

Team Udayavani, Jul 9, 2018, 12:21 PM IST
ಹೈದರಾಬಾದ್ : ಹಸೆ ಮಣೆ ಏರಿದ 23ರ ಹರೆಯದ ನೂತನ ವಧುವಿಗೆ ವರನು ಮಂಗಲ ಸೂತ್ರ ಕಟ್ಟಿದ ಒಡನೆಯೇ, ವಧು ಮದುವೆ ಮಂಟಪದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತ ಪಟ್ಟ ಕರುಣಾಜನಕ ಘಟನೆ ಮೊನ್ನೆ ಶನಿವಾರ ಜು.7ರಂದು ತೆಲಂಗಾಣ ಪಟ್ಟಣದಲ್ಲಿ ನಡೆದಿದೆ.
ತೆಲಂಗಾಣದ ಕರ್ನೂಲ್ ಜಿಲ್ಲೆಯ ಅಚಾಮ್‌ಪೆಟ್ ಪಟ್ಟಣದಲ್ಲಿ ಈ ದುರ್ಘಟನೆ ನಡೆಯಿತು. ಮೃತ ಪಟ್ಟ ವಧುವಿನ ಹೆಸರು ಕೊಂಡಿ ನಿರಂಜನಮ್ಮ ಅಲಿಯಾಸ್ ಲಕ್ಷ್ಮೀ. ವರ ವೆಂಕಟೇಶ್ ಅವರು ಮಂಗಲ ಸೂತ್ರ ಕಟ್ಟಿದ ಒಡನೆಯೇ ವಧು ನಿರಂಜನಮ್ಮ ಹೃದಯಾಘಾತಕ್ಕೆ ಗುರಿಯಾಗಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಮೃತಪಟ್ಟರು. ಮದುವೆ ಸಮಾರಂಭವನ್ನು ವಧುವಿನ ಮನೆಯಲ್ಲೇ ಏರ್ಪಡಿಸಲಾಗಿತ್ತು.
ವರನು ತಾಳಿ ಕಟ್ಟಿದ ಬಳಿಕ ಮನೆಯವರೆಲ್ಲ ನೂತನ ವಧು-ವರನ ಮೇಲೆ ಅಕ್ಷತೆ ಹಾಕಿದ ಬಳಿಕ ಪುರೋಹಿತರು ಅರುಂಧತಿ ನಕ್ಷತ್ರ ನೋಡಲು ಎದ್ದೇಳಿ ಎಂದು ಹೇಳಿದರು. ಆದರೆ ಅಷ್ಟರೊಳಗಾಗಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದ ವಧು ನಿರಂಜನಮ್ಮ ಮೇಲೇಳಲೇ ಇಲ್ಲ. ಒಡನೆಯೇ ಮನೆಯವರು ವಧುವನ್ನು ಆಸ್ಪತ್ರೆಗೆ ಒಯ್ದರು. ಆದರೆ ಆಕೆ ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ವಧುವಿನ ಹಠಾತ್ ಸಾವಿಗೆ ಎರಡೂ ಕಡೆಯವರು ಯಾವುದೇ ಸಂದೇಹ ವ್ಯಕ್ತಪಡಿಸಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Ad
ಖಾಸಗಿ ವಿಡಿಯೋ ಹೆಸರಲ್ಲಿ ಬ್ಲಾಕ್‌ಮೇಲ್: ಕಾರು, 3ಕೋಟಿ ಹಣ ಕಳೆದುಕೊಂಡು ಆತ್ಮಹತ್ಯೆ ಶರಣಾದ CA
Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!
Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು
Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ
ಅಂತರಿಕ್ಷದಿಂದ ಶುಭಾಂಶು ವಾಪಸಿಗೆ ದಿನಗಣನೆ ಶುರು
You seem to have an Ad Blocker on.
To continue reading, please turn it off or whitelist Udayavani.