ಇಂದಿನಿಂದ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ; ರಾಷ್ಟ್ರಪತಿ ಅಂಕಿತ
Team Udayavani, Apr 22, 2018, 11:03 AM IST
ಹೊಸದಿಲ್ಲಿ: 12 ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆವಿಧಿಸುವ ಕಠಿನ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರ ಹೊರಡಿಸಿದ್ದ ಅಧ್ಯಾದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಅಂಕಿತ ಹಾಕಿದ್ದಾರೆ.
ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಗೆ ತಿದ್ದುಪಡಿ ಮಾಡಲು ಅಧ್ಯಾದೇಶ ತರಲಾಗಿದ್ದು, ಐದು ದಿನಗಳ ವಿದೇಶ ಪ್ರವಾಸಕ್ಕೆಂದು ತೆರಳಿದ್ದ ಪ್ರಧಾನಿ ಮೋದಿ ಶನಿವಾರ ದಿಲ್ಲಿಗೆ ವಾಪಸ್ ಆದ ಒಂದೆರಡು ಗಂಟೆಗಳಲ್ಲಿ ಕೇಂದ್ರ ಸಂಪುಟ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡು ಅಧ್ಯಾದೇಶವನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿದ್ದರು.
ಕಥುವಾ, ಸೂರತ್ನಲ್ಲಿನ ಮಕ್ಕಳ ಮೇಲಿನ ಹಾಗೂ ಉನ್ನಾವ್ನ ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳ ಬಿಸಿ ತಾರಕಕ್ಕೇರಿರುವ ಬೆನ್ನಲ್ಲೇ ಈ ಆಧ್ಯಾಧೇಶ ಹೊರಡಿಸಲಾಗಿತ್ತು.
ಯಾವುದರಲ್ಲಿ ಏನೇನು ಬದಲಾವಣೆ?
ಕ್ರಿಮಿನಲ್ ಕಾನೂನು
ಮಹಿಳೆಯರ ಮೇಲಿನ ಅತ್ಯಾಚಾರ
ಇನ್ನು ಮುಂದೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ. ಇದುವರೆಗೆ ಕನಿಷ್ಠ ಏಳು ವರ್ಷವಿತ್ತು, ಇನ್ನು ಮುಂದೆ ಇದು
ಜೀವಾವಧಿವರೆಗೂ ವಿಸ್ತರಿಸಬಹುದು.
16 ವರ್ಷದೊಳಗಿನ ಸಂತ್ರಸ್ತೆ : ಶಿಕ್ಷೆಯ ಪ್ರಮಾಣ ಈಗಿರುವ 10ರಿಂದ 20 ವರ್ಷ ಅಥವಾ ಜೀವಾವಧಿವರೆಗೂ ವಿಸ್ತರಣೆ.
16 ವರ್ಷದೊಳಗಿನ ಸಂತ್ರಸ್ತೆ ಮೇಲೆ ಗ್ಯಾಂಗ್ರೇಪ್: ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ.
12 ವರ್ಷದೊಳಗಿನ ಮಕ್ಕಳು : ಮರಣದಂಡನೆ.
12 ವರ್ಷದೊಳಗಿನ ಬಾಲಕಿ ಮೇಲಿನ ಗ್ಯಾಂಗ್ರೇಪ್: ಗಲ್ಲುಶಿಕ್ಷೆ.
ಸಂಪೂರ್ಣ ತನಿಖೆಗೆ 2 ತಿಂಗಳ ಗಡುವು
ವಿಚಾರಣೆಗೆ 2 ತಿಂಗಳ ಕಾಲಾವಧಿ
ಮೇಲ್ಮನವಿಯ ಇತ್ಯರ್ಥಕ್ಕೆ ಆರು ತಿಂಗಳ ಗಡುವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!