ಎಲ್‌ಪಿಜಿ ಗ್ರಾಹಕರ ಸಂಖ್ಯೆ 32.5 ಕೋಟಿಗೇರಿಕೆ
Team Udayavani, Dec 9, 2022, 8:00 AM IST
ನವದೆಹಲಿ: ದೇಶದಲ್ಲಿ ಕಳೆದ 8 ವರ್ಷಗಳಲ್ಲಿ ಅಡುಗೆ ಅನಿಲ ಗ್ರಾಹಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 2014ರಲ್ಲಿ 14 ಕೋಟಿಯಷ್ಟಿದ್ದ ಎಲ್‌ಪಿಜಿ ಸಂಪರ್ಕ ಈ ವರ್ಷ 32.5 ಕೋಟಿಗೇರಿದೆ.
ಈ ಪೈಕಿ 9.6 ಕೋಟಿ ಸಂಪರ್ಕಗಳು ಪ್ರಧಾನಮಂತ್ರಿ ಉಜ್ವಲಾ ಯೋಜನೆ (ಪಿಎಂಯುವೈ) ಮೂಲಕ ನೀಡಿರುವಂಥದ್ದಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಗುರುವಾರ ಲೋಕಸಭೆಗೆ ತಿಳಿಸಿದರು.
ಪಿಎಂಯುವೈ ಫಲಾನುಭವಿಗಳಲ್ಲಿ ಅಡುಗೆ ಅನಿಲ ಬಳಕೆ ಹೆಚ್ಚಿಸಲು ಬಗ್ಗೆ ಅದರ ಬಗ್ಗೆ ಜಾಗೃತಿ ಮೂಡಿಸಲು ಸರಕಾರ ಮತ್ತು ತೈಲ ಮಾರುಕಟ್ಟೆ ಕಂಪೆನಿಗಳು ಎಲ್‌ಪಿಜಿ ಪಂಚಾಯತ್‌ಗಳನ್ನು ಆಯೋಜಿಸುತ್ತಿವೆ. ಜತೆಗೆ ಸಾಮಾಜಿಕ ಮಾಧ್ಯಮ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಈ ಬಗ್ಗೆ ತಿಳಿಸಲಾಗುತ್ತಿದೆ ಎಂದು ಸಚಿವರು ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು.