ಉ.ಪ್ರ.ಕ್ಕೆ ಸ್ವಂತ ಮಕ್ಕಳು ಸಾಕು, ದತ್ತುಪುತ್ರರು ಬೇಡ: ಪ್ರಿಯಾಂಕಾ

Team Udayavani, Feb 18, 2017, 3:45 AM IST

PTI2_17_2017_000134A.jpg

ರಾಯ್‌ಬರೇಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಮೊದಲ ಚುನಾವಣಾ ಭಾಷಣದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. “ಉತ್ತರ ಪ್ರದೇಶಕ್ಕೆ ಯಾವುದೇ ದತ್ತುಪುತ್ರರ ಅಗತ್ಯವಿಲ್ಲ. ಈ ರಾಜ್ಯಕ್ಕೆ ಹೊರಗಿನವರನ್ನು ದತ್ತು ತೆಗೆದುಕೊಳ್ಳುವ ದುಃಸ್ಥಿತಿಯೂ ಬಂದಿಲ್ಲ’ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಪ್ರಧಾನಿ ಮೋದಿ, “ನಾನು ವಾರಾಣಸಿಯ ದತ್ತುಪುತ್ರ’ ಎಂದು ಹೇಳಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ, “ಮೋದಿಯವರೇ, ಉತ್ತರ ಪ್ರದೇಶ ವನ್ನು ಆಳಲು ಸ್ವಂತ ಮಕ್ಕಳೇ ಸಾಕು. ಇಲ್ಲಿ ಯಾರೂ ಯುವಕರೇ ಇಲ್ಲ ಅಂತಂದುಕೊಂಡಿದ್ದೀರಾ? ರಾಹುಲ್‌ ಮತ್ತು ಅಖೀಲೇಶ್‌ ಯಾದವ್‌ ಈಗಾಗಲೇ ಇಲ್ಲಿನವರ ಹೃದಯದಲ್ಲಿ ನೆಲೆಯೂರಿದ್ದಾರೆ. ಇಲ್ಲಿನ ಪ್ರತಿ ಯುವಕರಿಗೂ ರಾಜ್ಯವನ್ನು ಪ್ರಗತಿ ದಾರಿಗೆ ಕೊಂಡೊಯ್ಯುವ ಕಸುವಿದೆ’ ಎಂದು ಹೇಳಿದ್ದಾರೆ.

ರಾಜೀವ್‌ ಮಾದರಿ: “ಮೋದಿ ಕ್ಷೇತ್ರ ವಾರಾಣಸಿಯ ಜನತೆಯನ್ನು ಕೇಳಿ, ಅಲ್ಲಿ ಹುಟ್ಟಿಕೊಂಡಿದ್ದು ಬರೀ ಪೊಳ್ಳು ಭರವಸೆಗಳೇ. ಪ್ರಧಾನಿಯಾಗಿ ನೀವು ಮೂರು ವರ್ಷದಿಂದ ಅಲ್ಲೇನು ಪ್ರಗತಿ ಮಾಡಿದ್ದೀರಿ? ಅದೇ ಅಮೇಠಿ ಜನರನ್ನು ಕೇಳಿ, ರಾಜೀವ್‌ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಕ್ಷೇತ್ರವನ್ನು ಹೇಗೆಲ್ಲ ಪ್ರಗತಿಗೆ ಕೊಂಡೊಯ್ದಿದ್ದರು ಎಂದು ಅವರೇ ಹೇಳುತ್ತಾರೆ’ ಎಂದು ತಂದೆಯನ್ನು ಸ್ಮರಿಸುವ ಮೂಲಕ ಮೋದಿ ಅವರನ್ನು ವ್ಯಂಗ್ಯವಾಡಿದರು. 

ಶಾರುಖ್‌ನಂತೆ ಭರವಸೆ ಕೊಟ್ಟ ಪಿಎಂ ಮೋದಿ: “ನರೇಂದ್ರ ಮೋದಿ ಆರಂಭದಲ್ಲಿ ಡಿಡಿಎಲ್‌ಜೆ ಸಿನಿಮಾದ ಶಾರುಖ್‌ಖಾನ್‌ನಂತೆ ಅಚ್ಛೇ ದಿನ್‌ ಭರವಸೆ ಕೊಟ್ಟರು. ಆದರೆ, ಆ ಭರವಸೆ ಯನ್ನು ಈಡೇರಿಸದೆ ಶೋಲೆಯ ಗಬ್ಬರ್‌ಸಿಂಗ್‌ನಂತೆ ಕಾಣಿಸುತ್ತಿದ್ದಾರೆ’! ಮೋದಿ ಅವರನ್ನು ಸಿನಿಮೀಯ ಮಾತಿ ನಲ್ಲಿ ಟೀಕಿಸಿದ್ದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ.

ದತ್ತುಪುತ್ರ’ಕ್ಕೆ ತಿರುಗೇಟು: “ಮೋದಿ ಎಲ್ಲಿಗೆ ಹೋಗಲಿ, ಆ ಪ್ರದೇಶಕ್ಕೆ ಹೋಲಿಸಿಕೊಂಡು ಮಾತಾಡುತ್ತಾರೆ. ವಾರಾಣಸಿಯ ದತ್ತುಪುತ್ರ ಎಂದು ಕರೆದುಕೊಂಡಿದ್ದಾರೆ. ಸಂಬಂಧ ಕಲ್ಪಿಸಿಕೊಳ್ಳುವುದರಿಂದ ಯಾವುದೇ ಅಭಿವೃದ್ಧಿ ಆಗದು’ ಎಂದು ಮೋದಿ ಅವರ “ದತ್ತುಪುತ್ರ’ ಹೇಳಿಕೆಗೆ ರಾಹುಲ್‌ ತಿರುಗೇಟು ನೀಡಿದ್ದಾರೆ.

ಟಾಪ್ ನ್ಯೂಸ್

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

B. S. Yediyurappa ಕುತಂತ್ರಿಗಳಿಗೆ ಜನರಿಂದ ತಕ್ಕ ಪಾಠ

B. S. Yediyurappa ಕುತಂತ್ರಿಗಳಿಗೆ ಜನರಿಂದ ತಕ್ಕ ಪಾಠ

Channapatna ಆಸ್ಪತ್ರೆಯಲ್ಲಿ ಸ್ಟೆತೊಸ್ಕೋಪ್‌ ಹಿಡಿದ ಸಂಸದ ಡಾ| ಮಂಜುನಾಥ್‌Channapatna ಆಸ್ಪತ್ರೆಯಲ್ಲಿ ಸ್ಟೆತೊಸ್ಕೋಪ್‌ ಹಿಡಿದ ಸಂಸದ ಡಾ| ಮಂಜುನಾಥ್‌

Channapatna ಆಸ್ಪತ್ರೆಯಲ್ಲಿ ಸ್ಟೆತೊಸ್ಕೋಪ್‌ ಹಿಡಿದ ಸಂಸದ ಡಾ| ಮಂಜುನಾಥ್‌

ಆರೋಗ್ಯ ಇಲಾಖೆ ಸಿಬಂದಿ ವರ್ಗಾವಣೆಗೆ ಅಧಿಸೂಚನೆ

ಆರೋಗ್ಯ ಇಲಾಖೆ ಸಿಬಂದಿ ವರ್ಗಾವಣೆಗೆ ಅಧಿಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewwqe

Manipur ಸಿಎಂ ಬಿರೇನ್‌ ಸಿಂಗ್‌ ನಿವಾಸದ ಬಳಿ ಬೆಂಕಿ ಆಕಸ್ಮಿಕ

1-bk

ಮಲಿವಾಲ್‌ ಮೇಲಿನ ಹಲ್ಲೆ: ಕೇಜ್ರಿ ಆಪ್ತನಿಗೆ ಮತ್ತೆ ನ್ಯಾಯಾಂಗ ಬಂಧನ

1-dsdsadsa

Love ಮಾಡಿದ ಹುಡುಗಿ ಲಗ್ನ ಆಗಲು ಕೆಲಸ ಬೇಕು: ಅರ್ಜಿ ಫೋಟೋ ವೈರಲ್‌

1-asdsad

Noida ಮಹಿಳೆ ಖರೀದಿಸಿದ ಐಸ್‌ಕ್ರೀಂನಲ್ಲಿ ಹುಳ ಪತ್ತೆ!

police crime

Odisha; ಪಾದ್ರಿಗಳಿಗೆ ಹಲ್ಲೆ: ಚರ್ಚ್‌ನ 10 ಲಕ್ಷ ರೂ. ಲೂಟಿ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

1-sadadasdsd

PM ಮೋದಿಯವರೊಂದಿಗೆ ಕೃಷಿ ಸಂವಾದಕ್ಕೆ ಯಲ್ಲಾಪುರದ ಲತಾ ಹೆಗಡೆ ಆಯ್ಕೆ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

1-wewwqe

Manipur ಸಿಎಂ ಬಿರೇನ್‌ ಸಿಂಗ್‌ ನಿವಾಸದ ಬಳಿ ಬೆಂಕಿ ಆಕಸ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.