ವಡಾಲಾ ಮಠದಲ್ಲಿ ಪಲ್ಕಕ್ಕಿ ಉತ್ಸವ

Team Udayavani, May 17, 2019, 4:27 PM IST

ಮುಂಬಯಿ: ಜಿ.ಎಸ್‌.ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಟ್ರಸ್ಟೀ ಶಾಂತಾರಾಮ್‌ ಭಟ್‌, ಪನ್ವೇಲ್‌ನ ಶಾಂತಿ ಕುಂಜ್‌ ಸೇವಾಶ್ರಮದ ಆಡಳಿತ ಸಮಿತಿ ಸದಸ್ಯ ವೆಂಕಟೇಶ್‌ ಪ್ರಭು ಮತ್ತಿತರರ ಯಜಮಾನ ಸೇವೆಯ ಭಾಗವಾಗಿ ಮೇ 12ರಂದು ನಗರದ ಪ್ರಸಿದ್ಧ ವಡಾಲಾ ಮಠದಲ್ಲಿ ಪಲ್ಕಕ್ಕಿ ಉತ್ಸವ ನಡೆಯಿತು.

ಶ್ರೀ ರಾಮ ಮಂದಿರದ ಮಾಜಿ ಅಧ್ಯಕ್ಷರಾದ ಜಿ.ಎಸ್‌. ಭಟ್‌, ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಎನ್‌. ಎನ್‌. ಪಾಲ್‌, ಗಣೇಶೋತ್ಸವ ಸಮಿತಿಯ ಟ್ರಸ್ಟೀ ಉಮೇಶ್‌ ಪೈ, ಗೋಕರ್ಣ ಪರ್ತಗಾಳಿ ಮಠದ ಮಂದಿರ ಸಮಿತಿ ಮುಖ್ಯಸ್ಥ ವಿಜಯ್‌ ನಾಯಕ್‌, ಕೃಷ್ಣಾನಂದ ಶೆಣೈ ಮತ್ತು ವಡಾಲ ಮಠದ ವಕ್ತಾರ ಕಮಲಾಕ್ಷ ಸಾರಾಫ್‌ ಉಪಸ್ಥಿತರಿದ್ದರು. ವೇದಮೂರ್ತಿ ಗೋವಿಂದ ಆಚಾರ್ಯ, ವೇದಮೂರ್ತಿ ಅನಂತ್‌ ಭಟ್‌ ಹಾಗೂ ಇತರ ಪುರೋಹಿತರಿಂದ ಪೂಜೆ, ಅಷ್ಟಾವಾದನ ಸೇವೆ ಮತ್ತು ಆರತಿ ನಡೆಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ