟು!

MUST WATCH

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

ಹೊಸ ಸೇರ್ಪಡೆ

Udayavani Campaign:ಪುತ್ತೂರು- ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

Udayavani Campaign: ಪುತ್ತೂರು- ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

8

Bollywood: ಮದ್ವೆ ದಿನವೇ ಕುಡಿದು ಟೈಟ್‌ ಆದ ಸೋನಾಕ್ಷಿ ಗಂಡ; ಎಣ್ಣೆ ಪಾರ್ಟಿ ಎಂದ ನೆಟ್ಟಿಗರು

Drainage

Bengaluru ಒಳಚರಂಡಿ: 3000 ಅನಧಿಕೃತ ಸಂಪರ್ಕ ಪತ್ತೆ

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.