ದೆಹಲಿ ಏಮ್ಸ್‌ನಲ್ಲೂ ವೈದ್ಯರ ಮುಷ್ಕರ: ರೋಗಿಗಳ ಪರದಾಟ
Team Udayavani, Jun 14, 2019, 9:34 AM IST
ಹೊಸದಿಲ್ಲಿ : ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ವೈದ್ಯರ ಮೇಲೆ ನಡೆದ ಹಲ್ಲೆಖಂಡಿಸಿ ದೆಹಲಿಯಲ್ಲೂ ವೈದ್ಯರು ಶುಕ್ರವಾರ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಚಿಕಿತ್ಸೆಗಾಗಿ ಆಗಮಿಸಿದ ರೋಗಿಗಳು ಮತ್ತು ಸಂಬಂಧಿಗಳು ಸೂಕ್ತ ಚಿಕಿತ್ಸೆ ಲಭಿಸದೆ ಪರದಾಡುತ್ತಿದ್ದಾರೆ.
ಕೆಲ ತುರ್ತು ಚಿಕಿತ್ಸೆಗಳಿಗಾಗಿ ಆಗಮಿಸಿದ ರೋಗಿಗಳನ್ನು ಬೇರೆ ಅಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಕಳೆದ ನಾಲ್ಕು ದಿನಗಳಿಂದ ವೈದ್ಯರು
ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ಸಿಎಂ ಮಮತಾ ಬ್ಯಾನರ್ಜಿಯ ಶಿಸ್ತು ಕ್ರಮ ಎಚ್ಚರಿಕೆಗೂ ಬಗ್ಗದೆ ಪ್ರತಿಭಟನೆ ಮುಂದುವರಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೋಲ್ಕತಾದಎನ್‌ಆರ್‌ಎಸ್ ಮೆಡಿಕಲ್ ಕಾಲೇಜು
ಹಾಗೂ ಆಸ್ಪತ್ರೆಯ ವೈದ್ಯರ ಮೇಲೆಹಲ್ಲೆ ನಡೆದು, ಕೆಲವು ವೈದ್ಯರಿಗೆಗಂಭೀರ ಗಾಯಗಳಾಗಿದ್ದವು. ಇದನ್ನು ಪ್ರತಿಭಟಿಸಿ ವೈದ್ಯರು ಮಂಗಳವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಗುರುವಾರ ಎಸ್‌ಎಸ್‌ಕೆಎಂ ಆಸ್ಪತ್ರೆಯ ಆವರಣಕ್ಕೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ 2 ಗಂಟೆಯೊಳಗೆ ಮುಷ್ಕರಸ್ಥಗಿತಗೊಳಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಿದ್ದರು. ಆದರೆ ವೈದ್ಯರು ಇದಕ್ಕೆ ಬೆದರದೇ, ಮುಷ್ಕರ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ್ಞಾನವಾಪಿ ಮಸೀದಿ ವಿವಾದ: ಕೋರ್ಟ್ ಗೆ ಸಲ್ಲಿಸಿದ ಸಮೀಕ್ಷೆಯ ವರದಿಯಲ್ಲೇನಿದೆ?
ಅಸ್ಸಾಂ: ಶಾಲೆಗೆ ಗೋಮಾಂಸ ತಂದ ಮುಖ್ಯೋಪಾಧ್ಯಾಯಿನಿಯ ಬಂಧನ
ದೆಹಲಿ: AAP ಸರ್ಕಾರದ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆ ರದ್ದು: ಹೈಕೋರ್ಟ್
ಜ್ಞಾನವಾಪಿ ಬೆನ್ನಲ್ಲೇ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಈದ್ಗಾ ಮಸೀದಿ ತೆರವಿಗೆ ಅರ್ಜಿ
ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ : ಪ್ರಕರಣವೇನು?