ಹೃಷೀಕೇಶ: ಯೋಗ ಶಿಕ್ಷಕನಿಂದ ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ
Team Udayavani, Jul 6, 2018, 5:15 PM IST
ಹೃಷೀಕೇಶ: ಯೋಗಾಭ್ಯಾಸ ತರಬೇತಿ ನೀಡುತ್ತಿದ್ದಾಗಲೇ ಅಮೆರಿಕದ ಪ್ರವಾಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಯೋಗ ಶಿಕ್ಷಕನೊಬ್ಬನನ್ನು ಬಂಧಿಸಿದ್ದಾರೆ.
ಅಮೆರಿಕನ್ ಮಹಿಳೆಯು ದಾಖಲಿಸಿರುವ ದೂರಿನ ಆಧಾರದಲ್ಲಿ ಪೊಲೀಸರು ಯೋಗ ಶಿಕ್ಷಕ ಮನೋಜ್ ಬಢಾನಿಯನ್ನು ನಿನ್ನೆ ಬಂಧಿಸಿದರು.
ಲಕ್ಷ್ಮಣ ಝೂಲಾ ಪ್ರದೇಶದಲ್ಲಿನ ಟೂರಿಸ್ಟ್ ಹೋಮ್ ಒಂದರಲ್ಲಿ ಯೋಗ ತರಬೇತಿ ನೀಡುತ್ತಿದ್ದಾಗಲೇ ಆರೋಪಿ ಶಿಕ್ಷಕನು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನೆಂದು ಪೊಲೀಸರು ತಿಳಿಸಿದ್ದಾರೆ.